Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80022

ನೀರಿನಲ್ಲಿ ಮುಳುಗುತ್ತಿದ್ದಾನೆಂದು ತರಬೇತುದಾರನ ರಕ್ಷಣೆಗೆ ಧಾವಿಸಿದ ಆನೆಮರಿ! ವಿಡಿಯೋ ವೈರಲ್

$
0
0

ಬ್ಯಾಂಕಾಕ್: ಪ್ರಾಣಿಗಳು ರೊಚ್ಚಿಗೆದ್ದರೆ ಮನುಷ್ಯನ ಜೀವ ತೆಗೆಯುತ್ತವೆ. ಹಾಗೇ ಅವು ಮನುಷ್ಯನ ಜೀವ ಉಳಿಸಿರೋ ಘಟನೆಗಳೂ ಕೂಡ ಸಾಕಷ್ಟಿವೆ. ಆನೆ ಮರಿಯೊಂದು ತನ್ನ ತರಬೇತುದಾರ ನೀರಿನಲ್ಲಿ ಮುಳುಗುತ್ತಿದ್ದಾನೆ ಎಂದು ಭಾವಿಸಿ ಆತನ ರಕ್ಷಣೆಗಾಗಿ ಓಡಿ ಬರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಥೈಲ್ಯಾಂಡ್‍ನ ಎಲಿಫ್ಯಾಂಟ್ ನೇಚರ್ ಪಾರ್ಕ್‍ನಲ್ಲಿ ಈ ಘಟನೆ ನಡೆದಿದೆ. ಖಾಮ್ ಲಾ ಎಂಬ ಹೆಸರಿನ ಆನೆ ತನ್ನ ತರಬೇತುದಾರ ಡ್ಯಾರಿಕ್‍ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಡ್ಯಾರಿಕ್ ಆರಾಮಾಗಿ ನೀರಿನಲ್ಲಿ ಈಜಾಡುತ್ತಿದ್ದಾಗ ಆತ ನೀರಿನಲ್ಲಿ ಮುಳುಗುತ್ತಿದ್ದಾರೆಂದು ಭಾವಿಸಿದ ಆನೆ ಸಹಾಯಕ್ಕಾಗಿ ಓಡೋಡಿ ಬರುತ್ತದೆ. ಡ್ಯಾರಿಕ್‍ನ ಸಮೀಪ ತಲುಪುತ್ತಿದ್ದಂತೆ ಆ ಆನೆ ಆತನನ್ನು ಅಪ್ಪಿಕೊಳ್ಳೋ ಅಪೂರ್ವ ಕ್ಷಣ ವಿಡಿಯೋದಲ್ಲಿ ಸೆರೆಯಾಗಿದೆ.

ಕಳೆದ ವಾರ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಆಗಿರೋ ಈ ವಿಡಿಯೋ ಈವರೆಗೆ 38 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.


Viewing all articles
Browse latest Browse all 80022


<script src="https://jsc.adskeeper.com/r/s/rssing.com.1596347.js" async> </script>