Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80435

ನಾವು ಎಲ್ಲ ಧರ್ಮದ ಸಂಸ್ಥಾಪಕರನ್ನು ಪೂಜಿಸುತ್ತೇವೆ: ಜಿ.ಪರಮೇಶ್ವರ್

$
0
0

ತುಮಕೂರು: ಲಿಂಗಾಯತ ಧರ್ಮದ ವಿಚಾರವನ್ನು ರಾಜಕೀಯ ಪಕ್ಷಗಳು ತೀರ್ಮಾನ ಮಾಡುವುದಲ್ಲ. ಸಮಾಜದ ವಿದ್ವಾಂಸರು, ಅರಿತ ಸ್ವಾಮೀಜಿಗಳು ತೀರ್ಮಾನ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಭಾಗಿಯಾದರೇ ಅದು ರಾಜಕಾರಣವಾಗುತ್ತದೆ. ಅದರಿಂದಲೇ ಕಾಂಗ್ರೆಸ್ ಪಕ್ಷ ಈ ವಿಚಾರದಿಂದ ದೂರ ಇದೆ. ಸರ್ಕಾರಕ್ಕೆ ಮನವಿ ಕೊಟ್ಟಿರುವುದರಿಂದ ಕಾನೂನಿನ ಚೌಕಟ್ಟಿನ ತೀರ್ಮಾನವನ್ನು ಸಿಎಂ ತೆಗೆದುಕೊಳ್ಳುತ್ತಾರೆ ಎಂದರು.

ನಾವು ಎಲ್ಲ ಧರ್ಮದ ಸಂಸ್ಥಾಪಕರನ್ನು ಪೂಜಿಸುತ್ತೇವೆ. ಇದರಿಂದ ಈ ವಿಚಾರದಲ್ಲಿ ರಾಜಕೀಯ ಬರಬಾರದು. ಐಟಿ ಇಲಾಖೆಯನ್ನು ಉಪಯೋಗಿಸಿಕೊಂಡು ನಮ್ಮನ್ನ ಅಸ್ಥಿರ ಮಾಡಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ತಪ್ಪು ಮಾಡಿದ್ರೆ ಐಟಿ ಇಲಾಖೆ ಕ್ರಮ ಕೈಗೊಳುತ್ತದೆ. ಬಿಜೆಪಿ ಅವರು ಯಾಕೆ ಹೀಗೆ ಹೋರಾಟ ಮಾಡ್ತಿದ್ದಾರೆ ನನಗೆ ಗೊತ್ತಿಲ್ಲ. ಕಾಂಗ್ರೆಸ್‍ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಸಿಎಲ್‍ಪಿ ನಿರ್ಧಾರ ಮಾಡಲಿದೆ ಎಂದರು.


Viewing all articles
Browse latest Browse all 80435

Latest Images

Trending Articles



Latest Images

<script src="https://jsc.adskeeper.com/r/s/rssing.com.1596347.js" async> </script>