ಬೆಂಗಳೂರು: ಎತ್ತು ಏರಿಗೆ ಕೋಣ ನೀರಿಗೆ ಇಳಿತು ಅನ್ನೋ ಹಾಗಾಗಿದೆ ರಾಜಕೀಯ ಪಕ್ಷಗಳ ಬೆಳವಣಿಗೆ. ಕಾಂಗ್ರೆಸ್, ಜೆಡಿಎಸ್ ಭಿನ್ನಮತ, ಬಂಡಾಯದ ಸುದ್ದಿ ತಣ್ಣಗಾಗ್ತಿರುವಾಗ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ತೊಡೆತಟ್ಟಿದ್ದಾರೆ. ಆದ್ರೆ ಆರಂಭದಲ್ಲೇ ಇದನ್ನ ಚಿವುಟಿಹಾಕಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ.
ನಾಳೆ ನಡೆಯುವ ಪದಾಧಿಕಾರಿಗಳ ಸಭೆಗೂ ಮೊದಲೇ ಬಿಎಸ್‍ವೈ ವಿರುದ್ಧ ದೂರು ನೀಡುವ ನಿರ್ಧಾರಕ್ಕೆ ಹೈಕಮಾಂಡ್ ರೆಡ್‍ಸಿಗ್ನಲ್ ನೀಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡಲು ಈಶ್ವರಪ್ಪಗೆ ಇನ್ನೂ ಗ್ರೀನ್‍ಸಿಗ್ನಲ್ ಸಿಕ್ಕಿಲ್ಲ. ಹಾಗಾಗಿ ಈಶ್ವರಪ್ಪ ಇವತ್ತು ದೆಹಲಿಗೆ ತೆರಳುವುದು ಅನುಮಾನವಾಗಿದೆ.
ಶಿವಮೊಗ್ಗ ಜಿಲ್ಲಾಧ್ಯಕ್ಷರನ್ನಾಗಿ ಕೆಜೆಪಿಯಿಂದ ಬಂದ ರುದ್ರೇಗೌಡರನ್ನು ನೇಮಕ ಮಾಡಿದ್ದರಿಂದ ಸಿಡಿದೆದ್ದಿರುವ ಈಶ್ವರಪ್ಪ, ಬಿಎಸ್‍ವೈ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪ ವಿರುದ್ಧವೇ ಕೆಜೆಪಿಯಿಂದ ಸ್ಪರ್ಧಿಸಿದ್ದರು. ಹೀಗಾಗಿ ಈಶ್ವರಪ್ಪ ಸೋಲುಂಡಿದ್ದರು.
The post ಅಮಿತ್ ಶಾ ಭೇಟಿಗೆ ಈಶ್ವರಪ್ಪಗೆ ಹೈಕಮಾಂಡ್ ರೆಡ್ ಸಿಗ್ನಲ್ appeared first on Kannada Public tv.