Quantcast
Channel: Public TV
Viewing all articles
Browse latest Browse all 82146

ದೇವಾಲಯದ ಮೇಲೆ ಹಾರಿಸಿದ್ದ ಕೇಸರಿ ಧ್ವಜ ಸುಟ್ಟ ದುಷ್ಕರ್ಮಿಗಳ ಬಂಧನ

$
0
0

ಚಾಮರಾಜನಗರ: ಪಟ್ಟಣದ ಗಾಳಿಪುರ ಬಡಾವಣೆಯ ಗಣಪತಿ ದೇವಾಲಯದ ಮೇಲೆ ಹಾರಿಸಿದ್ದ ಕೇಸರಿ ಧ್ವಜ ಕಿತ್ತು ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿನ್ನೆ ತಡ ರಾತ್ರಿ ಕಾರ್ಯಾಚರಣೆಯನ್ನು ನಡೆಸಿ ಮೂವರನ್ನು ಬಂಧಿಸಿದ್ದಾರೆ.

ನಗರದ ಗಾಳಿಪುರ ಬಡಾವಣೆಯ ನಿವಾಸಿಗಳಾದ ಮಂಜು, ಬಂಗಾರು ಮತ್ತು ಪ್ರಕಾಶ್ ಎಂಬುವರೆ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ರಾತ್ರಿ ಆರೋಪಿಗಳು ಬಡಾವಣೆಯ ನಾಯಕರ ಬೀದಿಯಲ್ಲಿನ ಗಣಪತಿ ದೇವಾಲಯಾದ ಮೇಲೆ ಹಾರಿಸಿದ್ದ ಕೇಸರಿ ಧ್ವಜವನನ್ನು ಕಿತ್ತು ಸುಟ್ಟು ಹಾಕಿದ್ದರು.

ಧ್ವಜವನ್ನು ಬೈಕ್‍ನ ಸೀಟ್ ಮೇಲೆ ಇಟ್ಟು ಸುಟ್ಟಿದ್ದರಿಂದ ಒಂದು ಬೈಕ್ ಕೂಡ ಸುಟ್ಟು ಹೋಗಿತ್ತು. ಘಟನೆ ಬೆಳಕಿಗೆ ಬಂದ ನಂತರ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದರಿಂದ ಪೊಲೀಸರು ಸ್ಥಳದಲ್ಲಿಯೇ ಮೊಕ್ಕಂ ಹೂಡಿ ಯಾವುದೇ ಆಹಿತಕಾರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದರು. ಪ್ರಕರಣದ ತನಿಖೆ ಮುಂದುವರೆದಿದೆ.


Viewing all articles
Browse latest Browse all 82146

Trending Articles



<script src="https://jsc.adskeeper.com/r/s/rssing.com.1596347.js" async> </script>