Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80425

ಅವಘಡದಿಂದ ಕೂದಲೆಳೆ ಅಂತರದಲ್ಲಿ ನಟ ಶಾರೂಖ್ ಖಾನ್ ಪಾರು!

$
0
0

ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಅವಘಡವೊಂದರಲ್ಲಿ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.

ಹೌದು. ಆನಂದ್ ಎಲ್ ರಾಯ್ ಅವರ ಮುಂದಿನ ಚಿತ್ರವೊಂದರ ಶೂಟಿಂಗ್ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಯಾವುದೇ ಗಾಯಗಳಿಲ್ಲದೆ ಶಾರೂಖ್ ಖಾನ್ ಪಾರಾಗಿದ್ದಾರೆ. ಇದರಿಂದ ಶಾರುಖ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

ಏನಿದು ಘಟನೆ?: ಶಾರೂಖ್ ಖಾನ್ ಅವರು ಶೂಟಿಂಗ್ ಗೆ ಸಿದ್ಧರಾಗಿ ಕುಳಿತಿದ್ದ ವೇಳೆ ಶೂಟಿಂಗ್ ಸೆಟ್‍ನ ಛಾವಣಿ ಅವರ ಬಲಬದಿಯಲ್ಲಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಶಾರುಖ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಇಬ್ಬರು ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸದ್ಯ ಗಾಯಾಳುಗಳು ಸ್ಥಳೀಂiÀi ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಕ್ಷಣವೇ ಡಿಸ್ಚಾರ್ಜ್ ಆಗಿದ್ದಾರೆ.

ಅವಘಡದ ಹಿನ್ನೆಲೆಯಲ್ಲಿ ಶೂಟಿಂಗನ್ನು ಎರಡು ದಿನಗಳ ಮಟ್ಟಿಗೆ ಮುಂದೂಡಲಾಗಿದ್ದು, ಈ ವಾರಾಂತ್ಯದಲ್ಲಿ ಚಿತ್ರೀಕರಣ ಮುಂದುವರೆಯಲಿದೆ ಎಂದು ವರದಿಯಾಗಿದೆ.

ಶಾರೂಖ್ ನಟಿಸುತ್ತಿರುವ ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ಮತ್ತು ಕತ್ರೀನಾ ಕೈಫ್ ಕೂಡ ಅಭಿನಯಿಸುತ್ತಿದ್ದಾರೆ. ಶಾರೂಖ್ ಈ ಚಿತ್ರದಲ್ಲಿ ಕುಬ್ಜನ ಪಾತ್ರದಲ್ಲಿ ನಟಿಸುತ್ತಿದ್ದರೆ, ಅನುಷ್ಕಾ ಬುದ್ಧಿಮಾಂದ್ಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಯಶ್ ಚೋಪ್ರಾ ಅವರ `ಜಬ್ ತಕ್ ಹೈ ಜಾನ್’ ಚಿತ್ರದ ಬಳಿಕ ಇದೀಗ ಎರಡನೇ ಬಾರಿ ಶಾರೂಖ್, ಅನುಷ್ಕಾ ಮತ್ತು ಕತ್ರಿನಾ ಕೈಫ್ ಜೊತೆಯಾಗಿ ನಟಿಸುತ್ತಿದ್ದಾರೆ.


Viewing all articles
Browse latest Browse all 80425


<script src="https://jsc.adskeeper.com/r/s/rssing.com.1596347.js" async> </script>