ಇಂದೋರ್: ನ್ಯೂಜೆಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತ ಸಂಪೂರ್ಣ ಹಿಡಿತ ಸಾಧಿಸಿದ್ದು ಒಟ್ಟು 276 ರನ್‍ಗಳ ಮುನ್ನಡೆ ಸಾಧಿಸಿದೆ.
ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 28 ರನ್ ಗಳಿಸಿದ್ದ ನ್ಯೂಜಿಲೆಂಡ್ ಇಂದು 90.2 ಓವರ್‍ಗಳಲ್ಲಿ 299 ರನ್‍ಗಳಿಗೆ ಆಲೌಟ್ ಆಗಿದೆ. ಎರಡನೇ ಇನ್ನಿಂಗ್ಸ್‍ನಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೇ 18 ರನ್‍ಗಳಿಸಿದೆ.
ನ್ಯೂಜಿಲೆಂಡ್‍ನ ಆರಂಭಿಕ ಆಟಗಾರು ನೂರು ರನ್‍ಗಳ ಜೊತೆಯಾಟವಾಡಿದ್ದನ್ನು ನೋಡಿದ್ದಾಗ ಉತ್ತಮ ಮೊತ್ತ ಪೇರಿಸುತ್ತದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಯಾವಾಗ ಅಶ್ವಿನ್ ಸ್ಪಿನ್ ಮೋಡಿ ಕ್ಲಿಕ್ ಆಯಿತೋ ನ್ಯೂಜಿಲೆಂಡ್ ವಿಕೆಟ್‍ಗಳು ಬೀಳಲು ಆರಂಭಿಸಿತು.
ಮಾರ್ಟಿನ್ ಗುಪ್ಟಿಲ್ ಮತ್ತು ಟಾಮ್ ಲಥಂ ಮೊದಲ ವಿಕೆಟ್‍ಗೆ 118 ರನ್‍ಗಳ ಜೊತೆಯಾಟವಾಡಿದರು. 72 ರನ್(144 ಎಸೆತ, 10 ಬೌಂಡರಿ, 2 ಸಿಕ್ಸರ್) ಗಳಿಸಿದ್ದ ಗುಪ್ಟಿಲ್ ರನೌಟ್ ಆದರೆ ಲಥಂ 53 ರನ್( 104 ಎಸೆತ, 7 ಬೌಂಡರಿ) ಹೊಡೆದು ಅಶ್ವಿನ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ಹೊರನಡೆದರು.
ಮಧ್ಯಮ ಕ್ರಮಾಂಕದಲ್ಲಿ ಜೇಮ್ಸ್ ನೀಶಂ 71 ರನ್(115 ಎಸೆತ, 11 ಬೌಂಡರಿ) ಬಾರಿಸುವ ಮೂಲಕ ಇಂಗ್ಲೆಂಡ್ 250 ರನ್‍ಗಳ ಗಡಿಯನ್ನು ದಾಟಿತು. ಅರ್ ಅಶ್ವಿನ್ 81 ರನ್ ನೀಡಿ 6 ವಿಕೆಟ್ ಪಡೆದರೆ, ಜಡೇಜಾ 80 ರನ್ ನೀಡಿ 2 ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ ಆರಂಭದಲ್ಲಿ ಗಂಭೀರ್ ಎರಡನೇ ರನ್ ಕದಿಯುತ್ತಿರುವಾಗ ಕ್ರೀಸ್ ಮುಟ್ಟಲು ಡೈವ್ ಮಾಡಿದರು. ಪರಿಣಾಮ ಭುಜಕ್ಕೆ ಭಲವಾದ ಗಾಯವಾದ ಕಾರಣ 6 ರನ್‍ಗಳಿಸಿ ಅರ್ಧದಲ್ಲೇ ಪೆವಿಲಿಯನ್‍ಗೆ ಮರಳಿದರು. ಮುರಳಿ ವಿಜಯ್ 11 ರನ್, ಚೇತೇಶ್ವರ ಪೂಜಾರ 1 ರನ್ ಗಳಿಸಿ ಮಂಗಳವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 5 ವಿಕೆಟ್‍ಗೆ 557 ರನ್‍ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತ್ತು.