ಮಂಗಳೂರು/ಉಡುಪಿ: ಕೇಂದ್ರ ಸರ್ಕಾರ 500 ಮತ್ತು 1000 ಮುಖಬೆಲೆಯ ನೋಟುಗಳು ಬ್ಯಾನ್ ಮಾಡಿದ ಹಿನ್ನಲೆಯಲ್ಲಿ ಕಾಳಧನಿಕರು ತಮ್ಮಲ್ಲಿರುವ ಹಣವನ್ನು ದೇವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಕಂತೆ ಕಂತೆ ಹಣವನ್ನು ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ದೇವಾಲಯಗಳಿಗೆ ಬರುವ ಭಕ್ತರ ಪ್ರಮಾಣವು ಇಳಿಕೆಯಾಗುತ್ತಿದೆ.
ಆದರೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೆಚ್ಚಿನ ಪ್ರಮಾಣದ ತೊಂದರೆಗಳಾಗಿಲ್ಲ. ದೇವಸ್ಥಾನದ ಸೇವಾ ಕೌಂಟರ್‍ಗಳಲ್ಲಿ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಪಡೆಯುವುದನ್ನು ನಿಲ್ಲಿಸಿದ್ದರಿಂದ ಭಕ್ತರಿಗೆ ಸ್ವಲ್ಪ ತೊಂದರೆಗಳಾಗಿವೆ. ಆದರೆ ಈವರೆಗೆ ಸಣ್ಣ ಪ್ರಮಾಣದಲ್ಲಿ ಹಣ ಹಾಕುವ ಭಕ್ತರು ಈಗ 500 ಮತ್ತು 1000 ರೂ.ಗಳನ್ನೇ ಹೆಚ್ಚಾಗಿ ಹಾಕುತ್ತಿದ್ದಾರೆ ಎಂದು ಅರ್ಚಕರು ತಿಳಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ದೇವಸ್ಥಾನದ ಕೌಂಟರ್‍ಗಳಲ್ಲಿ ಹಳೆಯ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಆದರೆ ಭಕ್ತಾದಿಗಳು ಹುಂಡಿಗೆ ಬ್ಯಾನ್ ಆಗಿರುವ ನೋಟುಗಳನ್ನು ಹಾಕುತ್ತಿದ್ದಾರೆ. ಇದೇ ತಿಂಗಳು 22 ಮತ್ತು 24ರಂದು ಹುಂಡಿಯಲ್ಲಿನ ಹಣ ಎಣಕೆ ಮಾಡಲಾಗುವುದು. ಅಂದು ಎಷ್ಟು ಪ್ರಮಾಣದಲ್ಲಿ ಹಳೆಯ ನೋಟುಗಳು ಬಂದಿವೆ ಎಂದು ಗೊತ್ತಾಗುತ್ತದೆ. ಕಳೆದ ಎರಡೂ ದಿನಗಳಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂದು ಪಬ್ಲಿಕ್ ಟಿವಿ ತಿಳಿಸಿದ್ದಾರೆ.
ಕೊಲ್ಲೂರು: ಕಳೆದ ವರ್ಷ ಕೊಲ್ಲೂರು ದೇವಸ್ಥಾನದಿಂದ ರಾಜ್ಯ ಸರ್ಕಾರಕ್ಕೆ 40 ಕೋಟಿ ಆದಾಯ ಬಂದಿತ್ತು. ಹೀಗಾಗಿ ಮುಜರಾಯಿ ಇಲಾಖೆಯ ಮುಖ್ಯ ಆದಾಯದ ಮೂಲವಾಗಿದೆ. 500 ಮತ್ತು 1000 ಮುಖಬೆಲೆಯ ನೋಟು ನಿಷೇಧವಾದ ನಂತರ ಎರಡು ದಿನಗಳು ಮಾತ್ರ ಹಳೆಯ ನೋಟುಗಳನ್ನು ಸ್ವೀಕರಿಸಲಾಗಿತ್ತು. ನಂತರ ಸೇವಾ ಕೌಂಟರ್‍ಗಳಲ್ಲಿ ಹಳೆಯ ನೋಟುಗಳನ್ನು ಪಡೆಯುವುದನ್ನು ನಿಲ್ಲಿಸಲಾಗಿದೆ.
ದೇವಸ್ಥಾನದ ಸೇವಾ ಕೌಂಟರ್‍ಗಳಲ್ಲಿ ಹಳೆಯ ನೋಟುಗಳನ್ನು ಪಡೆಯಲಾಗುತ್ತಿಲ್ಲ. ಆದರೆ ಹುಂಡಿಯಲ್ಲಿ ಹಾಕುವ ಹಣದ ಬಗ್ಗೆ ಯಾವುದೇ ನಿರ್ಬಂಧ ಹಾಕಿಲ್ಲ. ಪ್ರತಿ ತಿಂಗಳಿನಂತೆ ನ.29 ರಂದು ಹುಂಡಿಯನ್ನು ತೆಗೆಯಲಾಗುವುದು. ಅಂದು ಎಷ್ಟು ಹಣ ಬಿದ್ದಿದೆ ಎನ್ನುವುದು ತಿಳಿಯಲಿದೆ ಎಂದು ದೇವಸ್ಥಾನದ ಹಿರಿಯ ಅಧಿಕಾರಿ ಪಬ್ಲಿಕ್ ಟಿವಿ ತಿಳಿಸಿದ್ದಾರೆ.