Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80415

ರಾಜಕೀಯದಲ್ಲಿ ಯಾರು ಶತ್ರುಗಳು ಅಲ್ಲ, ಮಿತ್ರರೂ ಅಲ್ಲ- ಚುನಾವಣೆಗೆ ಈ ಕ್ಷೇತ್ರದಿಂದ ಕಣಕ್ಕಿಳ್ತೀನಿ ಅಂದ್ರು ಸಿಎಂ

$
0
0

ಮೈಸೂರು: ರಾಜಕೀಯದಲ್ಲಿ ಯಾರು ಕೂಡ ಶಾಶ್ವತವಾಗಿ ಮಿತ್ರರೂ ಅಲ್ಲ ಮತ್ತು ಶತ್ರುಗಳು ಅಲ್ಲ ಎಂದು ಹೇಳಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಚಿಂತಿಸಿದ್ದೇನೆ ಎಂದು ಬಹಿರಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು ತಾಲೂಕು ಉದ್ಬೂರು ಗ್ರಾಮದ ಸಮಾರಂಭದಲ್ಲಿ ಮಾತನಾಡಿದ ಅವರು, ಉದ್ಬೂರಿನ ಜನರಿಗೂ ನನಗೂ ಸುಮಾರು 35 ವರ್ಷಗಳ ಸಂಬಂಧವಿದೆ. ಅದಕ್ಕಿಂತ ಮೊದಲು ಕೂಡ ಈ ಗ್ರಾಮಕ್ಕೆ ಮತ ಕೇಳಲು ಬಂದಿದ್ದೆ ಎಂದು ಹೇಳಿದರು.

1983ರಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದಾಗಿನಿಂದಲೂ ಈ ಕ್ಷೇತ್ರದ ಜನರು ನನ್ನನ್ನು ಬೆಂಬಲಿಸುತ್ತಾ ಬಂದಿದ್ದಾರೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಒಂದು ಕಾಲದಲ್ಲಿ ಜಿಟಿ ದೇವೇಗೌಡ ಅವರು ಮತ್ತು ನಾನು ಒಂದೇ ಪಕ್ಷದಲ್ಲಿಯೇ ಇದ್ದೇವು. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಟಿ ದೇವೇಗೌಡ ಅವರು ಮತ್ತು ನಾನು ಪರಸ್ಪರ ಎದುರಾಳಿಗಳಾದರೂ ಅಚ್ಚರಿಯಿಲ್ಲ ಅಂದ್ರು.


Viewing all articles
Browse latest Browse all 80415


<script src="https://jsc.adskeeper.com/r/s/rssing.com.1596347.js" async> </script>