Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80435

ಕುರುಡಿಯ ಪಾತ್ರದಲ್ಲಿ ಶೈಲೂ ಸುಂದರಿ

$
0
0

ಬೆಂಗಳೂರು: ಕಾಮಿಡಿ ಕಮಾಲ್ ಮೂಲಕ ಸ್ಯಾಂಡಲ್‍ವುಡ್ ಸಿನಿರಸಿಕರಿಗೆ ನಗುವಿನ ಟಾನಿಕ್ ಕೊಡ್ತಿರೋ ಮಿತ್ರ ಈಗ ಸಿರಿಯಸ್ ಆಗಿ ಏನೋ ಹೇಳೋಕ್ಕೆ ಹೊರಟಿದ್ದಾರೆ. ಇನ್ನು ಇವರ ಜೊತೆ ಶೈಲೂ ಬೆಡಗಿ ಭಾಮ ಕೂಡ ಸೇರಿಕೊಂಡಿದ್ದಾರೆ.

 

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಶೈಲೂ ಸಿನಿಮಾದಲ್ಲಿ ಮಿಂಚಿದ ಭಾಮ ಈಗ ರಾಗದಲ್ಲಿ ಬ್ಯೂಸಿಯಾಗಿದ್ದಾರೆ. ಮೊದಲ ಬಾರಿಗೆ ಭಾಮ ತಮ್ಮ ಸಿನಿಜರ್ನಿಯಲ್ಲಿ ಅಂಧೆಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು ಮಿತ್ರ ಜೊತೆ ಕೂಡ ಫಸ್ಟ್ ಟೈಂ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಚಿತ್ರಕ್ಕೆ ಪಿ.ಸಿ ಶೇಖರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಭಾಮ `ಅನು’ ಅನ್ನೋ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಾಹುಕಾರನ ಕುಟುಂಬದಲ್ಲಿ ಹುಟ್ಟಿ ಎಲ್ಲ ಐಶ್ವರ್ಯಗಳು ಇದ್ರು ಏನನ್ನು ನೋಡಲಾಗದ ಪಾತ್ರ. ಕಣ್ಣುಗಳ ಜೊತೆ ಸಖತ್ ಕಸರತ್ತು ಮಾಡಿರೋ ಭಾಮ ಪಾತ್ರಕ್ಕಾಗಿ ತುಂಬಾ ಕಸ್ಟಪಟ್ಟಿದ್ದಾರೆ. ಈಗಾಗ್ಲೇ 45 ದಿನಗಳ ಶೂಟಿಂಗ್ ಕೂಡ ಕಂಪ್ಲೀಟ್ ಮಾಡಿದ್ದಾರೆ.

ಮಿತ್ರ ನಟನೇ ಜೊತೆ ನಿರ್ಮಾಣ ಮಾಡ್ತಿರೋ ಮೊದಲ ಸಿನಿಮಾ ಇದಾಗಿದ್ದು, ಮಿತ್ರ ಕೂಡ ಕುರುಡನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕ ಮತ್ತು ನಾಯಕಿ ಇಬ್ಬರು ಅಂಧರಾಗಿ ಕಾಣಿಸಿಕೊಂಡಿದ್ದಾರೆ. ರಾಗ ಚಿತ್ರತಂಡ ಆಲ್‍ಮೋಸ್ಟ್ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡು ಎಡಿಟಿಂಗ್, ಡಬ್ಬಿಂಗ್ ಶುರುಮಾಡಿಕೊಂಡಿದೆ.

 


Viewing all articles
Browse latest Browse all 80435


<script src="https://jsc.adskeeper.com/r/s/rssing.com.1596347.js" async> </script>