ತುಮಕೂರು: ಎರಡನೇ ಮದುವೆಯಾದ ಪತಿ ಹಾಗೂ ಎರಡನೇ ಪತ್ನಿಗೆ ಮೊದಲ ಪತ್ನಿ ಹಾಗೂ ಮನೆಯವರು ಗೂಸ ನೀಡಿದ ಘಟನೆ ತುಮಕೂರಿನ ಯಲ್ಲಾಪುರದಲ್ಲಿ ನಡೆದಿದೆ.
ಪತ್ನಿಯಿಂದ ಥಳಿತಕ್ಕೊಳಗಾದ ಮಹೇಶ ತುಮಕೂರು ಬೆಸ್ಕಾಂ ನೌಕರ. ಮಹೇಶ್‍ಗೆ ಚಿತ್ರದುರ್ಗದ ಅಕ್ಷತಾ ಜೊತೆ 13 ವರ್ಷದ ಹಿಂದೆ ವಿವಾಹವಾಗಿತ್ತು. ಈಗ ಪತಿ ಮಹೇಶ ತನಗೆ ವಂಚಿಸಿ ಎರಡನೇ ಮದುವೆಯಾಗಿದ್ದಾನೆಂದು ಮೊದಲ ಪತ್ನಿ ಹೇಳಿದ್ದಾರೆ.
ಮಹೇಶ ಎರಡನೆ ಪತ್ನಿ ಆಶಾಳೊಂದಿಗೆ ಯಲ್ಲಾಪುರದಲ್ಲಿ ವಾಸವಿದ್ದು, ಮನೆ ಮುಂದೆ ಮೊದಲ ಪತ್ನಿ ಅಕ್ಷತಾ ಹಾಗೂ ಮನೆಯವರು ಧರಣಿ ನಡೆಸಿದ್ದಾರೆ.
ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.