Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80425

ಮೊಬೈಲ್ ಕಳ್ಳತನ ಮಾಡಿದ್ದಕ್ಕೆ ಉಲ್ಟಾ ನೇತು ಹಾಕಿ ಥಳಿಸಿದ್ರು!

$
0
0

ಮೈಸೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಎಂದು ಆರೋಪಿಸಿ ಹೊರ ರಾಜ್ಯದ ಕಾರ್ಮಿಕನಿಗೆ ಉಲ್ಟಾ ಕಟ್ಟಿಹಾಕಿ ಥಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮೈಸೂರಿನ ಆರ್‍ಟಿಒ ವೃತ್ತದಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಕಾರ್ಮಿಕನ ತಲೆ ಕೆಳಗೆ ಮಾಡಿ ಕಟ್ಟಿ ಹಾಕಿ ಮನಸ್ಸಿಗೆ ಬಂದಂತೆ ಕಟ್ಟಡದ ಮೇಸ್ತ್ರಿ ಹಾಗೂ ಇತರ ಕಾರ್ಮಿಕರು ಥಳಿಸಿದ್ದಾರೆ. ಈ ದೃಶ್ಯಗಳನ್ನು ಇನ್ನೊಂದು ಕಟ್ಟಡದಿಂದ ವ್ಯಕ್ತಿವೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಮೊಬೈಲ್ ನಲ್ಲಿ ಹಲ್ಲೆ ಮಾಡುವ ದೃಶ್ಯ ಚಿತ್ರೀಕರಣ ಆಗುತ್ತಿದೆ ಎನ್ನುವುದನ್ನು ತಿಳಿದ ಮೇಸ್ತ್ರಿ ತಕ್ಷಣ ಆ ವ್ಯಕ್ತಿಯನ್ನು ಕೆಳಗೆ ಇಳಿಸಿ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾನೆ.

ಯುವಕ ಕಳ್ಳತನದಂತ ತಪ್ಪು ಮಾಡಿದ್ದರೆ ಆತನನ್ನು ಕಟ್ಟಡದ ಮೇಸ್ತ್ರಿ ಪೊಲೀಸರ ವಶಕ್ಕೆ ನೀಡಬಹುದಿತ್ತು. ಅದನ್ನು ಬಿಟ್ಟು ಈ ರೀತಿಯಲ್ಲಿ ಉಲ್ಟಾ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ನಡೆಸಿರುವುದು ನಿಜಕ್ಕೂ ಅಮಾನವೀಯ ಎಂದು ಇದನ್ನು ನೋಡಿದ ಜನತೆ ಪ್ರತಿಕ್ರಿಯಿಸಿದ್ದಾರೆ.


Viewing all articles
Browse latest Browse all 80425


<script src="https://jsc.adskeeper.com/r/s/rssing.com.1596347.js" async> </script>