– ತಾನೂ ಜ್ಯೂಸ್ ಎಂದು ಕುಡಿದ್ಲೂ
– ಮಕ್ಕಳ ಒದ್ದಾಟ ನೋಡಿ ಭಯಗೊಂಡು ವಿಷ ಕುಡಿದ ತಾಯಿ
ಯಾದಗಿರಿ: ಮನೆಯಲ್ಲಿಟ್ಟಿದ್ದ ಕ್ರಿಮಿನಾಶಕವನ್ನು ಜ್ಯೂಸ್ ಎಂದು ಕುಡಿದು ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಾಲೂಕಿನ ಕೊಡಾಲ್ ಗ್ರಾಮದಲ್ಲಿ ನಡೆದಿದೆ.
ಖೈರನ್‍ಬಿ (2) ಮತ್ತು 4 ತಿಂಗಳ ಅಫ್ಸಾನಾ ಮೃತ ಮಕ್ಕಳು. ಮಕ್ಕಳು ವಿಷ ಸೇವಿಸಿದ್ದಕ್ಕೆ ಆಘಾತಗೊಂಡು ತಾಯಿ ಶಹನಹಾಜ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಯಾದಗಿರಿ ಖಾಸಗಿ ಆಸ್ಪತ್ರೆಯಲ್ಲಿ ಶಹನಹಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಮಕ್ಕಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಖೈರನ್‍ಬಿ ತನ್ನ ತಂಗಿ ಅಫ್ಸಾನಾಳನ್ನು ಆಟವಾಡಿಸುತ್ತಿದ್ದಳು. ಈ ವೇಳೆ ಜ್ಯೂಸ್ ಎಂದು ಮೊದಲಿಗೆ ಬಾಟಲಿನಲ್ಲಿ ಹಾಕಿ ಮಗುವಿಗೆ ಕುಡಿಸಿದ್ದಾಳೆ. ನಂತರ ತಾನೂ ಕುಡಿದಿದ್ದಾಳೆ. ಈ ವೇಳೆ ತಾಯಿ ಶಹನಹಾಜ್ ಮನೆಯೊಳಗೆ ಕೆಲಸ ಮಾಡುತ್ತಿದ್ದರು. ಹೊರಗೆ ಬಂದು ನೋಡಿದಾಗ ಮಕ್ಕಳು ಒದ್ದಾಡುತ್ತಿದ್ದವು. ಆಗ ಮಕ್ಕಳು ವಿಷ ಸೇವಿಸಿದ್ದಕ್ಕೆ ಆಘಾತಗೊಂಡ ಶಹನಹಾಜ್ ಪತಿಯ ಮನೆಯವರು ಬೈಯುತ್ತಾರೆ ಎಂದು ತಾನೂ ವಿಷ ಕುಡಿದಿದ್ದಾರೆ.
ತಕ್ಷಣ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ತಿಂಗಳ ಮಗು ಅಫ್ಸಾನಾ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಇನ್ನೂ ತೀವ್ರವಾಗಿ ಅಸ್ವಸ್ಥಗೊಂಡಿರುವ ಖೈರನ್‍ಬಿಳನ್ನು ರಾಯಚೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾದ ಖೈರನ್‍ಬಿ ಮೃತಪಟ್ಟಿದ್ದಾಳೆ.
ಸದ್ಯ ತಾಯಿ ಶಹನಹಾಜ್ ಯಾದಗಿರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ವಡಗೇರಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
The post 4 ತಿಂಗ್ಳ ಮಗುವಿಗೆ ಬಾಟಲಿನಲ್ಲಿ ಕ್ರಿಮಿನಾಶಕ ಕುಡಿಸಿದ ಸೋದರಿ appeared first on Public TV News.