Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

500ರೂ. ನೋಟಿನ ಮುದ್ರಣದಲ್ಲಿ ದೋಷ: ತಪ್ಪೊಪ್ಪಿಕೊಂಡ ಆರ್‍ಬಿಐ

$
0
0

ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ 500ರೂ. ಹಾಗೂ 1,000ರೂ. ನೋಟುಗಳನ್ನು ನಿಷೇಧ ಮಾಡಿದ್ದು, ಇದೀಗ ಮರು ಮುದ್ರಣಗೊಂಡಿರುವ 500ರೂ. ಮುಖಬೆಲೆಯ ನೋಟಿನಲ್ಲಿ ತಪ್ಪುಗಳಾಗಿರುವುದನ್ನು ಆರ್‍ಬಿಐ ಒಪ್ಪಿಕೊಂಡಿದೆ.

ಹೆಚ್ಚಿನ ಸಂಖ್ಯೆಯಲ್ಲಿ ನೋಟು ಮುದ್ರಣ ಮಾಡುತ್ತಿರುವ ಹಿನ್ನಲೆಯಲ್ಲಿ ತಪ್ಪುಗಳಾಗಿರುವುದು ಸಹಜ. ಆದರೆ ಈ ಬಗ್ಗೆ ಜನ ಆತಂಕಪಡುವ ಅವಶ್ಯಕತೆ ಇಲ್ಲ. ಈ ನೋಟುಗಳನ್ನು ಕೂಡ ಚಲಾವಣೆ ಮಾಡಬಹುದು ಒಂದು ವೇಳೆ ಎಲ್ಲಿಯೂ ಚಲಾವಣೆಯಾಗದಿದ್ದರೆ ಆರ್‍ಬಿಐ ಶಾಖೆಗೆ ವಾಪಾಸ್ ನೀಡಿ ಬೇರೆ ನೋಟುಗಳನ್ನು ಪಡೆದುಕೊಳ್ಳಿ ಎಂಬುವುದಾಗಿ ಆರ್‍ಬಿಐ ಸ್ಪಷ್ಟಪಡಿಸಿದೆ.

ಹೊಸ 500ರೂ. ನೋಟಿನಲ್ಲಿದ್ದ ದೋಷಗಳೇನು?

* ಮುದ್ರಣ ಶೇಡ್ ಆಗಿದ್ದು, ಡಬಲ್ ಡಬಲ್ ಕಾಣಿಸುತ್ತಿದೆ.

* ನೋಟಿನ ಸಂಖ್ಯೆಯ ಸ್ಥಾನ ಬದಲಾಗಿದೆ.

* ಮಹಾತ್ಮಾ ಗಾಂಧೀಜಿ ಭಾವಚಿತ್ರ ಎಡಕ್ಕೆ ಸರಿದಿದೆ.

* ಆರ್‍ಬಿಐ ಬ್ಯಾಂಕ್ ಲಾಂಛನ ಸರಿದಿದೆ.

* ಆರ್‍ಬಿಐ ಗವರ್ನರ್ ಘೋಷಣೆ ಭದ್ರತಾ ಎಳೆಗೆ ಅಂಟಿಕೊಂಡಿದೆ.

ಇಂತಹ ನೋಟುಗಳು ಜನರ ಕೈ ಸೇರುತ್ತಿದ್ದಂತೆಯೇ ಜನ ಫೋಟೋ ಸಮೇತ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿ `ಸರ್ಕಾರ ಜನರಿಗೆ ನಕಲಿ ನೋಟುಗಳನ್ನು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಆರ್‍ಬಿಐ ಪ್ರತಿಕ್ರಿಯಿಸಿದ್ದು, ತನ್ನ ತಪ್ಪನ್ನು ತನ್ನ ತಪ್ಪನ್ನು ಒಪ್ಪಿಕೊಂಡು ಜನರಲ್ಲಿ ಮೂಡಿದ್ದ ಗೊಂದಲವನ್ನು ಪರಿಹರಿಸಲು ಯತ್ನಿಸಿದೆ.


Viewing all articles
Browse latest Browse all 80042


<script src="https://jsc.adskeeper.com/r/s/rssing.com.1596347.js" async> </script>