ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಇಂದು ಜೆಡಿಎಸ್ ಬೃಹತ್ ಸಮಾವೇಶ ನಡೆಯಲಿದೆ.
ವಿಧಾನ ಪರಿಷತ್ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭ ಅಂತಾ ಹೇಳಿಕೊಂಡಿದ್ರೂ ಭಿನ್ನಮತೀಯ ನಾಯಕ ಶಾಸಕ ಚೆಲುವರಾಯಣಸ್ವಾಮಿಗೆ ಟಾಂಗ್ ಕೊಡಲು ಈ ಸಮಾವೇಶ ಆಯೋಜಿಸಲಾಗಿದೆ ಎನ್ನಲಾಗ್ತಿದೆ.
ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ನೇತೃತ್ವದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ 40 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ.
ಬೆಳಗ್ಗೆ 10.30ಕ್ಕೆ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಆದ್ರೆ ಈ ಸಮಾರಂಭಕ್ಕೆ ಅಮಾನತುಗೊಂಡ ಶಾಸಕರನ್ನು ಆಹ್ವಾನಿಸಿಲ್ಲ.
The post ಮಂಡ್ಯದಲ್ಲಿ ಇಂದು ಜೆಡಿಎಸ್ ಬೃಹತ್ ಸಮಾವೇಶ appeared first on Kannada Public tv.