ಬಾಲಿವುಡ್‍ನ ಮೇರು ನಟ ಮೆಗಾಸ್ಟಾರ್ ಅಮಿತಾಬ್ ಬಚ್ಚನ್‍ಗೆ 74 ನೇ ಜನ್ಮದಿನದ ಸಂಭ್ರಮ. ಅಮಿತಾಬ್ ಬಚ್ಚನ್ ಇವರ ಪೂರ್ಣ ನಾಮಧೇಯ ಅಮಿತಾಬ್ ಹರಿವಂಶ್ ರಾಯ್ ಶ್ರೀನಿವಾಸ್ ಬಚ್ಚನ್. 1969-70ರ ಆಸುಪಾಸಿನಲ್ಲಿ ಆಂಗ್ರಿ ಯಂಗ್ ಮ್ಯಾನ್ ಆಗಿ ಬಾಲಿವುಡ್‍ಗೆ ಎಂಟ್ರಿ ಕೊಟ್ಟವರು. ಮೊದ-ಮೊದಲು ಪೋಷಕ ನಟನಾಗಿ ಬಣ್ಣಹಚ್ಚಿನ ಅಮಿತಾಬ್ 70-80ರ ದಶಕದಲ್ಲಿ ತನ್ನ ಅದ್ಭುತ ನಟನೆಯಿಂದ ರಾರಾಜಿಸಿದವರು.
ಅಮಿತಾಬ್ ಬಚ್ಚನ್ ಒಬ್ಬ ಬಹುಮುಖ ಪ್ರತಿಭೆ, ನಟ, ನಿರ್ಮಾಪಕ, ನಿರೂಪಕ, ಗಾಯಕ, ಹಿನ್ನಡೆ ಧ್ವನಿ ಕಲಾವಿದ ಹೀಗೆ ಎಲ್ಲಾ ವಿಚಾರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಸಕ್ರಿಯಾವಾಗಿರುವ ಸೆಲೆಬ್ರಿಟಿ ಎಂದು ಕರೆದರೂ ತಪ್ಪಾಗಲ್ಲ. 1984ರಲ್ಲಿ ಉತ್ತರ ಪ್ರದೇಶದ ಅಲಹಾಬಾದ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪರ ಸ್ಪರ್ಧಿಸಿ ಸಂಸತ್ ಸದಸ್ಯರಾಗಿ ಆಯ್ಕೆ ಆಗಿದ್ದರು.
ಇವರಿಗಾಗಿಯೇ ಪಾತ್ರಗಳು ಸೃಷ್ಠಿಯಾಗುತ್ತವೋ ಅಥವಾ ವಿಭಿನ್ನ ಪಾತ್ರಗಳನ್ನು ಮಾಡೋದಕ್ಕೇ ಅಮಿತಾಬ್ ಇದ್ದಾರೋ ಗೊತ್ತಿಲ್ಲ.ಇಡಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚು ವಿಭಿನ್ನ ಪ್ರಯೋಗಾತ್ಮಕ ಪಾತ್ರವನ್ನ ನಿರ್ವಸಿದವರು ಅಮಿತಾಬ್ ಬಚ್ಚನ್. ಇವರ ಕಲಾ ಸೇವೆಗೆ ಪದ್ಮ ಶ್ರೀ, ಪದ್ಮ ಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳ ಗೌರವ ಸಂದಿವೆ.
ಬಿಗ್-ಬಿ, ಬಾಲಿವುಡ್ ಷಹೇನ್ ಷಾ ಸೇರಿದಂತೆ ನಾನಾ ಬಿರುದುಗಳು ಇವರ ನಟನೆಯ ಕಿರಿಟಕ್ಕೆ ಮುಕುಟಗಳಿದ್ದಂತೆ. ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಮಿತಾಬ್‍ಗೆ 4 ರಾಷ್ಟ್ರಪ್ರಶಸ್ತಿ ಸೇರಿದಂತೆ ಸಾಲು ಸಾಲು ಪ್ರಶಸ್ತಿ ಪುರಸ್ಕಾರಗಳು ಬಂದಿವೆ.
ಬಿಗ್‍ಬಿಯ ಬರ್ತ್‍ಡೇ ಸಂಭ್ರಮಕ್ಕೆ ಇಡಿ ದೇಶದ ಗಣ್ಯಗಣ್ಯತಿ ಗಣ್ಯರು ಶುಭ ಹಾರೈಸಿದ್ದಾರೆ. ಬಾಲಿವುಡ್‍ನ ಫಸ್ಟ್‍ಫ್ಯಾಮಿಲಿಯ ಯಜಮಾನ ಅಮಿತಾಬ್ ಬಚ್ಚನ್. ಇಂದಿನ ನವ ನಿರ್ದೇಶಕರಿಗೆ ಅಮಿತಾಬ್ ದ್ರೋಣಾಚಾರ್ಯ ಮೂರ್ತಿ. ಹಾಗೇ ಹೊಸ ನಟರಿಗೆ ಬಚ್ಚನ್ ಅವಿಸ್ಮರಣಿಯ ಅನುಕರುಣೆಯ ನಟ.