Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 79850

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು

$
0
0

ಮಂಡ್ಯ: ಜಿಲ್ಲೆಯ ಚಿಕ್ಕದೇವರಾಜ ಅರಸು ನಾಲೆ ಸೇರಿದಂತೆ ಕಾವೇರಿ ನದಿ ಪಾತ್ರದ ಕಾಲುವೆಗಳಿಗೆ ನೀರು ಹರಿಸಲು ಹಿಂದೆ ಮುಂದೆ ನೋಡುವ ಸರ್ಕಾರ ಕೆಆರ್‌ಎಸ್‌ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡಲಾರಂಭಿಸಿದೆ.

ಮಂಗಳವಾರ ರಾತ್ರಿಯಿಂದಲೇ ನದಿಗೆ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ್ದು, ಜನವರಿ ಮತ್ತು ಫೆಬ್ರವರಿ ತಿಂಗಳ 5 ಟಿಎಂಸಿ ನೀರು ಹರಿಸಬೇಕಿದ್ದು, ಅದರ ಕೋಟದಂತೆ ನೀರು ಹರಿಸಲಾಗುತ್ತಿದೆ ಎನ್ನಲಾಗಿದೆ.

ಡ್ಯಾಂನಿಂದ ತಮಿಳುನಾಡಿಗೆ 2500 ಕ್ಯೂಸೆಕ್ ನೀರು ಬಿಟ್ಟಿದ್ದು. ಸದ್ಯ ವಿಸಿ ನಾಲೆಗೆ ಹರಿಸುತ್ತಿರುವ ನೀರು ಸೇರಿ ಡ್ಯಾಂನಿಂದ 5885 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.

ಅಣೆಕಟ್ಟೆಯ ಪ್ರಸ್ತುತ 112.57 ಅಡಿ ನೀರಿದ್ದು. ಒಳ ಹರಿವು – 227 ಕ್ಯೂಸೆಕ್, ಹೊರ ಹರಿವು – 5885 ಕ್ಯೂಸೆಕ್ ಇದ್ದು, ಗರಿಷ್ಠ ನೀರಿನ ಮಟ್ಟ 124.80 ಅಡಿ ನೀರು ಸಾಮರ್ಥ್ಯ ಹೊಂದಿದೆ.

The post ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು appeared first on Public TV News.


Viewing all articles
Browse latest Browse all 79850