ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಬ್ಲ್ಯಾಕ್ ಸ್ವಿಮ್ ಸೂಟ್ ಧರಿಸಿ ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡಿರುವ ಫೋಟೋ ಮತ್ತು ಕೆಲ ವಿಡಿಯೋಗಳನ್ನು ತಮ್ಮ ಇನ್ಸ್‍ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.
ಸದಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿರುವ ಪ್ರಿಯಾಂಕಾ, ಸೆಪ್ಟಂಬರ್ 30 ರಂದು ತಮ್ಮ ಗೆಳತಿಯರೊಂದಿಗೆ ಕೆಲ ಸಮಯವನ್ನು ಕಳೆದಿದ್ದಾರೆ. ಬಾಲಿವುಡ್ ನಿಂದ ದೂರವಾದ ನಂತರ ಹೆಚ್ಚಾಗಿ ಹಾಲಿವುಡ್ ಸಿನಿಮಾಗಳಲ್ಲಿ ಪ್ರಿಯಾಂಕಾ ಕಾಣಿಸಕೊಳ್ಳುತ್ತಿದ್ದಾರೆ. ಸದ್ಯ ಅಮೆರಿಕದ ಟಿವಿ ಶೋ `ಕ್ವಾಂಟಿಕೋ’ದಲ್ಲಿ ಭಾಗಿಯಾಗಲಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಕಾರ್ಯಕ್ರಮದ ಶೂಟಿಂಗ್ ಸಹ ಆರಂಭಗೊಳ್ಳಲಿದೆ.
ಕ್ವಾಂಟಿಕೋ ಶೋ ಟೀಮ್ ನಲ್ಲಿ ಪ್ರಿಯಾಂಕಾ ಸೇರಿಕೊಂಡಿದ್ದಾರೆ. ಶೂಟಿಂಗ್ ಆರಂಭಕ್ಕೂ ಮುನ್ನ ಟೀಮ್ ಜೊತೆಯಲ್ಲಿರುವ ತನ್ನ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.