Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80310

ಯಶ್ ಮಕ್ಕಳಿಗೆ ಪ್ರಭಾಸ್ ‘ಕಲ್ಕಿ’ಟೀಮ್‌ನಿಂದ ಸ್ಪೆಷಲ್ ಗಿಫ್ಟ್

$
0
0

ಡಾರ್ಲಿಂಗ್ ಪ್ರಭಾಸ್  (Prabhas) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಇದೇ ಜೂನ್ 27ಕ್ಕೆ ರಿಲೀಸ್‌ಗೆ ಸಜ್ಜಾಗಿದೆ. ಇದೀಗ ನ್ಯಾಷನಲ್ ಸ್ಟಾರ್ ಯಶ್ (Yash) ಮಕ್ಕಳಿಗೆ ‘ಕಲ್ಕಿ’ ಚಿತ್ರತಂಡ ಸ್ಪೆಷಲ್ ಗಿಫ್ಟ್ ಕಳುಹಿಸಿದ್ದಾರೆ. ಈ ಬಗ್ಗೆ ನಟಿ ರಾಧಿಕಾ ಪಂಡಿತ್ (Radhika Pandit) ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಕಲ್ಕಿ ಬುಜ್ಜಿ ಟಾಯ್’ ಅನ್ನು ಯಶ್ ಮಗಳು ಐರಾ ಮತ್ತು ಮಗ ಯರ್ಥವ್‌ಗೆ ಗಿಫ್ಟ್ ಆಗಿ ನೀಡಿದ್ದಾರೆ. ಕಲ್ಕಿ ಸಿನಿಮಾ ತಂಡ ನೀಡಿದ ಗಿಫ್ಟ್ ಫೋಟೋವನ್ನು ನಟಿ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಹಿಮಾಲಯದಿಂದ ಬಂದು ರಾಜಕೀಯ ಮುಖಂಡರಿಗೆ ವಿಶ್ ಮಾಡಿದ ನಟ ರಜನಿ

ಫೋಟೋ ಶೇರ್ ಮಾಡಿದ ರಾಧಿಕಾ ಪಂಡಿತ್, ‘ಕಲ್ಕಿ’ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಯಶ್ ಮಕ್ಕಳಾದ ಐರಾ ಮತ್ತು ಯಥರ್ವ್ ಕೂಡ ಒಂದು ಹಾಳೆಯಲ್ಲಿ ಥ್ಯಾಂಕ್ಯೂ ಬುಜ್ಜಿ ಎಂದು ಬರೆದಿದ್ದಾರೆ. ಈ ಫೋಟೋವನ್ನು ನಟಿ ರಾಧಿಕಾ ಶೇರ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ರಾಮ್ ಚರಣ್ ಪುತ್ರಿಗೂ ಇದೇ ರೀತಿಯ ‘ಕಲ್ಕಿ ಬುಜ್ಜಿ ಟಾಯ್’ ಉಡುಗೊರೆಯಾಗಿ ಕಲ್ಕಿ ಟೀಮ್‌ ಕಳುಹಿಸಿತ್ತು.

ಇಡೀ ದೇಶ, ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾಕ್ಕಾಗಿ ಕಾಯುತ್ತಿದೆ. ಒಂದಾದ ನಂತರ ಬಂದು ವಿಶೇಷತೆಗಳನ್ನು ರಿವೀಲ್‌ ಮಾಡುತ್ತಲೇ ಬಂದಿರುವ ‘ಕಲ್ಕಿ’ ಸಿನಿಮಾ ತಾರಾಗಣದ ವಿಚಾರದಲ್ಲೂ ಕುತೂಹಲ ಮೂಡಿಸಿದೆ. ಅದರಂತೆ ಟ್ರೈಲರ್ ಮೂಲಕ ಮತ್ತಷ್ಟು ರೋಚಕತೆ ಉಕ್ಕಿಸಲು ಚಿತ್ರತಂಡ ಸಜ್ಜಾಗಿದೆ. ಜೂನ್ 10ರಂದು ಬಹುಭಾಷೆಗಳಲ್ಲಿ ‘ಕಲ್ಕಿ’ ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ. ಸದ್ಯ ರಿಲೀಸ್ ಆಗಲಿರುವ ಟ್ರೈಲರ್, ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್ ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿರುವ ‘ಕಲ್ಕಿ 2898 ಎಡಿ’ ಜೂನ್ 27ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಅಂದಹಾಗೆ, ಮೊದಲ ಬಾರಿಗೆ ದೀಪಿಕಾ ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿರೋದು ವಿಶೇಷ.


Viewing all articles
Browse latest Browse all 80310

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>