Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80435

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ

$
0
0

– ಐಟಿ, ಬಿಟಿ ಕಂಪೆನಿಯಲ್ಲಿ ಉದ್ಯೋಗ ಸಿಗಲ್ಲ
– ಗ್ರೂಪ್ ಸಿ, ಡಿ ಹುದ್ದೆಗಳಲ್ಲಿ ಶೇ.100 ಮೀಸಲಾತಿ

ಬೆಂಗಳೂರು: ರಾಜ್ಯದಲ್ಲಿ ಅಂತೂ ಕನ್ನಡಿಗರಿಗೆ ಮನ್ನಣೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ.100 ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಕರಡು ನೋಟಿಫಿಕೇಶನ್ ಹೊರಡಿಸಿದೆ.

ಕರ್ನಾಟಕ ಇಂಡಸ್ಟ್ರೀಯಲ್ ಎಂಪ್ಲಾಯ್ ಮೆಂಟ್ ಕಾಯ್ದೆ ತಿದ್ದುಪಡಿಗೊಳಿಸಿ ರಾಜ್ಯ ಸರ್ಕಾರ ನೋಟಿಫಿಕೇಶನ್ ಹೊರಡಿಸಿದೆ. ರಾಜ್ಯದ ಭೂಮಿ, ಜಮೀನು ಮತ್ತು ನೀರು ಬಳಕೆ ಮಾಡಿಕೊಂಡಿರುವ ಎಲ್ಲ ಕೈಗಾರಿಕೆಗಳು ಮತ್ತು ಉದ್ಯಮಗಳು ಇನ್ನು ಮುಂದೆ ಗ್ರೂಪ್ ಡಿ ಮತ್ತು ಸಿ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕಾಗುತ್ತದೆ. ಆದರೆ ಗ್ರೂಪ್ ಎ ಮತ್ತು ಬಿ ಹುದ್ದೆಗಳು ಮೀಸಲಾತಿ ವ್ಯಾಪ್ತಿಗೆ ತರಲಾಗಿಲ್ಲ.

ಕರ್ನಾಟಕ ಇಂಡಸ್ಟ್ರೀಯಲ್ ಎಂಪ್ಲಾಯ್ ಮೆಂಟ್ ಕಾಯ್ದೆಯ ವ್ಯಾಪ್ತಿ ಅಡಿ ಐಟಿ, ಬಿಟಿ ಕಂಪನಿಗಳು ಬಾರದ ಇರುವ ಕಾರಣ ಇಲ್ಲಿ ಮೀಸಲಾತಿ ಸಿಗುವುದಿಲ್ಲ. ಈಗಾಗಲೇ ಕರಡು ಅಧಿಸೂಚನೆ ಹೊರಿಡಿಸಿದ್ದು, 30 ದಿನಗಳ ಒಳಗೆ ಅಂತಿಮ ಅಧಿಸೂಚನೆ ಜಾರಿಗೆ ಬರಲಿದೆ. ನೋಟಿಫಿಕೇಶನ್ ಪ್ರಕಾರ ಕ್ಲರ್ಕ್, ಗುಮಾಸ್ತ, ಜವಾನ ಸೇರಿದಂತೆ ಕೆಳಹಂತದ ಎಲ್ಲ ಹುದ್ದೆಗಳು ಕನ್ನಡಿಗರಿಗೆ ಮೀಸಲಿಡಬೇಕಾಗುತ್ತದೆ.

ತಿದ್ದುಪಡಿಯಲ್ಲಿ ಕನ್ನಡಿಗರು ಅಂದ್ರೆ ಯಾರು?
ಕರ್ನಾಟಕ ರಾಜ್ಯದಲ್ಲಿ ಜನಿಸಿದವರಿಗೆ ಮಾತ್ರ ಮೀಸಲಾತಿ ಸಿಗಲಿದೆ. ಅಷ್ಟೇ ಅಲ್ಲದೇ 15 ವರ್ಷದಿಂದ ಕರ್ನಾಟಕದಲ್ಲಿ ವಾಸವಿರುವವರನ್ನು ಕನ್ನಡಿಗರು ಎಂದು ಪರಿಗಣಿಸಬಹುದು. ಪ್ರಸ್ತುತ ಕನ್ನಡ ನಾಡಿನಲ್ಲೇ ಜೀವನ ಸಾಗಿಸುತ್ತಿರಬೇಕು. ಕನ್ನಡ ಭಾಷೆ ಓದಲು ಮತ್ತು ಬರೆಯಲು ಮತ್ತು ಮಾತನಾಡಲು ಬರಬೇಕು.


Viewing all articles
Browse latest Browse all 80435

Latest Images

Trending Articles



Latest Images

<script src="https://jsc.adskeeper.com/r/s/rssing.com.1596347.js" async> </script>