ದಾವಣಗರೆ: ಮನುಷ್ಯರು ಹುಟ್ಟುಹಬ್ಬ ಮಾಡೋದು ನೊಡಿದ್ದೇವೆ. ಪಾರ್ಟಿ, ಡಿನ್ನರ್, ಕೇಕ್ ಕಟಿಂಗ್ ಎಂಥೆಲ್ಲ ಫುಲ್ ಜೋರಾಗಿ ಆಚರಣೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಟಗರು ಪ್ರೇಮಿಯೊಬ್ಬರು ತನ್ನ ಟಗರಿಗೆ ಎರಡನೇ ವರ್ಷದ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.
ದಾವಣಗೆರೆಯ ಹೊನ್ನಾಳಿ ತಾಲೂಕಿನ ದುರ್ಗಾಂಬಿಕಾ ದೇವಾಲಯ ಬಡಾವಣೆಯಲ್ಲಿ ‘ಲಕ್ಕಿ’ ಹೆಸರಿನ ಟಗರಿಗೆ ಆ ಬಡಾವಣೆಯ ಯುವಕರೆಲ್ಲ ಸೇರಿ ಐದು ಕೆಜಿ ತೂಕದ ಕೇಕ್ ತಂದು ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಪುನೀತ್ ಅವರಿಗೆ ಸೇರಿದ ಟಗರು ಇದಾಗಿದ್ದು, ಟಗರು ಕಾಳಗದಲ್ಲೇ ತನ್ನದೇ ಆದ ಹೆಸರನ್ನು ಪಡೆದಿದೆ.
ಹೊನ್ನಾಳಿ, ದಾವಣಗೆರೆ, ಶಿಕಾರಿಪುರ, ರೆಟ್ಟೆಹಳ್ಳಿ, ರಾಣೀಬೆನ್ನೂರು ಸೇರಿದಂತೆ ಎಲ್ಲಿ ಟಗರು ಕಾಳಗ ನಡೆಯುತ್ತೋ ಅಲ್ಲಿ ಈ ಲಕ್ಕಿ ಹಾಜರಿರುತ್ತದೆ. ರಣರಂಗದಲ್ಲಿ ಕಾದಾಡಿ ಸಾಕಷ್ಟು ಪದಕ, ಪ್ರಶಸ್ತಿಯನ್ನು ಮತ್ತು ಬಿರುದುಗಳನ್ನು ತನ್ನದಾಗಿಸಿಕೊಂಡಿದೆ. ಬಡಾವಣೆಯ ಯುವಕರಿಗೆ ಅಚ್ಚುಮೆಚ್ಚಿನ ಲಕ್ಕಿಯ ಹುಟ್ಟುಹಬ್ಬವನ್ನು ದುರ್ಗಾಂಬಿಕಾ ದೇವಾಲಯದ ಮುಂಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.
The post 5 ಕೆಜಿ ಕೇಕ್ ಕಟ್ ಮಾಡಿ ಲಕ್ಕಿ ಟಗರಿನ ಹುಟ್ಟುಹಬ್ಬ ಆಚರಿಸಿದ ಯುವಕರು appeared first on Public TV News.