Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80415

ರೌಡಿಶೀಟರ್‍ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ 6 ಆರೋಪಿಗಳ ಬಂಧನ

$
0
0

ರಾಮನಗರ: ರೌಡಿಶೀಟರ್‍ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಎರಡು ದಿನದ ಹಿಂದೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಸಮೀಪ ಈ ಘಟನೆ ನಡೆದಿತ್ತು. ಬೆಂಗಳೂರಿನ ನಂದಿನಿ ಲೇಔಟ್ ನ ಇಮ್ರಾನ್‍ನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕುದೂರು ಪೊಲೀಸರು ಆರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರೇಮ್ ಕುಮಾರ್, ಜಮೀರ್ ಪಾಷಾ, ಇಮ್ರಾನ್ ಖಾನ್, ಬಾಜಿ, ಬಾಬು, ಇನಾಯತ್ ಖಾನ್ ಬಂಧಿತ ಆರೋಪಿಗಳು. ಕೊಲೆಯಾದ ರೌಡಿಶೀಟರ್ ಕಿರುಕುಳ ತಾಳಲಾರದೆ ಕೊಲೆ ಮಾಡಿರುವುದಾಗಿ ಆರೋಪಿಗಳು ಬಾಯ್ ಬಿಟ್ಟಿದ್ದಾರೆ.

ಮಾಗಡಿ ತಾಲೂಕಿನ ಕುದೂರು ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಮಾರಕಾಸ್ತ್ರಗಳನ್ನ ವಶಪಡಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ. ಈ ಆರೋಪಿಗಳು ಇಮ್ರಾನ್‍ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಕುದೂರು-ಸೋಲೂರು ರಸ್ತೆಯ ಭೈರವೇಶ್ವರ ಫಾರ್ಮ್ ಹೌಸ್ ಬಳಿ ಶವವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದರು.

ಕೊಲೆಯಾದ ಇಮ್ರಾನ್ ಮೇಲೆ 2014 ರಲ್ಲಿ ರೌಡಿಶೀಟ್ ತೆರೆಯಲಾಗಿತ್ತು ಎಂದು ತಿಳಿದುಬಂದಿದೆ.


Viewing all articles
Browse latest Browse all 80415


<script src="https://jsc.adskeeper.com/r/s/rssing.com.1596347.js" async> </script>