Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80032

ಬೆಂಗ್ಳೂರಲ್ಲಿದ್ದರೆ ಕಡ್ಲೆಕಾಯಿ ಪರಿಷೆಗೆ ಬಂದು ಹೋಗಿ

$
0
0

ಬೆಂಗಳೂರು: ನಗರದ ಬಸವನಗುಡಿಯಲ್ಲಿ ಐತಿಹಾಸಿಕ ಕಡ್ಲೆಕಾಯಿ ಪರಿಷೆಗೆ ಕ್ಷಣಗಣನೆ, ಕಡ್ಲೆಯ ಗುಂಗಿನಲ್ಲಿ ರಂಗೇರಿದೆ ಬಸವನಗುಡಿ ಬೀದಿ, ಕಡ್ಲೆಕಾಯಿ ಕೊಂಚ ಕಾಸ್ಟ್ಲಿ, ಬಡವರ ಬಾದಾಮಿಗೂ ತಟ್ಟಿದೆ ನೋಟು ಬ್ಯಾನಿನ ಬಿಸಿ, ಬನ್ನಿ ಕಡ್ಲೆಕಾಯಿ ಲೋಕದಲ್ಲಿ ಏನಾಗ್ತಿದೆ. ಒಂದು ಸುತ್ತು ನೋಡ್ಕೊಂಡು ಬರೋಣ.

ಕಡ್ಲೆಕಾಯಿ, ಕಡ್ಲೆಕಾಯಿ, ಕಡ್ಲೆಕಾಯಿ, ಸೇರಿಗೆ ಮೂವತ್ತು, ಹಸಿದಾದ್ರೇ ಐವತ್ತು, ಟೈಂ ಪಾಸ್ ಕಡ್ಲೆಕಾಯಿ ಟೇಸ್ಟಿ ಕಡ್ಲೆಕಾಯಿ, ಬೆಂಗಳೂರಿಗರ ಬಹುನಿರೀಕ್ಷಿತ ಕಡ್ಲೆಕಾಯಿ ಪರಿಷೆ ಶುರುವಾಗಿಯೇ ಬಿಡ್ತು. ನಾಳೆ ಗಣೇಶನಿಗೆ ಕಡಲೇಕಾಯಿ ಅಭಿಷೇಕ, ಸೋಮವಾರದಿಂದ ಪರಿಷೆಗೆ ಚಾಲನೆ ಸಿಕ್ರೂ ಜಾತ್ರೆಯ ರಂಗು ಇಂದಿನಿಂದಲೇ ಶುರುವಾಗಿದೆ. ಹಸಿ ಕಡ್ಲೆಕಾಯಿ, ಹುರಿದ ಕಡ್ಲೆಕಾಯಿ, ಬೇಯಿಸಿದ ಕಡ್ಲೆಕಾಯಿ.. ಹೀಗೆ ಕಡಲೆ ಕಾಯಿ ಪರಿಷೆಗೆ ಬಸವನಗುಡಿ ಬೀದಿ ರೆಡಿಯಾಗಿದೆ.

ಬಡವರ ಬಾದಾಮಿ ಈ ಬಾರಿ ಕೊಂಚ ಕಾಸ್ಟ್ಲಿಯಾಗಿದೆ. ಒಂದೇ ಕೆಜಿ ಕಡ್ಲೆಕಾಯಿ ಕಳೆದ ವರ್ಷ 20 ರೂಪಾಯಿಯಿಂದ 25 ರೂಪಾಯಿ ಇತ್ತು. ಆದ್ರೇ ಈ ಬಾರಿ 30ರಿಂದ 35 ರೂಪಾಯಿಯಾಗಿದೆ. ಈ ಬಾರಿ ಕಡ್ಲೆಕಾಯಿ ಪೂರೈಕೆ ಕುಸಿತ ಕಂಡಿದೆ. ಇನ್ನು ನೋಟು ಬ್ಯಾನಿನ ಬಿಸಿ ಪರಿಷೆಗೂ ತಟ್ಟಿದ್ದು, ವ್ಯಾಪಾರಿಗಳು ಈ ಬಾರಿ ವ್ಯಾಪಾರ ಏನಾಗುತ್ತೋ ಅನ್ನೋ ಆತಂಕದಲ್ಲಿದ್ದಾರೆ. ಏನೇ ಇರಲಿ ಐತಿಹಾಸಿಕ ಹಬ್ಬಕ್ಕೆ, ಗ್ರಾಮೀಣ ಸೊಗಡಿನ ಜಾತ್ರೆಗೆ ಬಸವನಗುಡಿ ಸಜ್ಜಾಗಿದೆ. ನೀವೂ ಬೆಂಗಳೂರಲ್ಲಿದ್ದರೆ ಬಸವನಗುಡಿಗೆ ಬನ್ನಿ, ಕಡ್ಲೆಕಾಯಿ ತಿನ್ನುತ್ತಾ ಜಾತ್ರೆನಾ ಎಂಜಾಯ್ ಮಾಡಿ.


Viewing all articles
Browse latest Browse all 80032


<script src="https://jsc.adskeeper.com/r/s/rssing.com.1596347.js" async> </script>