Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80385

ಕರ್ನಾಟಕಕ್ಕೆ ಮತ್ತೆ ಕಾವೇರಿ ಆತಂಕ: ಫೆಬ್ರವರಿಯಲ್ಲಿ ಆಗುತ್ತಾ ಎಲ್ಲಾ ನಿರ್ಣಯ?

$
0
0

ನವದೆಹಲಿ: ಕಾವೇರಿ ನ್ಯಾಯಮಂಡಳಿಯ 2007ರ ಐತೀರ್ಪು ಪ್ರಶ್ನಿಸಿ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವ ಇಂಗಿತ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ 4 ರಾಜ್ಯಗಳ ವಾದ ಆಲಿಸಿ 2 ವಾರಗಳಲ್ಲಿ ದಾಖಲೆ ಒದಗಿಸುವಂತೆ ಕಾಲಾವಕಾಶ ನೀಡಿದೆ. ಆದರೆ ಇದಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ಎತ್ತಿದ್ದು, ಕರ್ನಾಟಕದ ವಾದಕ್ಕೆ ಬೆಂಬಲ ನೀಡಿದೆ.

ಕೋರ್ಟ್ ಕಲಾಪ ಹೀಗಿತ್ತು:
ತಮಿಳುನಾಡಿನ ಶೇಖರ್ ನಾಫಡೆ ಅವರು ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ಆಗಲೇಬೇಕೆಂಬ ತಮ್ಮ ವಾದವನ್ನು ಮಂಡಿಸಿದರು. ಇದಕ್ಕೆ ನ್ಯಾ. ದೀಪಕ್ ಮಿಶ್ರಾ, ಮಂಡಳಿ ರಚನೆ ಬಗ್ಗೆ ಮೂರು ರಾಜ್ಯಗಳ ಅಭಿಪ್ರಾಯ ಏನು? ಮಂಡಳಿ ರೀತಿಯಲ್ಲೇ ಸ್ಕೀಮ್ ಮಾಡಬಹುದಾ? ಕೃಷ್ಣಾ, ನರ್ಮದಾ ನದಿ ವಿವಾದಗಳಲ್ಲಿ ಮಂಡಳಿ ಮಾಡಲಾಗಿದೆ. ಅದೇ ರೀತಿ ಕಾವೇರಿಗೂ ಒಂದು ಮಂಡಳಿ ರಚನೆ ಮಾಡಬಹುದು ಎಂದು ಹೇಳಿದರು.

ಇದಕ್ಕೆ ಕೇಂದ್ರ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಆಕ್ಷೇಪಿಸಿ, ಮಂಡಳಿ ರಚನೆ ಬಗ್ಗೆ ಸರ್ವೋಚ್ಚ ಅಧಿಕಾರ ಸಂಸತ್ತಿಗೆ ಇದೆ ಎಂದು ವಾದಿಸಿದರು. ಮಧ್ಯಾಹ್ನ ಕರ್ನಾಟಕ ಪರ ಗೋಸೇನ್ ವಾದ ಮಂಡಿಸಲು ಆರಂಭಿಸಿದಾಗ ತಕ್ಷಣ ತಮಿಳುನಾಡು ಪರ ವಾದ ಮಂಡಿಸಲು ಸುಬ್ರಹ್ಮಣ್ಯನ್ ಮುಂದಾದರು. ಇದಕ್ಕೆ ಹಿರಿಯ ವಕೀಲ ಫಾಲಿ ನಾರಿಮನ್ ಅಫಿಡವಿತ್ ಗೆ ಸಹಿ ಹಾಕಿರುವ ಸುಬ್ರಹ್ಮಣ್ಯನ್ ಸಾಕ್ಷಿ ಹೇಳುವಂತಿಲ್ಲ ಎಂದರು. ಈ ವೇಳೆ ಶೇಖರ್ ನಾಫಡೆ, ಗೋಸೇನ್ ಕೂಡ ಅಫಿಡವಿತ್‍ಗೆ ಸಹಿ ಮಾಡಿದ್ದಾರೆ ಎಂದು ವಾದಿಸಿದರು. ಈ ವೇಳೆ ನ್ಯಾ.ದೀಪಕ್ ಮಿಶ್ರಾ ಮಧ್ಯ ಪ್ರವೇಶಿಸಿ ಮೂವರು ತಜ್ಞರ ಅಭಿಪ್ರಾಯ ಬೇಡ. ಎರಡು ವಾರದಲ್ಲಿ ಮಾಸ್ಟರ್ ನೋಟ್ ನೀಡಿ. ಮಂಡಳಿ ರಚನೆ ಬಗ್ಗೆ ಆದೇಶದಲ್ಲಿ ಪೂರ್ಣ ಸ್ವರೂಪದ ಬಗ್ಗೆ ವಿವರಿಸಲಾಗುವುದು ಎಂದು ಹೇಳಿ ವಿಚಾರಣೆ ಮುಂದೂಡಿದರು.

ಆತಂಕ ಬೇಡ: ವಕೀಲರ ಜೊತೆ ಚರ್ಚಿಸಿ, ಮಾಹಿತಿ ಪಡೆದು ಮಾತನಾಡುತ್ತೇನೆ ಸಿಎಂ ಸಿದ್ದರಾಮಯ್ಯ ಹೇಳಿದರೆ, ಮಂಡಳಿ ರಚನೆ ಬಗ್ಗೆ ಸುಪ್ರೀಂಕೋರ್ಟ್ ಜಡ್ಜ್ ಹೇಳಿಕೆಗೆ ತಕ್ಷಣ ನಾವು ಆತಂಕಪಡುವ ಅಗತ್ಯವಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದರು.

ಕಾವೇರಿ ನಿರ್ವಹಣಾ ಮಂಡಳಿಯ ಕೆಲಸ ಏನು?
ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಯಾದರೆ ಮಂಡಳಿ ವ್ಯಾಪ್ತಿಗೆ ಕೆಆರ್‍ಎಸ್, ಹಾರಂಗಿ, ಹೇಮಾವತಿ ಮತ್ತು ಕಬಿನಿ ಜಲಾಶಯಗಳು ಬರಲಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ, ಬಳಕೆ ಎಲ್ಲವನ್ನು ಮಂಡಳಿಯೇ ನಿರ್ಧಾರ ಮಾಡುತ್ತದೆ. ದಿನ, ವಾರ, ತಿಂಗಳ, ವಾರ್ಷಿಕ ಲೆಕ್ಕದಲ್ಲಿ ನೀರಿನ ಸಂಗ್ರಹದ ಲೆಕ್ಕ ಸಂಗ್ರಹಿಸುತ್ತದೆ. ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ನೀರಿನ ಹರಿವಿನ ಪ್ರಮಾಣ ಸಂಗ್ರಹಿಸಲಾಗುತ್ತದೆ. ಬೆಳೆ ಪದ್ಧತಿ, ನೀರಾವರಿ ವಿಸ್ತೀರ್ಣ, ಒಳಹರಿವು ಆಧರಿಸಿ ನೀರು ಹಂಚಿಕೆ ಮಾಡಲಾಗುತ್ತದೆ. ಜೂನ್, ಅಕ್ಟೋಬರ್ ನಡುವೆ ಪ್ರತಿ 10 ದಿನಗಳಿಗೊಮ್ಮೆ ನಿರ್ವಹಣಾ ಮಂಡಳಿ ಸಭೆ ನಡೆಸುತ್ತದೆ. ಮಂಡಳಿ ನಿರ್ದೇಶನದಂತೆ ನೀರು ಬಿಡುಗಡೆ ಮಾಡಬೇಕಾಗುತ್ತದೆ. ಕಾವೇರಿ ಕಣಿವೆ ಮೇಲ್ಭಾಗದ ತಮಿಳುನಾಡಿನ ಜನತೆಗೆ ಇದರಿಂದ ಲಾಭ ಸಿಗುವ ಸಾಧ್ಯತೆ ಹೆಚ್ಚು.

ನಿರ್ವಹಣಾ ಮಂಡಳಿಯ ಸ್ವರೂಪ ಏನು?
ನಿರ್ವಹಣಾ ಮಂಡಳಿ ಸ್ವತಂತ್ರ ಸ್ವರೂಪ ಹೊಂದಿದ್ದು, ಕೇಂದ್ರ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ಮುಖ್ಯಸ್ಥರಾಗಿರುತ್ತಾರೆ. ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಸದಸ್ಯರಾಗಿದ್ದು, ಎಲ್ಲಾ ರಾಜ್ಯಗಳ ಸದಸ್ಯರು ಸಮಾನ ಹಕ್ಕು ಹೊಂದಿರುತ್ತಾರೆ. 6 ಸದಸ್ಯರು ಇದ್ದರೆ ಕೋರಂ ಇದೆ ಎಂದು ಪರಿಗಣಿಸಲಾಗುತ್ತದೆ. ಕೇಂದ್ರೀಯ ಜಲ ಆಯೋಗ, ರಾಷ್ಟ್ರೀಯ ಜಲ ವಿಜ್ಞಾನ ಸಂಸ್ಥೆ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಮತ್ತು ಇತರೆ ಏಜೆನ್ಸಿಗಳ ಪ್ರತಿನಿಧಿಗಳಿಗೆ ಆಹ್ವಾನ ಇರುತ್ತದೆ.

ಫೆಬ್ರವರಿಯಲ್ಲಿ ಸುಪ್ರೀಂ ತೀರ್ಪು ಪ್ರಕಟ?
ರಾಜ್ಯ ಚುನಾವಣೆಗೂ ಕಾವೇರಿ ತೀರ್ಪಿಗೂ ನಂಟು ಇರಲಿದೆ ಎನ್ನಲಾಗಿದೆ. ಫೆಬ್ರವರಿ ಅಂತ್ಯದಲ್ಲಿ ಕಾವೇರಿ ತೀರ್ಪು ಬರುವ ಸಾಧ್ಯತೆ ಬಹುತೇಕ ನಿಶ್ಚಳವಾಗಿದೆ. ಯಾಕೆಂದರೆ ಕಾವೇರಿ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ದೀಪಕ್ ಮಿಶ್ರಾ, ಅಮಿತಾವ್ ರಾಯ್, ಮತ್ತು ಕಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿರುವ ಅಮಿತಾವ್ ರಾಯ್ ಮಾರ್ಚ್ 1 ರಂದು ನಿವೃತ್ತಿಯಾಗಲಿದ್ದಾರೆ. ಹೀಗಾಗಿ, ಫೆಬ್ರವರಿಯಲ್ಲೇ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಬಹುದು ಎನ್ನಲಾಗಿದೆ. ಇದೇ ವೇಳೆಗೆ ರಾಜ್ಯ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟವಾದರೆ ಈ ಕಾವೇರಿ ತೀರ್ಪು ಕಾಂಗ್ರೆಸ್-ಬಿಜೆಪಿಗೆ ಪ್ರಮುಖ ಚುನಾವಣಾ ಅಸ್ತ್ರವಾಗಲಿದೆ.

   ಇದನ್ನೂ ಓದಿ: ಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?


Viewing all articles
Browse latest Browse all 80385

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>