ಬೆಂಗಳೂರು: ಅರಗಿಣಿ ಧಾರಾವಾಹಿಯಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ನಟ ಹರೀಶ್ ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹರೀಶ್, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅರಗಿಣಿ ಧಾರಾವಾಹಿಯಲ್ಲಿ ಹರೀಶ್ ಸಿದ್ಧಾರ್ಥ್ ಪಾಟಿಲ್ ಪಾತ್ರ ನಿರ್ವಹಿಸಿದ್ದರು.
ಜಾಂಡೀಸ್‍ನಿಂದ ಬಳಸುತ್ತಿದ್ದ ಹರೀಶ್ ಅವರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಅನಂತರ ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ನಂತರ ಹರೀಶ್ ಕೋಮಾಗೆ ಜಾರಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಹರೀಶ್ ಹುಟ್ಟೂರು ಚಿತ್ರದುರ್ಗದ ಆರ್‍ಆರ್ ನಗರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ. ಹರೀಶ್ ಅವರಿಗೆ 26 ವರ್ಷ ವಯಸ್ಸಾಗಿತ್ತು.
The post ಅರಗಿಣಿ ಧಾರಾವಾಹಿಯ ನಟ ಹರೀಶ್ ನಿಧನ appeared first on Kannada Public tv.