ಮಡಿಕೇರಿ: ಕರ್ನಾಟಕ ಸರ್ಕಾರ ಆಚರಿಸಲು ಮುಂದಾಗಿರುವ ಟಿಪ್ಪು ಜಯಂತಿ ವಿರೋಧಿಸಿ ನವೆಂಬರ್ 10ಕ್ಕೆ ಕೊಡಗು ಬಂದ್‍ಗೆ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ.
ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಅಭಿಮನ್ಯು ಕುಮಾರ್ ಪ್ರತಿಕ್ರಿಯಿಸಿ, ರಾಜ್ಯದೆಲ್ಲೆಡೆ ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಆಚರಣೆಗೆ ಮುಂದಾಗುತ್ತಿದೆ. ಕೊಡಗಿನಲ್ಲಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡಲು ಬಿಡುವುದಿಲ್ಲ. ಸರ್ಕಾರ 144 ಸೆಕ್ಷನ್ ಹಾಕಿದರೂ ಜೈಲಿಗೆ ಹೋಗಲು ನಾವು ಸಿದ್ಧ. ಹೀಗಾಗಿ ಗುರುವಾರ ಕೊಡಗು ಬಂದ್‍ಗೆ ಕರೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಳೆದ ವರ್ಷ ನ.10ರಂದು ಕುಟ್ಟಪ್ಪ ಹುತಾತ್ಮರಾದ ದಿನ. ಹೀಗಾಗಿ ನಾಡಿದ್ದು ಗುರುವಾರ ಪ್ರತಿಯೊಂದು ಗ್ರಾಮದಲ್ಲಿ ಕುಟ್ಟಪ್ಪ ಹುತಾತ್ಮ ದಿನಾಚರಣೆಯನ್ನಾಗಿ ನಾವು ಆಚರಿಸುತ್ತೇವೆ. ವಿರೋಧ ನಡುವೆಯೂ ಸರ್ಕಾರ ಆಚರಣೆ ನಡೆಸಿ ಅಹಿತಕರ ಘಟನೆ ನಡೆದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಅವರು ಎಚ್ಚರಿಕೆ ನೀಡಿದರು.