Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80385

ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್,ಬಿಜೆಪಿ ಮೇಲೆ ಬೀರಬಹುದಾದ ಪರಿಣಾಮಗಳೇನು?

$
0
0

ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ಎರಡೂ ಇಲ್ಲಿಯವರೆಗೆ ಕಾಂಗ್ರೆಸ್ ಹಿಡಿತದಲ್ಲಿದ್ದ ಕ್ಷೇತ್ರಗಳು. ಆದ್ರೆ ಕೇವಲ ಕ್ಷೇತ್ರಗಳನ್ನು ತನ್ನ ಬಳಿಯೇ ಉಳಿಸಿಕೊಳ್ಳುವುದು ಮಾತ್ರವಲ್ಲದೇ ಕಾಂಗ್ರೆಸ್ ಮೇಲೆ ಇದು ಹಲವಾರು ರಾಜಕೀಯ ಪರಿಣಾಮಗಳನ್ನು ಬೀರಲಿದೆ.

– ಉತ್ತರಪ್ರದೇಶ, ಉತ್ತರಾಖಂಡ್ ಫಲಿತಾಂಶದ ಬಳಿಕ ಮೊದಲ ಚುನಾವಣಾ ಫಲಿತಾಂಶ
– ಎರಡೂ ಕ್ಷೇತ್ರಗಳನ್ನು ಗೆದ್ದರಷ್ಟೇ ಬಸವಳಿದಿರುವ ಕಾಂಗ್ರೆಸ್‍ಗೆ ಹೊಸ ಹುಮ್ಮಸ್ಸು ಸಿಗಬಹುದು
– ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‍ಗೆ ಹೊಸ ಹುಮ್ಮಸ್ಸು ಸಿಗಬಹುದು
– ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅಲೆ ಇಲ್ಲ ಎಂಬ ಕಾಂಗ್ರೆಸ್ ವಾದಕ್ಕೆ ಪುಷ್ಠಿ ಸಿಗಬಹುದು
– ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲೇ ಇಡೀ ಸರ್ಕಾರವೇ ಪ್ರಚಾರಗೈದರೂ ಸೋಲಾದ್ರೆ ತೀವ್ರ ಮುಖಭಂಗ
– ಎರಡೂ ಕ್ಷೇತ್ರಗಳನ್ನು ಗೆದ್ದರಷ್ಟೇ ಪಕ್ಷದೊಳಗೆ ಸಿದ್ದರಾಮಯ್ಯ ಹಿಡಿತ ಹೆಚ್ಚಾಗಬಹುದು
– ನಂಜನಗೂಡು ಗೆಲುವು ಸಿಎಂಗಿರುವ ಅಹಿಂದ ನಾಯಕನೆಂಬ ಹಣೆಪಟ್ಟಿಯನ್ನು ಭದ್ರಗೊಳಿಸಬಹುದು
– ಮುಂದಿನ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಇತರೆ ಪಕ್ಷಗಳೊಂದಿಗೆ ಮೈತ್ರಿಗೆ `ಕೈ’ ಚಾಚಬಹುದು

ಉತ್ತರಪ್ರದೇಶ, ಉತ್ತರಾಖಂಡ್‍ನಲ್ಲಿ ಬಿಜೆಪಿ ಬೀಸಿದ ಬಿರುಗಾಳಿಯನ್ನು ಕರ್ನಾಟಕಕ್ಕೂ ಪಸರಿಸುವುದಕ್ಕೆ ಉಪ ಚುನಾವಣೆ ಮಾಧ್ಯಮವಾಗಲಿದೆ. ಹೀಗಾಗಿ ಅದರ ಮೇಲೂ ಈ ಫಲಿತಾಂಶ ಪರಿಣಾಮ ಬೀರಿ ಅದರ ಮುಂದಿನ ರಣತಂತ್ರಗಳನ್ನು ನಿರ್ಣಯಿಸಬಹುದು.

– ಉತ್ತರಪ್ರದೇಶ, ಉತ್ತರಾಖಂಡ್‍ನಲ್ಲಿರುವ ಬಿಜೆಪಿ ಅಲೆ ರಾಜ್ಯದಲ್ಲಿ ಬೀಸಲು ಅಂತಿಮ ವೇದಿಕೆ ಸಿದ್ಧ
– ಎರಡೂ ಕ್ಷೇತ್ರಗಳಲ್ಲಿ ಸೋಲಾದ್ರೆ ರಾಜ್ಯದಲ್ಲಿ ಬಿಜೆಪಿಗೆ ಮೋದಿ ಹೆಸರೇ ಅನಿವಾರ್ಯವಾಗಬಹುದು
– ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಾಯಕತ್ವದ ಬಗ್ಗೆ ಪಕ್ಷದೊಳಗೆ ಹೊಸ ಪ್ರಶ್ನೆಗಳು ಏಳಬಹುದು
– ಒಂದು ವೇಳೆ ಗೆದ್ದರೆ ಯಡಿಯೂರಪ್ಪ ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮಬಹುದು
– ಲಿಂಗಾಯಿತ, ದಲಿತ ಮತಗಳ ಸಮೀಕರಣ ಗೆದ್ದರೆ ಜಾತಿ ಸಮೀಕರಣಕ್ಕೆ ರಾಜ್ಯದಲ್ಲೂ ಹೊಸ ಭಾಷ್ಯ
– ಶ್ರೀನಿವಾಸ್ ಪ್ರಸಾದ್ ಸೋತರೆ ಪ್ರಮುಖ ದಲಿತ ನಾಯಕನೊಬ್ಬನ ರಾಜಕೀಯ ಜೀವನಕ್ಕೆ ತೆರೆ ನಿಶ್ಚಿತ
– ಶ್ರೀನಿವಾಸ್ ಪ್ರಸಾದ್ ಗೆದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಇನ್ನಷ್ಟು ಪಕ್ಷಾಂತರಿಗಳಿಗೆ ಮಣೆ


Viewing all articles
Browse latest Browse all 80385

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>