ಮಂಡ್ಯ: ರೈತರ ಕೆಲಸ ಮಾಡಲು ವಿಫಲರಾದ ಎಂಜಿನಿಯರ್ ವಿರುದ್ಧ ತಾಳ್ಮೆ ಕಳೆದುಕೊಂಡ ಕೆಆರ್.ಪೇಟೆ ಶಾಸಕ ನಾರಾಯಣ ಗೌಡ ಹಲ್ಲೆಗೆ ಮುಂದಾಗಿದ್ದಾರೆ.
ಸರ್ಕಾರಕ್ಕೆ ತಾಲೂಕಿನ ಬರ ಪರಿಸ್ಥಿತಿಯನ್ನು ಸರಿಯಾಗಿ ತಿಳಿಸದ ಎಂಜಿನಿಯರ್ ನಾರಾಯಣ ವಿರುದ್ಧ ಆಕ್ರೋಶಗೊಂಡು ಶಾಸಕ ನಾರಾಯಣ ಗೌಡ ರೈತರ ಜೊತೆ ಹೇಮಾವತಿ ಜಲಾಶಯ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ಕಛೇರಿಗೆ ಚರ್ಚಿಸಲು ಆಗಮಿಸಿದ್ದರು
ಈ ವೇಳೆ ತಮ್ಮ ಪ್ರಶ್ನೆಗಳಿಗೆ ಎಂಜಿನಿಯರ್ ಅವರಿಂದ ಸಮರ್ಪಕ ಉತ್ತರ ಬಾರದ ಕಾರಣ ನಾರಾಯಣ ಗೌಡ ನಾರಾಯಣ ಅವರ ಮೇಲೆ ಹಲ್ಲೆಗೆ ಮುಂದಾದರು. ಕೂಡಲೇ ಪೊಲೀಸರ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ವಿಚಾರ ತಿಳಿದು ಗೋರೂರು ಜಲಾಶಯದ ಮುಖ್ಯ ಎಂಜಿನಿಯರ್ ಪ್ರಸನ್ನ ಅವರು ಸ್ಥಳಕ್ಕೆ ಭೇಟಿ ನೀಡಿ ಹೇಮಗಿರಿ ನಾಲೆ ಮತ್ತು ಮಂದಗೆರೆ ನಾಲೆಗಳಿಗೆ ನೀರು ಹರಿಸುವುದಾಗಿ ಭರವಸೆ ನೀಡಿದರು.