ನವದೆಹಲಿ: ವಾಜಪೇಯಿ ಪ್ರಧಾನಿಯಾಗಿದ್ದಾಗ ಕಳಸಾ ಬಂಡೂರಿ ವಿವಾದ ಬಗೆಹರಿಸುವ ಬಗ್ಗೆ ತೀರ್ಮಾನ ಮಾಡಿದರು. ಸಮಸ್ಯೆ ಬಗೆಹರಿಯದಿರಲು ಮನಮೋಹನ್ ಸಿಂಗ್ ಕಾರಣ. ಮೋದಿ ಭೇಟಿ ಸಂದರ್ಭದಲ್ಲಿ ವಿರೋಧ ಪಕ್ಷಗಳನ್ನು ಒಪ್ಪಿಸಿ ಎಂದು ಸಲಹೆ ನೀಡಿದ್ದರು. ಆದರೆ ಕಾಂಗ್ರೆಸ್‍ನವರು ಮಾಡಲೇ ಇಲ್ಲದ ಕಾರಣ ಸಮಸ್ಯೆ ಹೆಚ್ಚಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ನ್ಯಾಯಾಧಿಕರಣದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದರು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಬಿಎಸ್‍ವೈ, ಸೋನಿಯಾ ಗಾಂಧಿ ಗೋವಾ ಚುನಾವಣೆಯ ವೇಳೆ ಮಹದಾಯಿ ನದಿ ನೀರು ಹರಿಸಲು ಬಿಡುವುದಿಲ್ಲ ಎಂದು ಹೇಳಿದ್ದರು. ನಾನು ಆರೋಪ ಮಾಡುತ್ತಿಲ್ಲ ಇದ್ದ ವಿಚಾರವನ್ನು ಸ್ಪಷ್ಟ ಪಡಿಸುತ್ತಿದ್ದೇನೆ. ಗೋವಾದ ಬಿಜೆಪಿ ನಾಯಕರನ್ನು ನಾನು ಒಪ್ಪಿಸುತ್ತೇನೆ. ಕಾಂಗ್ರೆಸ್ ನಾಯಕರು ಅಲ್ಲಿನ ನಾಯಕರನ್ನು ಒಪ್ಪಿಸುತ್ತಾ ಎಂದು ಪ್ರಶ್ನಿಸಿದರು.
ಇದೇ ವೇಳೆ, ಪ್ರಹ್ಲಾದ್ ಜೋಷಿ ಮಾತನಾಡಿ, ಬಿಎಸ್‍ವೈ ಅಧಿಕಾರದ ಅವಧಿಯಲ್ಲಿ ಈ ಯೋಜನೆಗೆ ಹಣವನ್ನು ಮಂಜೂರು ಮಾಡಲಾಗಿದೆ. ಕಾಂಗ್ರೆಸ್ ಸಹಕಾರ ನೀಡಿದರೆ ಈ ಕೆಲಸ ಆಗುತ್ತದೆ. ಆದರೆ ಕಾಂಗ್ರೆಸ್‍ನವರು ಈ ಯೋಜನೆ ಪೂರ್ಣಗೊಂಡರೆ ಕ್ರೆಡಿಟ್ ಬಿಜೆಪಿಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನೀರಿನ ವಿಚಾರದಲ್ಲಿ ತಮಿಳುನಾಡಿನ ಸಂಸದರಂತೆ ನಮ್ಮವರು ಒಂದಾಗುವುದು ಯಾವಾಗ: ಧ್ರುವನಾರಾಯಣ
The post ನಾನು ಗೋವಾದ ಬಿಜೆಪಿಯವರನ್ನು ಒಪ್ಪಿಸುತ್ತೇನೆ, ಕಾಂಗ್ರೆಸ್ ಅಲ್ಲಿನ ನಾಯಕರನ್ನು ಒಪ್ಪಿಸುತ್ತಾ: ಬಿಎಸ್‍ವೈ appeared first on Kannada Public tv.