ಬೆಂಗಳೂರು: 2018ರ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇವೆ. ಬಿಜೆಪಿ ಅಧಿಕಾರ ಹಿಡಿಯುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅರಮನೆ ಮೈದಾನದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯವನ್ನ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ. ವಾರದಲ್ಲಿ 4 ದಿನಗಳು ರಾಜ್ಯ ಪ್ರವಾಸ, 2ದಿನ ಬಿಜೆಪಿ ಕಚೇರಿಯಲ್ಲಿ ಕೆಲಸ ಮಾಡುತ್ತೇನೆ. ಬರುವ ದಿನಗಳಲ್ಲಿ ಪಕ್ಷ ಸಂಘಟನೆಗೆ ಆಸಕ್ತಿ ಇರುವವರ ಟೀಮ್ ರೆಡಿಯಾಗಿ, ಜನ ಗುರುತಿಸುವವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಪಕ್ಷವನ್ನು ಸಂಘಟಿಸುತ್ತೇವೆ. ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿದು ರಾಜ್ಯದಿಂದ ಕಾಂಗ್ರೆಸ್ ಧೂಳೀಪಟ ಮಾಡುತ್ತೇವೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಸರ್ಕಾರ ಭಾಗ್ಯಲಕ್ಷ್ಮಿ ಸುವರ್ಣ ಗ್ರಾಮ ಯೋಜನೆಯನ್ನು ಕಡೆಗಣಿಸಿದ್ದಾರೆ. ಪುತ್ರನಿಗೆ ಲ್ಯಾಬ್ ತೆರೆಯಲು ಅವಕಾಶ ನೀಡುವ ಮೂಲಕ ಸಿದ್ದರಾಮಯ್ಯ ದ್ರೋಹ ಮಾಡಿದ್ದಾರೆ. ಒಂದು ತಿಂಗಳಲ್ಲಿ ಸಿದ್ದರಾಮಯ್ಯನವರ ಹಲವು ಭ್ರಷ್ಟಾಚಾರಗಳು ಹೊರಬರಲಿವೆ. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲು ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
10 ಸಾವಿರ ಜನ ಸೇರಿಸುವ ಜಿಲ್ಲೆಗಳಲ್ಲಿ ಮೊದಲು ಸಮಾವೇಶ ನಡೆಸುತ್ತೇವೆ. ಇದರ ಜೊತೆ 5ಸಾವಿರ ಜನ ಸೇರಿಸುವ ವಿಧಾನಸಭಾ ಕ್ಷೇತ್ರಗಳಿಗೂ ಮೊದಲು ಭೇಟಿ ನೀಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ 25ಕ್ಕೂ ಸೀಟು ಗೆದ್ದು ಮೋದಿ ಕೈ ಬಲಪಡಿಸುತ್ತೇವೆ ಎಂದು ತಮ್ಮ ಪ್ಲಾನ್ ಅನ್ನು ಕಾರ್ಯಕರ್ತರ ಮುಂದೆ ಬಿಎಸ್‍ವೈ ವಿವರಿಸಿದರು.
The post 150 ಸ್ಥಾನ ಗೆದ್ದು ಕಾಂಗ್ರೆಸ್‍ನ್ನು ಧೂಳೀಪಟ ಮಾಡುತ್ತೇವೆ: ಬಿಎಸ್‍ವೈ appeared first on Public TV.