ಬೆಂಗಳೂರು: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಸಾಹಸ ಮಾಡುವಾಗ ಖಳನಟರಾದ ಅನಿಲ್ ಮತ್ತು ಉದಯ್ ದುರಂತ ಅಂತ್ಯ ಕಂಡಿದ್ದಾರೆ. ಅವರ ಸಾವಿಗೂ ಮುನ್ನ ಸಾಹಸ ಮಾಡುವ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಅನಿಲ್ ಮಾತನಾಡಿದ್ರು.
ಹೆಲಿಕಾಪ್ಟರ್‍ನಿಂದ 100 ಅಡಿ ಮೇಲಿನಿಂದ ದುನಿಯಾ ವಿಜಯ್ ಹಾಗೂ ಖಳನಟರಾದ ಅನಿಲ್ ಹಾಗೂ ಉದಯ್ ಜಿಗಿಯಬೇಕಿತ್ತು. ಇದಕ್ಕೂ ಮುಂಚೆ ಪಬ್ಲಿಕ್ ಟಿವಿ ವರದಿಗಾರರೊಂದಿಗೆ ಅನಿಲ್ ಮಾತನಾಡಿದ್ರು. ಏನ್ ಅನಿಲ್ ಅವರೇ ನಿಮಗೆ ಈಜು ಬರುತ್ತಾ? ಎಂದು ಪ್ರಶ್ನಿಸಿದ್ದಕ್ಕೆ ಸ್ವಿಮ್ಮಿಂಗ್ ಬರತ್ತೆ. ಆದರೆ ಫಸ್ಟ್ ಟೈಮ್ ಮೇಲಿಂದ ಎಗರ್ತದ್ದೀವಿ ಅಲ್ವ. ಹೀಗಾಗಿ ಮನಸ್ಸಿನ ಒಳಗಡೆ ಏನಾಗತ್ತೋ ಅನ್ನೂ ಭಯ ಇದೆ. ನಂಗ್ ಅಲ್ರೆಡಿ ಬರೋದು ಸ್ವಲ್ಪ ಸ್ವಿಮ್ಮಿಂಗ್. ಹೀಗಾಗಿ 20 ಅಡಿ 30 ಅಡಿ ಲೆಂತ್ ಹೊಡೆದು ಅಭ್ಯಾಸವಿಲ್ಲ. ಹಂಗಾಗಿ ನಮಗೆ ಬರಲ್ಲ ಅಂತಾ ಹೇಳ್ತಿದ್ದೀವಿ. ಆದ್ರೆ ಇಲ್ಲಿ ಎಗರೋದು ಅನಿವಾರ್ಯವಾಗಿದೆ. ನೀರಿಗೆ ಬಿದ್ಮೇಲೆ ಈಜಲು ಆಗಿಲ್ಲಾಂದ್ರೆ ಎರಡು ಸಲ ಎದ್ದೇಳ್ತೀವಿ ಮೂರನೇ ಸಲಕ್ಕೆ ಭಗವಂತ ಹಿಡ್ಕೋತ್ತಾನೆ. ನೆಮ್ಮದಿಯಾಗಿ ಹೋಗ್ಬಿಡ್ಬೋದು ಎಂಬುವುದಾಗಿ ನಗುತ್ತಲೇ ಉತ್ತರಿಸಿದರು.
ಇನ್ನು ಯಾವ ರೀತಿ ತಯಾರಿ ನಡೆಸಿದ್ದೀರಾ ಎಂಬ ವರದಿಗಾರನ ಪ್ರಶ್ನೆಗೆ ಉತ್ತರಿಸಿದ ಅನಿಲ್, ಈ ತರ ಮಾಡ್ಬೆಕೆಂದು ನಿನ್ನೆ ಸಂಜೆ ಹೇಳಿದ್ರು. ನಾವು ಖಷಿಯಲ್ಲಿ ಓಕೆ ಅಂದ್ವಿ. ಆದ್ರೆ ಆಮೇಲೆ ನೋಡಿದ್ರೆ ಡೂಪ್ ಎಲ್ಲ ಇಲ್ಲ ನೀವೇ ಮಾಡ್ಬೇಕು ಅಂದ್ರು. ಆಮೇಲಿಂದ ಭಯ ಸ್ಟಾರ್ಟ್ ಆಗಿದೆ. ರಾತ್ರಿಯಿಡಿ ನಿದ್ದೆ ಮಾಡಿಲ್ಲ. ಫಸ್ಟ್ ಬಂದ್ ಜಂಪ್ ಮಾಡೋಣ ಅಂತಾು ಬಂದ್ಬಿಟ್ಟಿದ್ದೀವಿ. ಹೆಲಿಕಾಪ್ಟರ್ ಬರಕೆ ಕಾಯ್ದಾ ಇದ್ದೀವಿ. ಬಂದ ತಕ್ಷಣ ಫಸ್ಟ್ ಎಗರ್ಬಿಡ್ತೀವಿ ಫಸ್ಟ್ ಭಯ ಹೋಗ್ಲಿ ಅಂತಾ.
ದುರಂತ ಅಂದ್ರೆ ಅವರು ಈ ರೀತಿ ಹೇಳಿದ ಕೆಲವೇ ಗಂಟೆಗಳಲ್ಲಿ ಭಗವಂತನ ಪಾದ ಸೇರ್ಕೊಂಡ್ ಬಿಟ್ಟಿದ್ದಾರೆ. ಇದೀಗ ಅನಿಲ್ ಪೋಷಕರ ಕೂಗು ಮುಗಿಲುಮುಟ್ಟಿದೆ.