Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80002

T20 ವಿಶ್ವಕಪ್ –ಟೀಂ ಇಂಡಿಯಾದ 6ನೇ ಬೌಲರ್ ಬೌಲಿಂಗ್‍ಗೆ ಎಂಟ್ರಿ

$
0
0

ದುಬೈ: ಟಿ20 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾಗೆ ಆರನೇ ಬೌಲರ್ ಚಿಂತೆಯಾಗಿತ್ತು. ತಂಡದಲ್ಲಿದ್ದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೆ ಇದ್ದಿದ್ದು, ಬಾರಿ ಹಿನ್ನಡೆ ತಂದಿತ್ತು. ಇದೀಗ ಪಾಂಡ್ಯ ಬೌಲಿಂಗ್ ಮಾಡಲು ಸಿದ್ಧರಾಗಿದ್ದಾರೆ.

ಭಾರತ ಟಿ20 ವಿಶ್ವಕಪ್‍ನಲ್ಲಿ ಮುಂದಿನ ಎದುರಾಳಿಯಾಗಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಅಭ್ಯಾಸದಲ್ಲಿ ಇಷ್ಟು ದಿನ ಬೌಲಿಂಗ್ ಮಾಡದೇ ಇದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿ 6ನೇ ಬೌಲರ್ ಸಮಸ್ಯೆ ಪರಿಹಾರವಾಗುವ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಈ ಬಾರಿಯ T20 ವಿಶ್ವಕಪ್‍ನಲ್ಲಿ ಕಂಡು ಬಂದ ವಿಶೇಷತೆಗಳಿವು

ಹಾರ್ದಿಕ್ ಪಾಂಡ್ಯ ಬೌಲಿಂಗ್ ಅಭ್ಯಾಸ ಮಾಡುತ್ತಿರುವ ಫೋಟೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಮೂಲಕ ಮತ್ತೆ ಬೌಲಿಂಗ್‍ನತ್ತ ಹಾರ್ದಿಕ್ ಮುಖಮಾಡಿದಂತಾಗಿದೆ. ಪಾಂಡ್ಯ ಬೆನ್ನುನೋವಿನಿಂದಾಗಿ ಸುದೀರ್ಘ ಕಾಲದಿಂದ ಬೌಲಿಂಗ್ ಮಾಡುತ್ತಿರಲಿಲ್ಲ. ಹಾಗಾಗಿ ಟೀಂ ಇಂಡಿಯಾಗೆ ಆರನೇ ಬೌಲರ್ ಸಮಸ್ಯೆಯೊಂದು ಕಾಡುತ್ತಿತ್ತು. ಇದೀಗ ಈ ಸಮಸ್ಯೆ ಪರಿಹಾರ ಕಾಣುವ ಲಕ್ಷಣಗಳು ಕಂಡು ಬಂದಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಪಾಂಡ್ಯ ಬೌಲಿಂಗ್ ಮಾಡಲಿದ್ದಾರೆಯೇ ಎಂಬುದನ್ನು ಬೌಲಿಂಗ್ ಆರಂಭಿಸುವವರೆಗೆ ಕಾದು ನೋಡಬೇಕಾಗಿದೆ. ಇದನ್ನೂ ಓದಿ: ಹಿಂದೂಗಳ ನಡುವೆ ನಮಾಜ್ – ಟೀಕೆಯ ಬಳಿಕ ಕ್ಷಮೆಯಾಚಿಸಿದ ವಕಾರ್ ಯೂನಿಸ್

The post T20 ವಿಶ್ವಕಪ್ – ಟೀಂ ಇಂಡಿಯಾದ 6ನೇ ಬೌಲರ್ ಬೌಲಿಂಗ್‍ಗೆ ಎಂಟ್ರಿ appeared first on Public TV.


Viewing all articles
Browse latest Browse all 80002


<script src="https://jsc.adskeeper.com/r/s/rssing.com.1596347.js" async> </script>