
ಚಾಮರಾಜನಗರ: ಜಮೀನಿನಿಂದ ಹಿಂತಿರುಗಿ ಬಂದ ಅಪ್ಪು ಅಭಿಮಾನಿಯೋರ್ವ ಪುನೀತ್ ರಾಜ್‍ಕುಮಾರ್ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಿದ್ದಂತೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ನಡೆದಿದೆ.
ಮುನಿಯಪ್ಪ(28) ಮೃತ ಅಪ್ಪು ಅಭಿಮಾನಿ. ಜಮೀನಿನಿಂದ ಊಟಕ್ಕೆ ಬಂದಿದ್ದ ಈತ ಟಿವಿ ಹಾಕಿದ ವೇಳೆ ಪುನೀತ್ ಸಾವಿನ ಸುದ್ದಿ ಪ್ರಸಾರವಾಗಿದೆ. ನೆಚ್ಚಿನ ನಟನ ಸಾವಿನ ಸುದ್ದಿ ನೋಡುತ್ತಿದ್ದಂತೆಯೇ ಮುನಿಯಪ್ಪ ಕುಸಿದು ಬಿದ್ದು ಸ್ಥಳದಲ್ಲೇ ಅಸುನೀಗಿದ್ದಾನೆ. ಇದನ್ನೂ ಓದಿ: ಅಪ್ಪು ಆಸೆ ಕೊನೆಗೂ ಈಡೇರಲೇ ಇಲ್ಲ – ಖ್ಯಾತ ನಟನ ಬಗ್ಗೆ ಪುನೀತ್ ಮಾತು
ಈ ಸಂಬಂಧ ಸ್ಥಳೀಯರು ಮೃತ ಮುನಿಯಪ್ಪ ಅಪ್ಪಟ ಪುನೀತ್ ರಾಜ್‍ಕುಮಾರ್ ಅಭಿಮಾನಿಯಾಗಿದ್ದು, ಅವರ ಎಲ್ಲಾ ಚಿತ್ರವನ್ನು ಎರಡ್ಮೂರು ಬಾರಿ ನೋಡುತ್ತಿದ್ದ. ಇಲ್ಲಿನ ಚಿತ್ರಮಂದಿರಗಳು ಚೆನ್ನಾಗಿರುವುದಿಲ್ಲವೆಂದು ಬೆಂಗಳೂರಿಗೆ ತೆರಳಿ ಅಲ್ಲೇ ಅಪ್ಪು ಚಿತ್ರಗಳನ್ನು ಎರಡು ಮೂರು ಶೋ ಗಳನ್ನು ನೋಡಿ ಬರುತ್ತಿದ್ದ. ದಿಢೀರ್ ಮೃತಪಟ್ಟ ವಿಚಾರ ತಿಳಿದು ಈ ಅವಘಡ ಸಂಭವಿಸಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 2 ಗಂಟೆ ವ್ಯಾಯಾಮ, ಮೂರು ಗಂಟೆ ಐಸಿಯುನಲ್ಲಿ ಚಿಕಿತ್ಸೆ – ಪುನೀತ್ ಕೊನೆಕ್ಷಣ ಹೀಗಿತ್ತು
The post ಪುನೀತ್ ಸಾವಿನ ಸುದ್ದಿ ನೋಡಿ ಹೃದಯಾಘಾತದಿಂದ ಅಭಿಮಾನಿ ಸಾವು appeared first on Public TV.