ಭೋಪಾಲ್: 45 ವರ್ಷದ ವ್ಯಕ್ತಿಯೊಬ್ಬ ತಾನು ಅತ್ಯಾಚಾರ ನಡೆಸಿದ್ದ ಮಹಿಳೆ ಪ್ರಕರಣದಲ್ಲಿ ರಾಜಿಯಾಗಲು ನಿರಾಕರಿಸಿದ್ದಕ್ಕೆ ಆಕೆಯ ಬೆರಳುಗಳನ್ನೇ ಕಟ್ ಮಾಡಿದ ಘೋರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಟಿಕಂಗಢ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, 2 ವರ್ಷದ ಹಿಂದೆ ಕುನ್ವಾರ್ ಲಾಲ್ ಎಂಬಾತ ಮಹಿಳೆಯನ್ನ ಅತ್ಯಾಚಾರ ಮಾಡಿ ಕಳೆದ ತಿಂಗಳಷ್ಟೇ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ. ಆದರೆ ಹೊರಬಂದ ಆತ ಮಹಿಳೆಗೆ ಪತ್ರದ ಮೂಲಕ ಕೇಸ್ ರಾಜಿ ಮಾಡಿಕೊಳ್ಳುವಂತೆ ಬೆದರಿಕೆ ಹಾಕಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಆಕೆಯ ಬಲಗೈ ಬೆರಳುಗಳನ್ನೇ ತುಂಡರಿಸಿದ್ದಾನೆ.
ಸದ್ಯ ಮಹಿಳೆ ಆರೋಪಿ ಮೇಲೆ ಮತ್ತೊಮ್ಮೆ ದೂರು ನೀಡಿದ್ದಾರೆ. ಅಲ್ಲದೇ ಪೊಲೀಸರು ಆತನನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಎಸ್ಪಿ ಆರೋಪಿ ಕುನ್ವಾರ್‍ನನ್ನು ಬಂಧಿಸಿದ್ದಾಗಿ ತಿಳಿಸಿದ್ದಾರೆ.
The post ರೇಪ್‍ಕೇಸ್‍ನಲ್ಲಿ ರಾಜಿಯಾಗದ್ದಕ್ಕೆ ಸಂತ್ರಸ್ತೆಯ ಬೆರಳನ್ನೇ ತುಂಡರಿಸಿದ! appeared first on Kannada Public tv.