ಬೀಜಿಂಗ್: ನೀವು ಬಾರ್ಬಿ ದಿ ರುಪಾಂಝಲ್ ಕಾರ್ಟೂನ್ ಪಾತ್ರವನ್ನ ಟಿವಿಯಲ್ಲಿ ನೋಡಿರ್ತೀರ. ಆಕೆಯಂತೆ ನೀಳವಾದ ಕೂದಲು ಇದ್ದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಅಂತ ಅನ್ನಿಸದೆ ಇರದು. ರಿಯಲ್ ಲೈಫ್‍ನಲ್ಲಿ ಮೊಣಕಾಲಿನುದ್ದದಷ್ಟು ಕೂದಲು ಇರೋರನ್ನೂ ನೋಡಿರ್ತೀರ. ಆದ್ರೆ ಮಹಿಳೆಯೊಬ್ಬರು ತನಗಿಂತಲೂ ಉದ್ದವಿರುವ ತಲೆ ಕೂದಲನ್ನ ಚೀನಾದ ಪಾರ್ಕ್‍ವೊಂದರಲ್ಲಿ ಪ್ರದರ್ಶಿಸಿದ್ದಾರೆ.
60 ವರ್ಷದ ಮಹಿಳೆ ಲೀ ಲಿನ್ಮೀ ತನ್ನ ತಲೆ ಕೂದಲನ್ನು ಅಳತೆ ಮಾಡಿದಾಗ ಬರೋಬ್ಬರಿ 11 ಅಡಿ ಉದ್ದವಿತ್ತು. ಕಳೆದ ಭಾನುವರ ಶಾಂಕ್ಸಿ ಪ್ರಾಂತ್ಯದ ತಯುವಾನ್ ನ ಪಾರ್ಕ್‍ವೊಂದರಲ್ಲಿ ಆಕೆಯ ಕೂದಲನ್ನ ಪ್ರತಿ ವರ್ಷದಂತೆ ಅಳತೆ ಮಾಡಲಾಯ್ತು.
ಕಳೆದ ವರ್ಷ ಅಳತೆ ಮಾಡಿದ ನಂತರ ಆಕೆಯ ಕೂದಲು ಇನ್ನೂ 19 ಇಂಚು ಉದ್ದ ಬೆಳೆದಿರುವುದಾಗಿ ಮಹಿಳೆ ತಿಳಿಸಿದ್ರು.
ಮಹಿಳೆ ಕಳೆದ 18 ವರ್ಷದಿಂದ ತನ್ನ ತಲೆಗೂದಲನ್ನ ಕಟ್ ಮಾಡಿಲ್ಲ. ಚೀನಾದ ಕ್ಸೀ ಕ್ಯೂಪಿಂಗ್ ಎಂಬಾಕೆ 18 ಅಡಿ 5.54 ಇಂಚು ಉದ್ದದ ಕೂದಲನ್ನ ಹೊಂದಿದ್ದು ಗಿನ್ನೀಸ್ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯನ್ನ ಮುರಿಯಬೇಕೆಂದು ಮಹಿಳೆ ಕೂದಲನ್ನ ಕಟ್ ಮಾಡದೇ ಆರೈಕೆ ಮಾಡ್ತಿದ್ದಾರೆ