Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80052

ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಹ್ಯಾಕ್

$
0
0

– 8 ನಿಂದನಾತ್ಮಕ ಟ್ವೀಟ್‍ಗಳನ್ನ ಪೋಸ್ಟ್ ಮಾಡಿದ ಹ್ಯಾಕರ್ಸ್ 

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿದೆ. ಬುಧವಾರ ರಾತ್ರಿ 8.30ರ ಸುಮಾರಿಗೆ ಹ್ಯಾಕರ್‍ಗಳು ರಾಹುಲ್ ಗಾಂಧಿಯ ಅಧಿಕೃತ ಟ್ವಿಟ್ಟರ್ ಅಕೌಂಟ್ @OfficeOfRG ಹ್ಯಾಕ್ ಮಾಡಿ ಎಂಟು ನಿಂದನಾತ್ಮಕ ಸಂದೇಶಗಳನ್ನ ಪೋಸ್ಟ್ ಮಾಡಿದ್ದಾರೆ.

rg-twitter-1 rg-twitter-2 rg-twitter-3

ಈ ಪೈಕಿ ಒಂದು ಪೋಸ್ಟ್ ನಲ್ಲಿ ನನ್ನ ಕುಟುಂಬ ಭ್ರಷ್ಟಾಚಾರಿಗಳ, ಹುಚ್ಚರ ಗುಂಪಾಗಿದೆ ಎಂದು ಬರೆಯಲಾಗಿತ್ತು. ಒಂದು ಗಂಟೆಯೊಳಗೆ ಎಲ್ಲಾ 8 ನಿಂದನಾತ್ಮಕ ಟ್ವೀಟ್‍ಗಳನ್ನ ಡಿಲೀಟ್ ಮಾಡಲಾಗಿತ್ತು. ನಂತರ ಮತ್ತೆ ಹೊಸ ಟ್ವೀಟ್‍ಗಳು ಬಂದವು. ಹ್ಯಾಕರ್‍ಗಳು ರಾಹುಲ್ ಗಾಂಧಿಯ ಪ್ರೊಫೈಲ್ ಫೋಟೋವನ್ನು ಕೂಡ ತೆಗೆದು, ಖಾತೆಯ ಹೆಸರನ್ನು ಕೂಡ ಬದಲಿಸಿದ್ದರು.

rg-twitter

ಸದ್ಯಕ್ಕೆ ಎಲ್ಲಾ ನಿಂದನಾತ್ಮಕ ಟ್ವೀಟ್‍ಗಳನ್ನು ಡಿಲೀಟ್ ಮಾಡಲಾಗಿದ್ದು, ಖಾತೆಯನ್ನು ರೀಸ್ಟೋರ್ ಮಾಡಲಾಗಿದೆ. ಈ ಬಗ್ಗೆ ನಗರದ ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡುವುದಾಗಿ ಕಾಂಗ್ರೆಸ್‍ನ ಮಾಧ್ಯಮ ಸಂಯೋಜಕರಾದ ಪ್ರವೀಣ್ ಝಾ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.


Viewing all articles
Browse latest Browse all 80052


<script src="https://jsc.adskeeper.com/r/s/rssing.com.1596347.js" async> </script>