Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80495

‘ಯಂಗ್’ಆಗಿ ಕಂಡಿದ್ದಕ್ಕೆ 41 ವರ್ಷದ ಮಹಿಳೆ ಪೊಲೀಸರ ವಶಕ್ಕೆ!

$
0
0

ಅಂಕಾರಾ: ಏನು….ನಿಮಗೆ 40 ವರ್ಷ ವಯಸ್ಸಾ! ಹಂಗೆ ಕಾಣೋದೇ ಇಲ್ಲ. ತುಂಬಾ ಯಂಗ್ ಕಾಣ್ತೀರ ಅಂದ್ರೆ ಯಾವ ಮಹಿಳೆಯಾದ್ರೂ ನಾಚಿ ನೀರಾಗೋದ್ರಲ್ಲಿ ಡೌಟಿಲ್ಲ. ಆದ್ರೆ ಇದೇ ಕಾರಣಕ್ಕೆ ಮಹಿಳೆಯೊಬ್ರು ಫಜೀತಿಗೆ ಸಿಲುಕಿದ ಘಟನೆ ನಡೆದಿದೆ.

ಇತ್ತೀಚೆಗೆ 41 ವರ್ಷದ ನಟಾಲಿಯಾ ಝೆಂಕಿವ್ ಟರ್ಕಿಯಿಂದ ತನ್ನ ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಪಾಸ್‍ಪೋರ್ಟ್ ಕಂಟ್ರೋಲ್‍ನಲ್ಲಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.

ನಟಾಲಿಯಾ ವಯಸ್ಸಿನ ಮೇಲೆ ಅನುಮಾನಗೊಂಡ ಅಧಿಕಾರಿಗಳು ಆಕೆ ಬೇರೆ ಯಾರದ್ದೋ ಪಾಸ್‍ಪೋರ್ಟ್ ಬಳಸುತ್ತಿರಬುದುದೆಂದು ಸಂಶಯಗೊಂಡು ವಶಕ್ಕೆ ಪಡೆದಿದ್ರು. ನಟಾಲಿಯಾ ತನ್ನ ಪಾಸ್‍ಪೋರ್ಟ್‍ನಲ್ಲಿದ್ದ ಫೋಟೋಗಿಂತ ಸುಮಾರು 20 ವರ್ಷ ಚಿಕ್ಕವಳಿರಬಹುದು ಎಂದು ಅಧಿಕಾರಿಗಳು ನಂಬಿದ್ದರು.

ಲಾಮಾ ಎಂದು ಕರೆಯಲ್ಪಡುವ ನಟಾಲಿಯಾ ಒಬ್ಬ ಗಾಯಕಿ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಾಲಿಯಾ, ಅದು ಮಾಮೂಲಿ ವಿಚಾರಣೆಯಾಗಿರಲಿಲ್ಲ. ಈ ರೀತಿ ಆಗಿದ್ದು ನನಗೆ ಕಾಂಪ್ಲಿಮೆಂಟ್‍ನಂತಿತ್ತು. ನನ್ನನ್ನು ವಶಕ್ಕೆ ಪಡೆಯಲು ಕಾರಣ ಕೇಳಿದ ನಂತರ ನಗಲು ಶುರುಮಾಡಿದೆ. ನಾನು ನೋಡೋಕೆ ಹೇಗೆ ಕಾಣ್ತೀನಿ ಎಂಬ ಬಗ್ಗೆ ಸಾಕಷ್ಟು ಕಾಂಪ್ಲಿಮೆಂಟ್ಸ್ ಸಿಗ್ತಾನೆ ಇರುತ್ತೆ. ಆದ್ರೆ ಇದೇ ಕಾರಣದಿಂದ ನನ್ನನ್ನು ವಶಕ್ಕೆ ಪಡೆದು ವಿಚಾರಣೆ ಮಡ್ತಾರೆ ಅನ್ನೋದನ್ನ ಊಹಿಸಿರಲಿಲ್ಲ ಅಂತ ಹೇಳಿದ್ದಾರೆ.

ಕೊನೆಗೆ ನಟಾಲಿಯಾ ಅಭಿಮಾನಿಗಳು ಆಕೆಯ ರಕ್ಷಣೆಗೆ ಬಂದಿದ್ದು ಅಧಿಕಾರಿಗಳು ಆಕೆಯನ್ನು ಬಿಟ್ಟು ಕಳಿಸಿದ್ದಾರೆ. ನಟಾಲಿಯಾರನ್ನ ಗುರುತು ಹಿಡಿದು ಕೆಲ ಅಭಿಮಾನಿಗಳು ಸೆಲ್ಫೀ ಹಾಗೂ ಆಟೋಗ್ರಾಫ್ ಕೇಳಿಕೊಂಡು ಆಕೆಯ ಬಳಿ ಬಂದಿದ್ರು.

ಇನ್ನು ನಟಾಲಿಯಾ ಬ್ಯೂಟಿ ಸೀಕ್ರೆಟ್ ಬಹಿರಂಗಪಡಿಸಿದ ಅಭಿಮಾನಿಯೊಬ್ಬರು, ಆಕೆ ವೆಜಿಟೇರಿಯನ್. ಕೇವಲ ಹಣ್ಣು- ತರಕಾರಿಗಳನ್ನ ಮಾತ್ರ ತಿನ್ನುತ್ತಾರೆ. ಅದಕ್ಕೆ ಇಷ್ಟು ಚೆನ್ನಾಗಿ ಕಾಣ್ತಾರೆ ಅಂತ ಹೇಳಿದ್ದಾರೆ.


Viewing all articles
Browse latest Browse all 80495

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>