Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80425

ಇನ್ಫೋಸಿಸ್ ಮಹಿಳಾ ಉದ್ಯೋಗಿ ನೇಣಿಗೆ ಶರಣು

$
0
0

ಮೈಸೂರು: ಇನ್ಫೋಸಿಸ್ ಮಹಿಳಾ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಮೈಸೂರಿನ ಹೆಬ್ಬಾಳ್‍ನಲ್ಲಿ ನಡೆದಿದೆ.

ಕಲಬುರಗಿ ಮೂಲದವರಾದ ಹಾಲಿ ಮೈಸೂರಿನ ಹೆಬ್ಬಾಳ್ ಮೂರನೇ ಹಂತದಲ್ಲಿ ವಾಸವಿದ್ದ 21 ವರ್ಷದ ಮೀನಾಕ್ಷಿ ಮೃತ ಯುವತಿ. ಈಕೆ ಇನ್ಫೋಸಿಸ್‍ನಲ್ಲಿ ಟ್ರೈನಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಕೆಲಸಕ್ಕೆ ತೆರಳಿರಲಿಲ್ಲ. ಇದರಿಂದ ಆಕೆಯ ಸ್ನೇಹಿತೆಯರು ಆಕೆಗೆ ಫೋನ್ ಮಾಡಿದ್ರೆ ಕರೆಯನ್ನೂ ಸ್ವೀಕರಿಸಿರಲಿಲ್ಲ. ನಂತರ ಅಕ್ಕಪಕ್ಕದ ಮನೆಯವರಿಗೆ ಕೊಳೆತ ವಾಸನೆ ಬರತೊಡಗಿತ್ತು. ಹೀಗಾಗಿ ಅವರು ಹೆಬ್ಬಾಳ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ರು.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಇನ್ಸ್ ಪೆಕ್ಟರ್ ತಿಮ್ಮೇಗೌಡ, ಎಎಸ್‍ಐ ಕೃಷ್ಣೇಗೌಡ ಪರಿಶೀಲನೆ ನಡೆಸಿದ್ದು, ಯುವತಿ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಮೃತದೇಹ ಸಂಪೂರ್ಣ ಕೊಳೆತುಹೋಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಹೆಬ್ಬಾಳ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.


Viewing all articles
Browse latest Browse all 80425


<script src="https://jsc.adskeeper.com/r/s/rssing.com.1596347.js" async> </script>