ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಸೋಮವಾರ, ಉತ್ತರಾಷಾಢ ನಕ್ಷತ್ರ.
ರಾಹುಕಾಲ: ಬೆಳಗ್ಗೆ 7:42 ರಿಂದ 9:11
ಗುಳಿಕಕಾಲ: ಮಧ್ಯಾಹ್ನ 1:39 ರಿಂದ 3:08
ಯಮಗಂಡಕಾಲ: ಬೆಳಗ್ಗೆ 10:40 ರಿಂದ 12:09
ಮೇಷ: ಮನಸ್ಸಿನಲ್ಲಿ ದುಷ್ಟ ಆಲೋಚನೆ, ಕೆಲಸಗಳಲ್ಲಿ ವಿಘ್ನ, ಮಾನಸಿಕ ವ್ಯಥೆ, ಅಲ್ಪ ಧನಲಾಭ, ಆಹಾರ ಸೇವನೆಯಲ್ಲಿ ಜಾಗ್ರತೆ, ಸಾಲ ತೀರಿಸುವ ಸಾಧ್ಯತೆ.
ವೃಷಭ: ದೇವತಾ ಕಾರ್ಯಗಳಲ್ಲಿ ಆಸಕ್ತಿ, ಪತ್ನಿಯಿಂದ ಹಿತವಚನ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ದ್ವಿಚಕ್ರ ವಾಹನದಿಂದ ತೊಂದರೆ, ಚೋರಾಗ್ನಿ ಭೀತಿ, ಆಪ್ತರಿಂದ ಸಹಾಯ.
ಮಿಥುನ: ಸೌಜನ್ಯದಿಂದ ವರ್ತನೆ ಅಗತ್ಯ, ಶತ್ರು ಬಾಧೆ, ನಿದ್ರಾಭಂಗ, ಪತ್ರ ವ್ಯವಹಾರಗಳಲ್ಲಿ ಲಾಭ, ಪರಸ್ಥಳ ವಾಸ, ದುಷ್ಟರ ಸಹವಾಸದಿಂದ ತೊಂದರೆ.
ಕಟಕ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಮಕ್ಕಳಿಂದ ಸಹಕಾರ, ವಿಪರೀತ ಹಣವ್ಯಯ, ಅಕಾಲ ಭೋಜನ, ಸ್ಥಳ ಬದಲಾವಣೆ.
ಸಿಂಹ: ಸ್ತ್ರೀ ಸೌಖ್ಯ, ಕುತಂತ್ರದಿಂದ ಹಣ ಸಂಪಾದನೆ, ಅತಿಯಾದ ನಿದ್ರೆ, ವೃಥಾ ತಿರುಗಾಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವಿವಾಹ ಯೋಗ, ಸುಳ್ಳು ಹೇಳುವ ಸಾಧ್ಯತೆ, ನಾನಾ ರೀತಿ ಸಂಪಾದನೆ.
ಕನ್ಯಾ: ನೆಮ್ಮದಿ ಇಲ್ಲದ ಜೀವನ, ಆಂತರಿಕ ಕಲಹ, ಅಲ್ಪ ಕಾರ್ಯಸಿದ್ಧಿ, ಶತ್ರು ಧ್ವಂಸ, ಮಕ್ಕಳಿಂದ ನೋವು, ಮಾನಸಿಕ ವ್ಯಥೆ, ತೀರ್ಥಯಾತ್ರೆ ದರ್ಶನ, ಋಣ ವಿಮೋಚನೆ.
ತುಲಾ: ಕೃಷಿಯಲ್ಲಿ ಅಲ್ಪ ಲಾಭ, ಸ್ತ್ರೀಯರಿಗೆ ಶುಭ, ನೆರೆಹೊರೆಯವರಿಂದ ಕುತಂತ್ರ, ಆಸ್ತಿ ವಿಚಾರಗಳಲ್ಲಿ ಕಲಹ, ಕೆಟ್ಟ ಆಲೋಚನೆ, ಅಧಿಕ ಹಣವಯ್ಯ, ಸಣ್ಣ ಮಾತಿನಿಂದ ಕಲಹ.
ವೃಶ್ಚಿಕ: ಯತ್ನ ಕಾರ್ಯಗಳಲ್ಲಿ ವಿಘ್ನ, ರೋಗ ಬಾಧೆ, ವ್ಯರ್ಥ ಧನಹಾನಿ, ಬೇಡದ ವಿಷಯಗಳಲ್ಲಿ ಆಸಕ್ತಿ, ಇತರರ ಮಾತಿಗೆ ಮರುಳಾಗಬೇಡಿ.
ಧನಸ್ಸು: ಅಗತ್ಯವಿಲ್ಲದ ವಸ್ತುಗಳ ಖರೀದಿ, ಸರಿ ತಪ್ಪುಗಳ ಬಗ್ಗೆ ಪರಾಮರ್ಶೆ ಅಗತ್ಯ, ಮಿತ್ರರಿಂದ ಸಹಾಯ.
ಮಕರ: ಈ ದಿನ ಎಚ್ಚರಿಕೆ ಅಗತ್ಯ, ಶತ್ರು ಬಾಧೆ, ಅತಿಯಾದ ಒತ್ತಡ, ಧನ ನಷ್ಟ, ಇಲ್ಲ ಸಲ್ಲದ ಅಪವಾದ, ಭೂಮಿಯಿಂದ ಅಧಿಕ ಲಾಭ.
ಕುಂಭ: ಯಾರನ್ನೂ ಹೆಚ್ಚು ನಂಬಬೇಡಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಉತ್ತಮ ಬುದ್ಧಿಶಕ್ತಿ, ಉದ್ಯೋಗದಲ್ಲಿ ಕಿರಿಕಿರಿ, ಹಣಕಾಸು ಪರಿಸ್ಥಿತಿ ಸುಧಾರಣೆ.
ಮೀನ: ಮನೆಯಲ್ಲಿ ಶುಭ ಕಾರ್ಯ, ದ್ರವ್ಯ ಲಾಭ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ಶ್ರಮಕ್ಕೆ ತಕ್ಕ ಫಲ, ಸ್ವಯಂಕೃತ್ಯಗಳಿಂದ ನಷ್ಟ, ಮಾನಸಿಕ ವ್ಯಥೆ.