ನವದೆಹಲಿ: ನಾವು ಇಷ್ಟ ಪಡೋ ಸೆಲೆಬ್ರಿಟಿಗಳು ಒಂದು ಬಾರಿ ನಮ್ಮ ಕಣ್ಣಮುಂದೆ ಬಂದರೆ ಹೇಗಾದರೂ ಮಾಡಿ ಅವರ ಜೊತೆ ಒಂದು ಫೋಟೋ ತೆಗೆದುಕೊಳ್ಳಬೇಕೆಂಬ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ.
ಅಂತರಾಷ್ಟ್ರೀಯ ಏಕದಿನ ಪಂದ್ಯದ ಕ್ಯಾಪ್ಟನ್ ಧೋನಿ ಅಭಿಮಾನಿಯೊಬ್ಬಳು ಹರಸಾಹಸ ಮಾಡಿ ಧೋನಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾಳೆ. ಎಂಎಸ್ ಧೋನಿ ಮುಂಬೈಗೆ ತೆರಳಲು ರಾಂಚಿ ಏರ್‍ಪೋರ್ಟ್‍ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಯಾಗಿರುವ ಆರಾಧ್ಯ ಎಂಬಾಕೆ ಧೋನಿಯನ್ನು ಭೇಟಿಯಾಗಲು ತನ್ನ ಸ್ಕೂಟಿಯಲ್ಲಿ ಬೆನ್ನಟ್ಟಿದ್ದಾಳೆ. ಮಾತ್ರವಲ್ಲದೇ ಆಕೆಯ ಕನಸಿನಂತೆ ಧೋನಿ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕೆಂಬ ಹಂಬಲವನ್ನು ಅವರ ಮುಂದಿಟ್ಟಿದ್ದಾಳೆ.
ಧೋನಿ ಆಕೆಯ ಜೊತೆ ಫೋಟೋ ತೆಗೆದುಕೊಳ್ಳಲು ಅನುಮತಿ ನೀಡಿದ್ದು, ಯುವತಿ ಕೊನೆಗೂ ತನ್ನ ಆಸೆಯಂತೆ ಧೋನಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.