ಚಿತ್ರದುರ್ಗ: ಕಿತ್ತು ತಿನ್ನೋ ಬಡತನ. ಸ್ವಾವಲಂಬಿಯಾಗಿ ಬದುಕೋ ಆಸೆ ಆದ್ರೆ ಅಂಗವೈಕಲ್ಯವೇ ಶತ್ರು. ಅಂಗವೈಕಲ್ಯವಿದ್ರೂ ಸ್ವತಂತ್ರವಾಗಿ ಬದುಕಬೇಕು. ತನ್ನಿಬ್ಬರೂ ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸ್ಬೇಕು ಅನ್ನೋ ಹಂಬಲ. ಆದ್ರೆ ಆರ್ಥಿವಾಗಿ ಸಂಕಷ್ಟಕ್ಕೆ ಸಿಲುಕಿರುವ ಮಹಿಳೆ ಸಹಾಯ ನಿರೀಕ್ಷೆಯಲ್ಲಿದ್ದಾರೆ.
ಹಿರಿಯೂರು ತಾಲೂಕಿನ ಗಾಯತ್ರಿಪುರದ ಆಂಜಿಮ್ಮ ಹುಟ್ಟು ಅಂಗವಿಕಲೆ. ಇವ್ರು ಬಾಲ್ಯದಲ್ಲಿದ್ದಾಗಲೇ ತಂದೆಯನ್ನ ಕಳೆದುಕೊಂಡಿದ್ದಾರೆ. ಈಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಹಂಬಲ. ಅಲ್ಲದೆ ತಾನೂ ಸ್ವಾವಲಂಬಿಯಾಗಿ ಬದುಕಬೇಕೆಂಬ ಛಲ. ಹೊರಗೆ ಹೋಗಿ ದುಡಿಯಲು ತನ್ನೆರಡು ಕಾಲುಗಳು ಸ್ವಾಧೀನ ಕಳೆದುಕೊಂಡಿರೋದು ಇವರಿಗೆ ಅಡ್ಡಿಯಾಗಿದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಸ್ಥಳೀಯ ಶಾಸಕರು, ಜನಪ್ರತಿನಿಧಿಗಳನ್ನ ಭೇಟಿಯಾದ್ರೂ ಯಾರೂ ಕೂಡ ಇವರಿಗೆ ಸಹಾಯ ಮಾಡುವ ಮನಸ್ಸು ಮಾಡಲಿಲ್ಲ. ಯಾರಾದ್ರೂ ಸ್ವಯಂ ಉದ್ಯೋಕ್ಕೆ ಸಹಾಯ ಮಾಡ್ತಾರಾ ಅಂತಾ ಎದುರು ನೋಡ್ತಾ ಇದ್ದಾರೆ.
ಪತಿ ಕೂಲಿ ನಾಲಿ ಮಾಡಿ ತರೋ ಹಣ ಜೀವನ ನಡೆಸಲು ಸಾಲುತ್ತಿಲ್ಲ. ಅಲ್ಲದೇ ದುಡಿಯಲು ಹೊರಗೆ ಹೋದ ಪತಿ ಬರುವುದಕ್ಕೆ ಕನಿಷ್ಠ ಎರಡು ತಿಂಗಳು ಆಗುತ್ತದೆ. ಕೆಲವೊಂದು ಸಾರಿ ನೆರೆ ಹೊರೆಯವರು ತಮ್ಮಂದಿದಾದ ಸಹಾಯ ಮಾಡ್ತಾರಂತೆ. ಆದ್ರೆ ಇದು ಸ್ವಾವಲಂಬಿ ಆಂಜಿನಮ್ಮಗೆ ಇಷ್ಟವಿಲ್ಲ. ಬದಲಾಗಿ ಸ್ವಯಂ ಉದ್ಯೋಗದ ಆಸಕ್ತಿ ಇದೆ. ಯಾರಾದ್ರೂ ಆಂಜಿನಮ್ಮ ಅವರ ಸಹಾಯಕ್ಕೆ ಬಂದ್ರೆ ಅವರ ಬದುಕಿನಲ್ಲಿ ನೆಮ್ಮದಿ ಬೆಳಕು ಕಾಣಲಿದೆ ಅನ್ನೋದು ಗ್ರಾಮಸ್ಥರ ಅಭಿಪ್ರಾಯ.
ಆರ್ಥಿಕ ಸಹಾಯಕ್ಕೆ ಅಲೆದೂ ಅಲೆದು ಸುಸ್ತಾದ ಆಂಜಿನಮ್ಮ ಕುಟುಂಬ ಈಗ ದಿಕ್ಕೇ ತೋಚತಾಗಿದೆ. ಗ್ರಾಮದಲ್ಲೇ ಪುಟ್ಟ ಅಂಗಡಿ ಇಟ್ಟುಕೊಂಡ್ರೆ ಸಹಾಯವಾಗಲಿದೆ ಎನ್ನುವ ಆಸೆ ಇಟ್ಟುಕೊಂಡಿರುವ ಇವ್ರಿಗೆ ಯಾರಾದ್ರೂ ಸಹಾಯ ಮಾಡ್ತಾರಾ. ಸ್ವಾವಲಂಬಿ ಬದುಕು ಸಾಗಿಸೋಕ್ಕೆ ನೆರವಾಗ್ತಾರಾ ಕಾದು ನೋಡಬೇಕಿದೆ.