ಬೆಂಗಳೂರು: ಗಾಂಚಲಿ ಮಾಡೋರನ್ನ ಒದ್ದು ಒಳಗೆ ಹಾಕೋ ಪೊಲೀಸ್ರಿಗೆ ಈ ಕಿರಿಕ್ ಲೇಡಿನಾ ಯಾಕಾದ್ರೂ ಅರೆಸ್ಟ್ ಮಾಡಿದ್ವಿ ಅಂತ ತಲೆ ಕೆಡಿಸಿಕೊಂಡಿದ್ದಾರೆ. ಯಾಕಂದ್ರೆ ಅರೆಸ್ಟ್ ಆಗಿರೋ ಲೇಡಿ ಊಟದ ಮೆನು ಕೇಳಿ ಜೈಲಧಿಕಾರಿಗಳೇ ತಬ್ಬಿಬ್ಬಾಗಿ ಹೋಗಿದ್ದಾರೆ.
ಕಂಠಪೂರ್ತಿ ಕುಡಿದು ಸಿಕ್ಕ ಸಿಕ್ಕವರನ್ನೆಲ್ಲಾ ಹೊಡೆದು ಕೊನೆಗೆ ಪೊಲೀಸಪ್ಪನನ್ನೇ ಅಟ್ಟಾಡಿಸಿದ ಉಗಾಂಡ ಮಹಿಳೆಯನ್ನ ಹಿಡಿದು ಜೈಲಿಗೆ ಸೇರಿಸಿ ಪೊಲೀಸ್ರು ನಿರಾಳವಾದ್ರು. ಆದ್ರೀಗ ಜೈಲಧಿಕಾರಿಗೆ ತಲೆ ನೋವು ಶುರುವಾಗಿದೆ. ಯಾಕಂದ್ರೆ ಮರಿಯಾ ದಿನಚರಿಯೇ ವಿಚಿತ್ರವಾಗಿದೆ.
ಹೇಗಿದೆ ಊಟದ ಮೆನು?:
* ಬೆಳಗ್ಗೆ ಎದ್ದು ಮೂರು ಲೀಟರ್ ಹಸಿಹಾಲು
* ಕುರಿ ಮಾಂಸದ ಜೊತೆ ಗೋ ಮಾಂಸ ಬೇಕೆ ಬೇಕು
* ಗೋ ಮಾಂಸ, ಸೊಪ್ಪು ಬೆರಸಿದ ಸೂಪ್
* ರಾತ್ರಿಯ ಊಟದ ಜೊತೆಯಲ್ಲಿ ಉಡದ ಮಾಂಸ ಬೇಕು
* ಜೊತೆಯಲ್ಲಿ ಮದ್ಯ ಬೇಕೇಬೇಕಂತೆ
* ಮರಿಯಾಂ ಮೂರು ದಿನ ಸತತ ಮದ್ಯ ಸೇವಿಸೋ ತಾಕತ್ತು ಇದೆಯಂತೆ
ಹಸಿ ಹಾಲನ್ನ ಕುಡಿಯೋದು ಸೌಂದರ್ಯಕ್ಕೆ ಒಳ್ಳೆದೇನೋ ಸರಿ ಆದ್ರೆ ಹೆಚ್ಚು ಕೊಬ್ಬನ್ನು ಹಸಿಹಾಲು ಬರಿಸುತ್ತೆ ಅನ್ನೋದಕ್ಕೆ ಮರಿಯಾಂ ಕುಡಿಯುತ್ತಾ ಇದ್ಲೆನೋ ಗೊತ್ತಿಲ್ಲ. ಇನ್ನೊಂದು ಆಶ್ಚರ್ಯ ಅಂದ್ರೆ ಉಡದ ಮಾಂಸ ಕರ್ನಾಟಕದಲ್ಲಿ ಎಲ್ಲೂ ಸಿಕ್ಕೊಲ್ಲ ಮಾರಾಟ ಕೂಡ ಬ್ಯಾನ್ ಆಗಿದೆ ಆದ್ರೆ ಈ ಮಹಾತಾಯಿಗೆ ಅದೆಲ್ಲಿ ಸಿಕ್ತಾ ಇತ್ತೊ ಗೊತ್ತಿಲ್ಲ. ಆದ್ರೆ ಇದ್ರ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಿದೆ. ಇಷ್ಟೇಲ್ಲದರ ಜೊತೆಗೆ ಕುರಿ ಮಾಂಸದ ಜೊತೆಗೆ ಗೋ ಮಾಂಸವನ್ನ ಹಾಕಿ ಸೂಪ್ ಮಾಡೋದು ಮರಿಯಾಂಗೆ ಫೇವರಿಟ್ ಅಂತೆ. ಇನ್ನೂ ಬೆಳಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆಯವರೆಗೆ ಮೂರು ಬಾಟಲ್ ಕುಡಿದಿದ್ದವಳಿಗೆ ಮೂರು ದಿನ ಮದ್ಯ ಸೇವಿಸೋ ಕೆಪಾಸಿಟಿ ಕೂಡ ಇದೆಯಂತೆ.
ಊರುದ್ದ ಪಟ್ಟಿಯನ್ನ ನೋಡಿ ತಲೆಕೆಡಿಸಿಕೊಂಡ ಜೈಲಾಧಿಕಾರಿಗಳು ಎಲ್ಲಾ ಕೈದಿಗಳಿಗೂ ಏನು ಊಟ ಸಿಕ್ಕುತ್ತೆ ಅದನ್ನೆ ತಿಂದು ಕಾಲ ಕಳಿಯಮ್ಮ ಅಂತಾ ಹೇಳಿದ್ದಾರಂತೆ. ಆದ್ರೆ ಮೂರು ದಿನ ಊಟ ಇಲ್ದೇ ಇರೋ ತಾಕತ್ತು ಇರೋ ಮರಿಯಾಂ ಜಾಮೀನು ಸಿಕ್ಕಿದ್ರೆ ಜೈಲಾಧಿಕಾರಿಗಳು ಬಚಾವ್. ಇಲ್ಲ ಅಂದ್ರೆ ಅವರೂ ಕೂಡ ಮರಿಯಾಂ ಹಿಡಿಯೋಕೆ ರಗ್ಗಿಡ್ಕೊಂಡು ರೆಡಿಯಾಗ್ಬೇಕು ಅಷ್ಟೇ.
The post ಉಗಾಂಡ ಲೇಡಿ ಊಟದ ಮೆನು ಕೇಳಿ ಜೈಲಾಧಿಕಾರಿಗಳೇ ಶಾಕ್! appeared first on Kannada Public tv.