ಚಿಕ್ಕಳ್ಳಾಪುರ: ಸ್ವತಃ ತೆಲುಗು ನಟ ಬಾಲಕೃಷ್ಣ ಚಲಿಸುತ್ತಿದ್ದ ಟಾಟಾ ಸಫಾರಿ ಕಾರು ಅಪಘಾತಕ್ಕೀಡಾಗಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ನಟ ಬಾಲಕೃಷ್ಣ ಪಾರಾಗಿದ್ದಾರೆ.
ರಾಜ್ಯದ ಆಂಧ್ರದ ಗಡಿಭಾಗ ಹಿಂದೂಪುರಂನ ಶಾಸಕ ಬಾಲಕೃಷ್ಣ ಚಿಲಮತ್ತೂರು ನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು, ತಮ್ಮ ಬಿಳಿ ಬಣ್ಣದ ಟಾಟಾ ಸಫಾರಿ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ರ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದರು. ಈ ವೇಳೆ ಪರಗೋಡು ಗ್ರಾಮದ ಚಿತ್ರಾವತಿ ಜಲಾಶಯ ಬಳಿಯ ತಿರುವಿನಲ್ಲಿ ಎಮ್ಮೆಯೊಂದು ಅಡ್ಡ ಬಂದಿದೆ. ಹೀಗಾಗಿ ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಬಾಲಕೃಷ್ಣ ರ ನಿಯಂತ್ರಣ ತಪ್ಪಿದ ಟಾಟಾ ಸಫಾರಿ ಕಾರು ಅದೃಷ್ಟ ಎಂಬಂತೆ ರಸ್ತೆ ವಿಭಜಕದ ಮಧ್ಯ ಭಾಗದಲ್ಲಿ ಸಿಲುಕಿಕೊಂಡಿದೆ. ಇದ್ರಿಂದ ಆಗಬಹುದಾದ ಭಾರೀ ಅನಾಹುತ ತಪ್ಪಿ ನಟ ಬಾಲಕೃಷ್ಣ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಅಪಘಾತ ನಂತರ ನಟ ಬಾಲಕೃಷ್ಣ ತಮ್ಮ ಹಿಂದೆ ಬರುತ್ತಿದ್ದ ಮತ್ತೊಂದು ಕಾರಿನ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಆಂಧ್ರದ ಚಿಲಮತ್ತೂರು ಪೊಲೀಸರು ರಸ್ತೆ ವಿಭಜಕದ ಮೇಲಿದ್ದ ಟಾಟಾ ಸಫಾರಿ ಕಾರನ್ನ ಕ್ರೇನ್ ಮೂಲಕ ತೆರವುಗೊಳಿಸಿ, ದೊಡ್ಡ ಲಾರಿ ಮೂಲಕ ಕಾರನ್ನುತೆಗೆದುಕೊಂಡು ಹೋಗಿದ್ದಾರೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
The post ಬಾಗೇಪಲ್ಲಿಯಲ್ಲಿ ರಸ್ತೆ ಡಿವೈಡರ್‍ಗೆ ಕಾರು ಡಿಕ್ಕಿ; ನಟ ಬಾಲಕೃಷ್ಣ ಪಾರು appeared first on Kannada Public tv.