Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80435

ರೈಲು ಹರಿದರೂ ಬದುಕುಳಿದ 19 ವರ್ಷದ ಯುವತಿ-ಮೈ ಜುಮ್ಮೆನಿಸುವ ವಿಡಿಯೋ ನೋಡಿ

$
0
0

ಮುಂಬೈ: ಯುವತಿಯೊಬ್ಬಳು ರೈಲ್ವೆ ಹಳಿಯನ್ನು ಕ್ರಾಸ್ ಮಾಡುವ ವೇಳೆ ರೈಲು ಆಕೆಯ ಮೇಲೆ ಹರಿದರೂ ಪವಾಡಸದೃಶವಾಗಿ ಬದುಕಿರುವ ಘಟನೆ ನಗರದ ಕುರ್ಲಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಪ್ರತೀಕ್ಷಾ ನಾಟೇಕರ್ ರೈಲು ಮೈಮೇಲೆ ಹರಿದರೂ ಬದುಕುಳಿದ ಯುವತಿ. ಮೇ 13ರಂದು ಈ ಘಟನೆ ನಡೆದಿದ್ದು ಇದರ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಸದಾ ಜನಜಂಗುಳಿಯಿಂದ ಕೂಡಿರುವ ಕುರ್ಲಾ ರೈಲ್ವೆ ನಿಲ್ದಾಣದಲ್ಲಿ ಪ್ರತೀಕ್ಷಾ ರೈಲ್ವೆ ಟ್ರ್ಯಾಕ್ ದಾಟುವಾಗ ರೈಲು ಆಕೆಯ ಮೇಲೆ ಹರಿದಿದ್ದು ಪವಾಡವೆಂಬಂತೆ ಬದುಕುಳಿದಿದ್ದಾಳೆ.

ಇಯರ್ ಫೋನ್ ತಂದ ಆಪತ್ತು: ಮೇ 13 ರಂದು ಕುರ್ಲಾ ರೈಲ್ವೆ ನಿಲ್ದಾಣದ 7ನೇ ಪ್ಲಾಟ್ ಫಾರ್ಮ್‍ನಲ್ಲಿ ಈ ಘಟನೆ ನಡೆದಿದೆ. ಅಂದು ಪ್ರತೀಕ್ಷಾ ತನ್ನ ಸ್ನೇಹಿತರೊಬ್ಬರನ್ನು ಭೇಟಿಯಾಗಲು ಕುರ್ಲಾಗೆ ಹೋಗಿದ್ದಳು. ಸುಮಾರು 11 ಗಂಟೆ ವೇಳೆಯಲ್ಲಿ ಹಿಂದಿರುಗಿ ಬರುವಾಗ ರೈಲ್ವೆ ನಿಲ್ದಾಣದ 7ನೇ ಪ್ಲಾಟ್‍ಫಾರ್ಮ್‍ಗೆ ಹೋಗಲು ರೈಲ್ವೆ ಹಳಿ ದಾಟುತ್ತಿದ್ದಳು. ಈ ವೇಳೆ ಪ್ರತೀಕ್ಷಾ ಇಯರ್ ಫೋನ್ ಹಾಕಿಕೊಂಡು ಸ್ನೇಹಿತರೊಬ್ಬರ ಜೊತೆ ಮಾತನಾಡ್ತಿದ್ಳು. ಇದು ಲೂಪ್ ಲೈನ್ ಆಗಿದ್ದು ಎರಡೂ ಕಡೆಯಿಂದ ರೈಲು ಸಂಚರಿಸುತ್ತವೆ. ಪ್ರತೀಕ್ಷಾ ಇಯರ್ ಫೋನ್ ಹಾಕಿಕೊಂಡಿದ್ದರಿಂದ ಟ್ರ್ಯಾಕ್ ಮೇಲೆ ಗೂಡ್ಸ್ ರೈಲು ಬರುತ್ತಿದ್ದರೂ ಆಕೆಗೆ ಕೇಳಿಸಿರಲಿಲ್ಲ. ನಂತರ ಆಕೆ ನೋಡಿದಾಗ ರೈಲು ಆಗಲೇ ಸಮೀಪಿಸಿತ್ತು. ಆಗ ಆಕೆ ಗಾಬರಿಯಿಂದ ಪ್ಲಾಟ್‍ಫಾರ್ಮ್ ಕಡೆಗೆ ಓಡಿ ಮತ್ತೆ ರೈಲು ಬರುತ್ತಿದ್ದ ಟ್ರ್ಯಾಕ್ ಮೇಲೆ ಓಡಿದ್ದಾಳೆ.

ಆದರೆ ರೈಲಿನ ಸಿಬ್ಬಂದಿ ಬ್ರೇಕ್ ಹಾಕುವ ವೇಳೆಗಾಗಲೇ ರೈಲು ಆಕೆಗೆ ಡಿಕ್ಕಿ ಹೊಡೆದು ಆಕೆಯ ಮೇಲೆ ಹರಿದು ಮುಂದೆ ಸಾಗಿತ್ತು. ಸ್ಥಳದಲ್ಲಿದ್ದ ಜನರು ಯುವತಿ ಸಾವನ್ನಪ್ಪಿದ್ದಾಳೆ ಎಂದು ತಿಳಿದಿದ್ದರು. ಆದ್ರೆ ಚಕ್ರದ ಕೆಳಗೆ ನೋಡಿದಾಗ ಪ್ರತೀಕ್ಷಾ ಜೀವಂತವಾಗಿದ್ದಳು. ನಂತರ ಸ್ಥಳದಲ್ಲಿದ್ದವರು ಆಕೆಯನ್ನು ಹೊರಗೆಳೆದಿದ್ದು, ರೈಲ್ವೆ ಪೊಲೀಸರು ಆಕೆಯನ್ನು ರಾಜವಾಡಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಪ್ರತೀಕ್ಷಾಳಿಗೆ ಯಾವುದೇ ಗಂಭೀರ ಪ್ರಮಾಣದ ಗಾಯಗಳಾಗಿರಲಿಲ್ಲ. ಕೇವಲ ಎಡಗಣ್ಣಿನ ಹತ್ತಿರ ಸಣ್ಣ ಗಾಯಗಳಾಗಿತ್ತು.

ಪ್ರತೀಕ್ಷಾ ಇಯರ್ ಪೋನ್ ಹಾಕಿಕೊಂಡಿದ್ದರಿಂದ ಆಕೆಗೆ ರೈಲಿನ ಸದ್ದು ಕೇಳಿಸಿಲ್ಲ. ಅದು ಆಕೆಗೆ ತಿಳಿಯುವಷ್ಟರಲ್ಲಿ ರೈಲು ಆಕೆಯನ್ನು ಕ್ರಾಸ್ ಮಾಡಿತ್ತು ಎಂದು ರೈಲ್ವೆ ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಭೋರಡೆ ಹೇಳಿದ್ದಾರೆ.

 


Viewing all articles
Browse latest Browse all 80435

Latest Images

Trending Articles



Latest Images