Quantcast
Channel: Public TV – Latest Kannada News, Public TV Kannada Live, Public TV News
Viewing all 71391 articles
Browse latest View live

ತುಮಕೂರಿನಲ್ಲಿ ಅಭಿಮಾನಿಗಳ ವಿರುದ್ಧ ಗರಂ ಆದ ಶಿವರಾಜ್ ಕುಮಾರ್!

$
0
0

ತುಮಕೂರು: ನಟ ಶಿವರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳ ವಿರುದ್ಧ ತುಮಕೂರಿನಲ್ಲಿ ಗರಂ ಆಗಿದ್ದಾರೆ.

ನಗರದ ಉಡುಪಿ ಡಿಲಕ್ಸ್ ನಲ್ಲಿ ಸಿದ್ಧಗಂಗಾ ಮಠ ಆಧರಿಸಿದ ಭೂ ಸ್ವರ್ಗ ಚಿತ್ರದ ಧ್ವನಿ ಸುರುಳಿ ಬಿಡುಗಡೆಗೆಂದು ಶಿವರಾಜ್ ಕುಮಾರ್ ಹೋಗಿದ್ದರು. ಈ ವೇಳೆ ಅಭಿಮಾನಿಗಳಿಂದ ಕಿರಿಕಿರಿಯಿಂದ ಅವರ ಮೇಲೆ ರೇಗಿದ್ದಾರೆ.

ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದ್ದಾಗ ಅಭಿಮಾನಿಗಳು ಮೊಬೈಲ್ ನಿಂದ ವಿಡಿಯೋ ಮಾಡುತ್ತಿದ್ದರು. ಇದರಿಂದ ಕಿರಿಕಿರಿ ಅನುಭವಿಸಿದ ನಟ, ಪ್ಲೀಸ್ ಸೈಲೆನ್ಸ್ ಸೈಲೆನ್ಸ್ ಎಂದು ಒಂದೇ ಸಮನೇ ಕೂಗಿದ್ದಾರೆ. ಅಲ್ಲದೇ ಮೊಬೈಲ್ ಯಾವ ಪುಣ್ಯಾತ್ಮ ಕಂಡು ಹಿಡಿದಿದ್ದಾನೋ ಎಂದು ಶಿವಣ್ಣ ರೇಗಿದ್ದಾರೆ. ಶಿವರಾಜ್ ಕುಮಾರ್ ರನ್ನು ಸುತ್ತುವರಿದು ಅಭಿಮಾನಿಗಳು ಕಿರಿಕಿರಿ ಉಂಟು ಮಾಡಿದ್ದರಿಂದ ಅವರ ಮೇಲೆ ರೇಗಿದ್ದಾರೆ ಎಂದು ಹೇಳಲಾಗಿದೆ.


ಸೆಟ್ಟೇರಲಿದೆ ಶ್ರೀದೇವಿ ಜೀವನಾಧರಿತ ಸಿನಿಮಾ

$
0
0

ಮುಂಬೈ: ಬಾಲಿವುಡ್ ಮೋಹಕ ತಾರೆ ಶ್ರೀದೇವಿ ಅವರ ಜೀವನಾಧರಿತ ಸಿನಿಮಾವೊಂದು ಸೆಟ್ಟೇರಲು ಸಜ್ಜಾಗಿದೆ. ಶ್ರೀದೇವಿ ಫೆಬ್ರವರಿ 24ರಂದು ದುಬೈನಲ್ಲಿ ಸಾವನ್ನಪ್ಪಿದ್ದರು. ಈಗ ಬಾಲಿವುಡ್ ನ ನಿರ್ದೇಶಕ ಹಂಸಲ ಮೆಹ್ತಾ ಅವರು ಶ್ರೀದೇವಿ ಅವರ ಜೀವನಾಧರಿತ ಸಿನಿಮಾ ಮಾಡಲು ಅಣಿಯಾಗಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಮೆಹ್ತಾ, ಶ್ರೀದೇವಿ ಇರುವಾಗ ನಾನು ಅವರೊಂದಿಗೆ ನನ್ನ ಸಿನಿಮಾಗಳಲ್ಲಿ ನಟಿಸುವಂತೆ ಕೇಳಿಕೊಂಡಿಲ್ಲ. ಆದ್ರೆ ಇಂದು ಶ್ರೀದೇವಿ ಜೀವನದ ಕಥೆಯನ್ನು ಬೆಳ್ಳಿ ಪರದೆಯ ಮೇಲೆ ತರಲು ನಿರ್ಧರಿಸಿದ್ದೇನೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಅಮಿತಾಬ್ ಬಚ್ಚನ್‍ಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತಾ?- ಬಿಗ್ ಬಿ ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಶ್ರೀದೇವಿ ಸಾವು

ಸಿನಿಮಾದಲ್ಲಿ ಶ್ರೀದೇವಿ ಅವರ ಪಾತ್ರಕ್ಕೆ ನಟಿ ವಿದ್ಯಾಬಾಲನ್ ಜೀವ ತುಂಬಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಈಗಾಗಲೇ ನಿರ್ದೇಶಕರು ವಿದ್ಯಾ ಬಾಲನ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಶ್ರೀದೇವಿ ಪಾತ್ರದಲ್ಲಿ ನಟಿಸಲು ವಿದ್ಯಾ ಬಾಲನ್ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಚಿತ್ರತಂಡ ನಟಿಯ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡ್ರೆ ಫಿಲಂನಲ್ಲಿ ವಿದ್ಯಾ ನಟಿಸುವುದು ಪಕ್ಕಾ ಆಗಲಿದೆ. ಸಿನಿಮಾದಲ್ಲಿ ಶ್ರೀದೇವಿ ಪತಿ ಬೋನಿ ಕಪೂರ್ ಮತ್ತು ಮಕ್ಕಳಾದ ಖುಷಿ ಹಾಗು ಜಾಹ್ನವಿ ಪಾತ್ರದಲ್ಲಿ ಯಾರು ಮಿಂಚಲಿದ್ದಾರೆ ಅಂತ ಚಿತ್ರತಂಡ ರಿವೀಲ್ ಮಾಡಿಲ್ಲ. ಇದನ್ನೂ ಓದಿ: ಕೊನೆಗೂ ಶ್ರೀದೇವಿ ನಟನೆಯ ಐದು ಸಿನಿಮಾಗಳು ರಿಲೀಸ್ ಆಗಲೇ ಇಲ್ಲ

1963ರ ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ 4ನೇ ವಯಸ್ಸಿನಲ್ಲೇ ತಮಿಳಿನ `ತುನೈವಾನ್’ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. 1971ರಲ್ಲಿ ಮಲೆಯಾಳಂನ ಪೂಂಪಟ್ಟಾ ಚಿತ್ರದಲ್ಲಿ ನಟಿಸಿದ್ದ ಶ್ರೀದೇವಿ ಅವರಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಸಿಕ್ಕಿತ್ತು. 13ನೇ ವಯಸ್ಸಿನಲ್ಲಿ ಜೂಲಿ ಚಿತ್ರದೊಂದಿಗೆ ಬಾಲಿವುಡ್‍ಗೆ ಎಂಟ್ರಿಕೊಟ್ಟ ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದಿ, ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದಲ್ಲಿ ನಟಿಸುವ ಮೂಲಕ ಪಂಚಭಾಷಾ ಕಲಾವಿದೆಯಾಗಿ ಪ್ರಸಿದ್ಧಿ ಪಡೆದಿದ್ದರು. ಇದನ್ನೂ ಓದಿ: ಶ್ರೀದೇವಿ ಥರನೇ ಇದ್ದ, ಅಕಾಲಿಕ ಮರಣ ಹೊಂದಿದ ನಟಿ ದಿವ್ಯ ಭಾರತಿ ಬಗ್ಗೆ ನಿಮಗೆ ಗೊತ್ತಾ?

1995ರಲ್ಲಿ ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದ ಬಳಿಕ 15 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. 2012ರಲ್ಲಿ `ಇಂಗ್ಲಿಷ್ ವಿಂಗ್ಲೀಷ್’ ನಲ್ಲಿ ಅಭಿನಯಿಸುವ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು. ಹಾಸ್ಯ, ಭಾವನಾತ್ಮಕ, ಸಾಹಸ, ಪ್ರೇಮ, ಪ್ರಣಯ, ನೃತ್ಯ ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಸೈ ಎನಿಸಿಕೊಂಡ ಶ್ರೀದೇವಿಯರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ. 2013ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಶ್ರೀದೇವಿ ಅವರನ್ನು ಗೌರವಿಸಿತ್ತು.

ಸಂಬಂಧಿಕರ ಮದುವೆಗೆಂದು ದುಬೈಗೆ ತೆರಳಿದ್ದ ವೇಳೆ ಅಂದರೆ ಫೆಬ್ರವರಿ 24ರಂದು ಶ್ರೀದೇವಿ ಮೃತಪಟ್ಟಿದ್ದರು. ವೈದ್ಯಕೀಯ ಹಾಗೂ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಫೆಬ್ರವರಿ 27ರ ರಾತ್ರಿ ಮುಂಬೈಗೆ ತರಲಾಗಿತ್ತು. ಆಕಸ್ಮಿಕವಾಗಿ ಬಾತ್ ಟಬ್‍ನಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿದ್ದಾರೆಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು. ಫೆಬ್ರವರಿ 28ರಂದು ಅಯ್ಯಪ್ಪನ್ ಸಂಪ್ರದಾಯದಂತೆ ಬಾಲಿವುಡ್ ನಟಿ ಶ್ರೀದೇವಿಯ ಅಂತ್ಯಕ್ರಿಯೆ ನೇರವೇರಿದೆ. ಇದನ್ನೂ ಓದಿ: ಶ್ರೀದೇವಿ ಸಾವಿನ ಸುತ್ತ ಅನುಮಾನದ ಹುತ್ತ

ಅಮ್ಮ ಬಂದಿದ್ದಾರೆ, ಯಾರು ಮನೆಗೆ ಕರೆದುಕೊಂಡು ಹೋಗ್ತೀರಾ: ಕಾಜೋಲ್

$
0
0

ಮುಂಬೈ: ಬಾಲಿವುಡ್ ನಟಿ ಕಾಜೋಲ್ ತನ್ನ ಪತಿ ಅಜಯ್ ದೇವ್‍ಗನ್ ನಟಿಸಿದ್ದ ‘ರೇಡ್’ ಚಿತ್ರದಲ್ಲಿ 85 ವರ್ಷದ ಸಹನಟಿ ಪುಷ್ಪಾ ಜೋಶಿ ಅವರ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಪುಷ್ಪಾ ಅವರು ವಯಸ್ಸಾದ ಕಾಲದಲ್ಲಿ ಮಕ್ಕಳ ಪದ್ಯವನ್ನು ಹಾಡುತ್ತಿದ್ದು, ಕಾಜೋಲ್ ಇದ್ದಕ್ಕೆ, “ಈಗ ಬಂದರು ಅಮ್ಮ.. ಇವರನ್ನು ಯಾರು ಮನೆಗೆ ಕರೆದುಕೊಂಡು ಹೋಗುತ್ತೀರಾ ಎಂದು ಬರೆದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಚಿತ್ರವನ್ನು ನಿರ್ದೇಶಕ ರಾಜ್‍ಕುಮಾರ್ ನಿರ್ದೇಶಿಸಿದ್ದು, ಬಿಡುಗಡೆಯಾದ 2 ದಿನದಲ್ಲಿ ಬಾಕ್ಸ್ ಆಫೀಸ್ ನಲ್ಲಿ 23 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರದಲ್ಲಿ ಅಜಯ್ ದೇವ್‍ಗನ್ ಜೊತೆ ಸೌರಬ್ ಶುಕ್ಲಾ ಹಾಗೂ ಇಲಿಯಾನಾ ಡಿಕ್ರೂಜ್ ನಟಿಸಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಗಳಿಸಿದೆ.

ಚಿತ್ರದಲ್ಲಿ ಅಜಯ್ ಹಾಗೂ ಸೌರಭ್ ಮೆಚ್ಚುಗೆ ಪಡೆದರೆ, ಅಮ್ಮ(ಪುಷ್ಪಾ) ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಅಜಯ್ ದೇವಗನ್ ಈ ಚಿತ್ರದಲ್ಲಿ ಲಕ್ನೋ ಆದಾಯ ತೆರಿಗೆ ಇಲಾಖೆಯ ಉಪ ಕಮಿಷನರ್ ಆಗಿ ನಟಿಸಿದ್ದು, ಪುಷ್ಪಾ ಅವರು ಈ ಚಿತ್ರದಲ್ಲಿ ಸೌರಭ್ ಅವರ ತಾಯಿಯಾಗಿ ನಟಿಸಿದ್ದಾರೆ. 1980ರಲ್ಲಿ ನಡೆದ ದೇಶದ ಅತೀ ದೊಡ್ಡ ರೇಡ್‍ನನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ.

Here comes Amma… you will want to take her home. #Raid

A post shared by Kajol Devgan (@kajol) on

ದಿನೇಶ್ ಕಾರ್ತಿಕ್ ಕೊನೆಯ ಸಿಕ್ಸರ್ ನೋಡಿಲ್ಲ ಯಾಕೆ ಅನ್ನೋದನ್ನು ಹೇಳಿದ್ರು ರೋಹಿತ್

$
0
0

ಕೊಲಂಬೊ: ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬಾಂಗ್ಲಾ ವಿರುದ್ಧ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಸಿಡಿಸಿದ ಸಿಕ್ಸ್ ಹೊಡೆತವನ್ನು ನಾನು ನೋಡಿಲ್ಲ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಕಾರ್ತಿಕ್ ಕೊನೆಯ ಸಿಕ್ಸರ್ ನೋಡಲು ಸಾಧ್ಯವಾಗಲಿಲ್ಲ. ಪಂದ್ಯ ಡ್ರಾ ಆಗುತ್ತದೆ ಎಂದು ತಿಳಿದು ಸೂಪರ್ ಓವರ್ ಗೆ ಸಿದ್ಧತೆ ನಡೆಸಲು ಡ್ರೆಸ್ಸಿಂಗ್ ರೂಮ್ ಗೆ ತೆರಳಿ ಪ್ಯಾಡ್ ಧರಿಸಿದ್ದಾಗಿ ತಿಳಿಸಿದರು. ಅಲ್ಲದೇ ದಿನೇಶ್ ಅವರ ಪ್ರದರ್ಶನ ನೋಡಲು ಸಂತಸ ಉಂಟಾಯಿತು. ಈ ಮೂಲಕ ದಿನೇಶ್ ತಮ್ಮ ಸಾಮರ್ಥ್ಯವನ್ನು ತೊರಿಸಿದ್ದಾರೆ ಎಂದು ಹೊಗಳಿದರು.

ಇದೇ ವೇಳೆ ದಿನೇಶ್ ಭಿನ್ನ ಹಾಗೂ ಭಾರೀ ಹೊಡೆತಗಳನ್ನು ಸಿಡಿಸುವ ಕೌಶಲ್ಯ ಹೊಂದಿದ್ದಾರೆ. ಅದ್ದರಿಂದಲೇ ಅವರಿಗೆ ಹಿಂಬಡ್ತಿ ನೀಡಲಾಯಿತು. ಈ ನಿರ್ಧಾರದ ಕುರಿತು ನನಗೆ ಹೆಮ್ಮೆಯಾಗುತ್ತಿದೆ ಎಂದು ರೋಹಿತ್ ತಿಳಿಸಿದರು.

ನಿದಾಸ್ ತ್ರಿಕೋನ ಟಿ20 ಸರಣಿಯ ಬಾಂಗ್ಲಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್ ಶರ್ಮಾ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ರನ್ನು ಏಳನೇ ಕ್ರಮಾಂಕದಲ್ಲಿ ಕಳುಹಿಸಿದ್ದರು. ಈ ವೇಳೆ ಸಂಕಷ್ಟದಲ್ಲಿದ್ದ ತಂಡಕ್ಕೆ ತಮ್ಮ ಭರ್ಜರಿ ಬ್ಯಾಟಿಂಗ್ ನಿಂದ ದಿನೇಶ್ ತಿರುವು ನೀಡಿದರು. ಮಿಂಚಿನ ಆಟವಾಡಿದ ದಿನೇಶ್ ಕಾರ್ತಿಕ್ ಕೊನೆಯ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದರು. ಇದನ್ನೂ ಓದಿ: ಸಿಕ್ಸರ್ ಸಿಡಿಸಲು ಅಭ್ಯಾಸ ನಡೆಸುತ್ತಿದ್ದೆ: ಪಂದ್ಯಶ್ರೇಷ್ಠ ದಿನೇಶ್ ಕಾರ್ತಿಕ್

ಭಾರತದ ಪರವಾಗಿ ರೋಹಿತ್ ಶರ್ಮಾ 56, ಪಾಂಡೆ 28 ರನ್ ಗಳಿಸಿದರು. ಬಾಂಗ್ಲಾ ಪರವಾಗಿ ಶಬ್ಬಿರ್ ರೆಹಮಾನ್ 77, ಶಕೀಬ್ ಅಲ್ ಹಸನ್ 7, ಮುಷ್ಫಿಕುರ್ ರಹೀಮ್ 09, ಮಹಮ್ಮದುಲ್ಲಾ 21, ತಮೀಮ್ ಇಕ್ಬಾಲ್ 15 ರನ್ ಗಳಿಸಿದ್ದರು.

ಮಹಿಳೆಯರಿಗೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಸೀರೆ ಧರಿಸಿ ಪ್ರತಿಭಟಿಸಿದ ಸಂಸದ!

$
0
0

ನವದೆಹಲಿ: ಆಂಧ್ರಪ್ರದೇಶದ ಮಹಿಳೆಯರಿಗೆ ವಿಶೇಷ ಸವಲತ್ತುಗಳನ್ನು ನೀಡುವಂತೆ ಆಗ್ರಹಿಸಿ ತೆಲುಗು ದೇಶಂ ಪಕ್ಷದ(ಟಿಡಿಪಿ) ಸಂಸದ ಎನ್ ಶಿವಪ್ರಸಾದ್ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಮಹಿಳೆಯರಂತೆ ಸೀರೆ ಉಟ್ಟು ಸಂಸದರು ಕೇಂದ್ರ ಸಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಶಿವಪ್ರಸಾದ್ ಅವರಿಗೆ ಸಾಥ್ ನೀಡಿದ್ದಾರೆ.

2018ರ ಕೇಂದ್ರ ಬಜೆಟ್ ನಲ್ಲಿ ಆಂಧ್ರಪ್ರದೇಶದ ಜನತೆಗೆ ಸಾಕಷ್ಟು ಫಂಡ್ ನೀಡಲಿಲ್ಲ ಎಂದು ಟಿಡಿಪಿ ಕಳೆದ ತಿಂಗಳಿನಿಂದಲೂ ಕೇಂದ್ರ ಸರ್ಕರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟಿಸುತ್ತಲೇ ಬಂದಿದೆ. ಇದರ ಹಿತೆಗೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲಿನ ಸರ್ಕಾರ 2018-19ರಲ್ಲಿ ಸುಮಾರು 416 ಕೋಟಿ ರೂ.ಗಳಷ್ಟು ಆದಾಯದ ಕೊರತೆ ಎದುರಿಸುತ್ತಿದೆ ಅಂತ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನ್ಯಾಯ ಒದಗಿಸಬಹುದು ಅಂತ ಅಂದುಕೊಂಡಿದ್ವಿ. ಆದ್ರೆ ಇಲ್ಲಿಯವರೆಗೆ ನಮಗೆ ಯಾವುದೇ ರೀತಿಯ ನ್ಯಾಯ ದೊರಕಿಲ್ಲ. ಕಳೆದ 4 ವರ್ಷದಿಂದ ಕಾಯುತ್ತಿದ್ದೇವೆ. ಯಾವುದೇ ಪ್ರಯೋಜನವಿಲ್ಲ. 2018ರ ಬಜೆಟ್ ನಲ್ಲಾದರೂ ರಾಜ್ಯಕ್ಕೆ ಸರ್ಕಾರ ಕೊಡುಗೆ ನೀಡಬಹುದು ಅಂತ ಆಶಯ ವ್ಯಕ್ತಪಡಿಸಿದ್ವಿ. ಆದ್ರೆ ಈ ಬಾರಿಯ ಬಜೆಟ್ ನಲ್ಲೂ ರಾಜ್ಯಕ್ಕೆ ಕೊಡುಗೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಅಂತ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಈ ಹಿಂದೆ ಅಂದ್ರೆ 2016ರಲ್ಲಿ ನೋಟು ನಿಷೇಧವಾದ ಸಂದರ್ಭದಲ್ಲಿ ರಾಜ್ಯದ ಜನತೆ ಕಷ್ಟ ಅನುಭವಿಸಿದ್ದು, ಈ ವೇಳೆ ಸಂಸದ ಶಿಪ್ರಸಾದ್ ಅವರು ಕಪ್ಪು-ಬಿಳುಪಿನ ಉಡುಗೆ ತೊಟ್ಟು ಸಂಸತ್ತಿಗೆ ಆಗಮಿಸಿ ಪ್ರತಿಭಟಿಸಿದ್ದರು.

37 ವರ್ಷವಾದ್ರೂ ಮದ್ವೆಯಾಗಿಲ್ಲವೆಂದು ಮನನೊಂದು ತಾಯಿ –ಮಗಳು ಆತ್ಮಹತ್ಯೆ

$
0
0

ಬೆಂಗಳೂರು: ಮಗಳಿಗೆ 37 ವರ್ಷವಾದ್ದರೂ ಮದುವೆಯಾಗಿಲ್ಲ ಎಂದು ತಾಯಿ – ಮಗಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ರಾಜಾಜಿನಗರದ ಪ್ರಕಾಶ್ ನಗರದಲ್ಲಿ ನಡೆದಿದೆ.

ಸಾವಿತ್ರಮ್ಮ (67) ಮಂಜುಳಾ (37) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಸಾವಿತ್ರಮ್ಮ ಹಾಗೂ ಮಂಜುಳಾ ಮೂಲತಃ ಮಂಡ್ಯದವರಾಗಿದ್ದು, ಕೆಲ ವರ್ಷಗಳಿಂದ ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು. ಮಂಜುಳಾಗೆ 37 ವರ್ಷಗಳಾದ್ದರೂ ಮದುವೆ ಆಗಿರಲಿಲ್ಲ.

ಮನೆಯ ಹೊರಗಡೆ ಎಲ್ಲೂ ಸಾವಿತ್ರಮ್ಮ ಹಾಗೂ ಮಂಜುಳಾ ಕಾಣಿಸಿಕೊಳ್ಳದ ಕಾರಣ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸಾವಿತ್ರಮ್ಮ ಮನೆಗೆ ಬಂದು ಪರಿಶೀಲಿಸಿದ್ದಾಗ ಮೂರು ದಿನದ ಹಿಂದೆ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಸಾವಿತ್ರಮ್ಮನ ಗಂಡ ಸಾವನ್ನಪ್ಪಿದ್ದು, ಮಗ ಕೂಡ ಮದುವೆಯಾಗಿ ತನ್ನ ಪತ್ನಿಯ ಜೊತೆ ಪ್ರತ್ಯೇಕವಾಗಿ ಕೆಂಗೇರಿಯಲ್ಲಿ ವಾಸವಾಗಿದ್ದನು. ಮಗಳಿಗೆ ಮದುವೆಯಾಗಿಲ್ಲದ ವಿಚಾರವನ್ನು ಸಾವಿತ್ರಮ್ಮ ಹತ್ತಿರದ ಮನೆಯವರಲ್ಲಿ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಈ ವಿಚಾರಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

ಪತಿಯ ಮುಂದೆಯೇ 8 ಮಂದಿ ಕಾಮುಕರಿಂದ ಗ್ಯಾಂಗ್ ರೇಪ್

$
0
0

ಗುವಾಹಟಿ: 35 ವರ್ಷದ ಮಹಿಳೆಯ ಮೇಲೆ ಆಕೆಯ ಪತಿಯ ಮುಂದೆಯೇ 8 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಅಸ್ಸಾಂನ ನಾಗಾನ್ ಜಿಲ್ಲೆಯಲ್ಲಿ ನಡೆದಿದೆ.

ನಡೆದಿದ್ದೇನು?
ಗುರುವಾರ ದಂಪತಿ ಕಂಪುರ್ ನಿಂದ ಹೊಜೈಗೆ ಪ್ರಯಾಣಿಸುತ್ತಿದ್ದರು. ಆದರೆ ಚಾಪರ್ಮುಖ್ ತಲುಪಿದ ಬಳಿಕ ಅವರು ಹೊಜೈಗೆ ಹೋಗಲು ಯಾವುದೇ ವಾಹನಗಳು ಇರಲಿಲ್ಲ. ಈ ವೇಳೆ ಮುಖ್ಯ ಆರೋಪಿ ಮರ್ಜೋತ್ ಅಲ್ಲಿಗೆ ಬಂದು ಇಂದು ರಾತ್ರಿ ನೀವು ಉಳಿದುಕೊಳ್ಳಲು ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾನೆ. ಬಳಿಕ ಅವರನ್ನು ಕಾಕೋಟಿಗಾಂವ್ ಗೆ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿ ಅಲ್ಲಿಗೆ ಹೋಗುವಷ್ಟರಲ್ಲಿ ಕೊಪಿಲಿ ನದಿಯ ಹತ್ತಿರ ಈಗಾಗಲೇ ಇತರೆ ಏಳು ಮಂದಿ ಆರೋಪಿಗಳು ಕಾಯುತ್ತಿದ್ದರು. ನಂತರ ಅವರು ಸಂತ್ರಸ್ತೆಯ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಆತನ ಮುಂದೆಯೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ದಂಪತಿ ಬಳಿ ದರೋಡೆ ಮಾಡಿ ಅವರನ್ನು ಅಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ನಾವು ಆರೋಪಿಗಳನ್ನು ವಿಚಾರಣೆ ಮಾಡಲು ಹೆಚ್ಚು ಸಮಯ ಬೇಕಾಗಬಹುದು. ಈ ಘಟನೆ ಗುರುವಾರ ನಡೆದಿದ್ದು, ಸದ್ಯಕ್ಕೆ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ ಎಂದು ನಾಗಾನ್ ಎಸ್.ಪಿ. ಶಂಕರ್ ಬರಾತಾ ರೈಮೇಧಿ ಹೇಳಿದ್ದಾರೆ.

ಶ್ರೀದೇವಿ ಅಂತ್ಯಸಂಸ್ಕಾರಕ್ಕೆ ಸರ್ಕಾರಿ ಗೌರವ ಸಲ್ಲಿಸಿದಕ್ಕೆ ರಾಜ್ ಠಾಕ್ರೆ ಆಕ್ರೋಶ

$
0
0

ಮುಂಬೈ: ಬಾಲಿವುಡ್ ಅತಿಲೋಕದ ಸುಂದರಿ, ಚಾಂದಿನಿ ನಟಿ ಶ್ರೀದೇವಿ ಅಂತ್ಯಸಂಸ್ಕಾರಕ್ಕೆ ಸರ್ಕಾರಿ ಗೌರವ ಸಲ್ಲಿಸಿದಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಶ್ರೀದೇವಿ ಮದ್ಯಪಾನ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ ಅಂತಾ ಹೇಳಲಾಗಿದೆ. ಅತಿಯಾದ ಮದ್ಯ ಸೇವಿಸಿ ಸಾವನ್ನಪ್ಪಿದವರ ಮೃತದೇಹಕ್ಕೆ ತ್ರಿವರ್ಣ ಧ್ವಜ ಹೊದಿಸಿ, ಸರ್ಕಾರಿ ಗೌರವ ಸಲ್ಲಿಸಿವುದು ಎಷ್ಟು ಸರಿ ಅಂತಾ ರಾಜ್ ಠಾಕ್ರೆ ಪ್ರಶ್ನೆ ಮಾಡಿದ್ದಾರೆ.

ಮದ್ಯಪಾನ ಸೇವನೆ ಮಾಡಿ ಸತ್ತವರಿಗೆ ತ್ರಿವರ್ಣ ಧ್ವಜ ಹೊದಿಸಿ ಗೌರವ ನೀಡುತ್ತಾರೆ. ಆದ್ರೆ ನನಗೆ ಒಂದು ವಿಷಯ ಮಾತ್ರ ಇದೂವರೆಗೂ ಗೊತ್ತಾಗಿಲ್ಲ, ಶ್ರೀದೇವಿ ಸರ್ಕಾರಿ ಗೌರವಕ್ಕೆ ಪಾತ್ರರಾಗುವಂತಹ ಯಾವ ಕೆಲಸ ಮಾಡಿದ್ದಾರೆ. ಬಹುಶಃ ಸರ್ಕಾರ ಶ್ರೀದೇವಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದರಿಂದ ಸರ್ಕಾರಿ ಗೌರವ ಸಲ್ಲಿಸಿರಬಹುದು. ನಶೆಯಲ್ಲಿ ಬಾತ್ ಟಬ್ ನಲ್ಲಿ ಜಾರಿ ಬಿದ್ದು ಶ್ರೀದೇವಿ ಸಾವು ಸಂಭವಿಸಿದೆ. ಆದ್ರೂ ಸರ್ಕಾರಿ ಗೌರವ ಸಲ್ಲಿಸುವ ಮೂಲಕ ಮಹಾರಾಷ್ಟ್ರ ಸರ್ಕಾರ ತಪ್ಪು ಮಾಡಿದೆ ಅಂತಾ ಅಸಮಾಧಾನವನ್ನು ಹೊರಹಾಕಿದ್ರು.

ಎಲ್ಲ ಮಾಧ್ಯಮಗಳು ಸತತವಾಗಿ ಶ್ರೀದೇವಿ ಅವರ ಸುದ್ದಿಯನ್ನೇ ನಿರಂತರವಾಗಿ ಪ್ರಸಾರ ಮಾಡಿ, ನೀರವ್ ಮೋದಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗಿತ್ತು. ಕೇವಲ ಶ್ರೀದೇವಿ ಸುದ್ದಿಯನ್ನು ಬಿತ್ತರಿಸುತ್ತ ಜನರ ಗಮನವನ್ನು ನೀರವ್ ಮೋದಿ ಪ್ರಕರಣದಿಂದ ಮರೆಮಾಡಲಾಗಿತ್ತು ಅಂತಾ ಆರೋಪಿಸಿದರು.


ವಿಡಿಯೋ: ಕೆಟ್ಟು ಹೋದ ಎಟಿಎಂನಿಂದ ನೋಟುಗಳ ಸುರಿಮಳೆ- ಸಿಕ್ಕಿದ್ದು ಸೀರುಂಡೆ ಅಂತ ಬಾಚಿಕೊಂಡು ಹೋದ ಜೋಡಿ!

$
0
0

ಬೀಜಿಂಗ್: ಎಟಿಎಂಗಳು ಸರಿಯಾಗಿ ಕಾರ್ಯನಿರ್ವಹಿಸಿದೆ ಕಾರ್ಡ್ ಸಿಲುಕಿಕೊಳ್ಳುವುದು ಅಥವಾ ಹಣ ಬರದೇ ಇರೋ ಬಗ್ಗೆ ಕೇಳಿರ್ತೀರ. ಆದ್ರೆ ಇಲ್ಲೊಂದು ಎಟಿಎಂ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ನೋಟುಗಳ ಸುರಿಮಳೆಯಾಗಿದ್ದು, ಅದೇ ಸಮಯಕ್ಕೆ ಅಲ್ಲಿಗೆ ಬಂದ ಇಬ್ಬರು ಹಣವನ್ನ ಬಾಚಿಕೊಂಡಿದ್ದಾರೆ.

ಮಾರ್ಚ್ 6ರಂದು ಚೀನಾದ ಝೀಜಿಯಾಂಗ್ ಪ್ರಾಂತ್ಯದಲ್ಲಿ ಎಟಿಎಂ ನಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಎರಡೇ ಸೆಕೆಂಡ್‍ನಲ್ಲಿ 3 ಸಾವಿರ ಯುವಾನ್(ಅಂದಾಜು 30 ಸಾವಿರ ರೂ.) ಮೊತ್ತದ ನೋಟುಗಳನ್ನ ಹೊರಹಾಕಿದೆ. ಈ ದೃಶ್ಯ ಎಟಿಎಂ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಲವೇ ಸೆಕೆಂಡ್‍ಗಳಲ್ಲಿ ಎಟಿಎಂ ನಿಂದ ಹಣ ಹೊರಬೀಳೋದನ್ನ ವಿಡಿಯೋದಲ್ಲಿ ಕಾಣಬಹುದು. ಆದ್ರೆ ಎಟಿಎಂ ದೋಷಕ್ಕೆ ಕಾರಣವೇನೆಂಬುದು ಸ್ಪಷ್ಟವಾಗಿಲ್ಲ.

ಈ ವೇಳೆ ಎಟಿಎಂ ನಲ್ಲಿ ಯಾವುದೇ ಗ್ರಾಹಕರು ಇರಲಿಲ್ಲ. ಎಟಿಎಂ ನಿಂದ ಹೊರಬಿದ್ದ ನೋಟುಗಳು ನೆಲದ ಮೇಲೆ ಬಿದ್ದಿದ್ದು, ಇದೇ ಸಮಯಕ್ಕೆ ಅಲ್ಲಿಗೆ ಬಂದ ಇಬ್ಬರು ಸಿಕ್ಕಿದ್ದು ಸೀರುಂಡೆ ಅಂತ ಹಣವನ್ನ ಬಾಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.

ಒಬ್ಬ ಹಣವನ್ನ ಕೈಗೆತ್ತಿಕೊಂಡು ಎಣಿಸಿ ಜೇಬಲ್ಲಿ ಇಟ್ಟುಕೊಂಡಿದ್ದಾನೆ. ಆದ್ರೆ ಆತ ಸಿಸಿಟಿವಿ ಯನ್ನ ನೇರವಾಗಿ ನೋಡಿಲ್ಲ. ಆದರೂ ಪೊಲೀಸರು ಆ ಇಬ್ಬರನ್ನ ಪತ್ತೆಹಚ್ಚಿದ್ದು, ಹಣ ವಾಪಸ್ ನೀಡುವಂತೆ ಮನವೊಲಿಸಿದ್ದಾರೆಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಆ ಇಬ್ಬರೂ ಹಣವನ್ನ ತೆಗೆದುಕೊಂಡ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧ ಚರ್ಚೆ ಎದ್ದಿದೆ. ಕೆಲವರು ಹಣ ತೆಗೆದುಕೊಂಡಿದ್ದು ತಪ್ಪು ಎಂದರೆ, ಇನ್ನೂ ಕೆಲವರು ಸಿಕ್ಕಿದ್ದನ್ನು ಇಟ್ಟುಕೊಂಡ್ರೆ ತಪ್ಪೇನು ಎಂದು ವಾದಿಸಿದ್ದಾರೆ.

ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ –ಕೇಂದ್ರಕ್ಕೆ ಶೀಘ್ರವೇ ಸಿದ್ದು ಸರ್ಕಾರದಿಂದ ಶಿಫಾರಸ್ಸು

$
0
0

ಬೆಂಗಳೂರು: ರಾಜ್ಯದ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೊನೆಗೂ ಸಿದ್ದರಾಮುಯ್ಯ ನೇತೃತ್ವದ ರಾಜ್ಯಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ನಡೆದಿದ್ದು, ಈ ವೇಳೆ ಸಮಿತಿಯ ಸದಸ್ಯರ ಅಭಿಪ್ರಾಯದಂತೆ ಲಿಂಗಾಯಿತ ಮತ್ತು ವೀರಶೈವರಾಗಿದ್ದು ಬಸವ ತತ್ವವವನ್ನು ಅನುಸರಿಸುತ್ತಿರುವ ಮಂದಿಗೆ ಪ್ರತ್ಯೇಕ ಧರ್ಮದ ಕುರಿತು ಕೇಂದ್ರ ಸರ್ಕಾರಕ್ಕೆ ಶೀಘ್ರವೇ ಶಿಫಾರಸ್ಸು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್, ಇಂದು ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಮಿತಿ ನೀಡಿದ್ದ ವರದಿ ಬಗ್ಗೆ ಚರ್ಚೆ ಆಗಿದೆ. ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ನ್ಯಾ. ನಾಗಮೋಹನ ದಾಸ್ ಸಮಿತಿ ವರದಿಯನ್ವಯ ಪ್ರತ್ಯೇಕ ವೀರಶೈವ ಲಿಂಗಾಯಿತ ಸ್ವತಂತ್ರ ಧರ್ಮದ ಮಾನ್ಯತೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಅಂದ್ರು.

ಇದೀಗ ಸರ್ಕಾರ ಎಲೆಕ್ಷನ್ ಹೊತ್ತಲ್ಲಿ ಲಿಂಗಾಯತರು- ವೀರಶೈವರನ್ನು ಓಲೈಸಲು ಯತ್ನ ಮಾಡುತ್ತಿದ್ದೆಯಾ ಎಂಬ ಪ್ರಶ್ನೆ ಎದ್ದಿದೆ. ಶತಶತಮಾನಗಳಿಂದ ಹಿಂದೂ ಧರ್ಮದ ಭಾಗವಾಗಿದ್ದ ವೀರಶೈವ-ಲಿಂಗಾಯತರನ್ನು ಇದೀಗ ಸರ್ಕಾರ `ಅಲ್ಪಸಂಖ್ಯಾತರು’ ಎಂದು ಪರಿಗಣಿಸಲು ಮುಂದಾಗಿರುವುದು ಬಹುಸಂಖ್ಯಾತ ಹಿಂದೂ ಧರ್ಮೀಯರ ಆಕ್ರೋಶಕ್ಕೆ ತುತ್ತಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

ದಿನೇಶ್ ಕಾರ್ತಿಕ್ ಗೆ ಕ್ಷಮೆ ಕೋರಿದ ಅಮಿತಾಬ್ ಬಚ್ಚನ್!

$
0
0

ಮುಂಬೈ: ನಿದಾಸ್ ತ್ರಿಕೋನ ಟಿ20 ಸರಣಿಯ ಬಾಂಗ್ಲಾ ವಿರುದ್ಧದ ಫೈನಲ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಭರ್ಜರಿ ಪ್ರದರ್ಶನಕ್ಕೆ ಹಲವು ಸ್ಟಾರ್ ಗಳು ಶುಭಕೋರಿ ಟ್ವೀಟ್ ಮಾಡಿದ್ದಾರೆ.

ದಿನೇಶ್ ಅವರ ಆಟವನ್ನ ಮೆಚ್ಚಿದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಟ್ವೀಟ್ ಮಾಡಿ ಶುಭ ಕೋರಿದ್ದರು. ಆದರೆ ಬಳಿಕ ಮತ್ತೊಂದು ಟ್ವೀಟ್ ಮಾಡಿ ದಿನೇಶ್ ಕಾರ್ತಿಕ್‍ಗೆ ಕ್ಷಮೆ ಕೋರಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅಮಿತಾಬ್ ತಮ್ಮ ಟ್ವೀಟ್ ನಲ್ಲಿ ತಪ್ಪಾಗಿ ಟೈಪ್ ಮಾಡಿದ್ದರು.

ಮೊದಲು ಟ್ವೀಟ್ ಮಾಡಿದ್ದ ಅಮಿತಾಬ್, ಎರಡು ಓವರ್ ಗಳಲ್ಲಿ 24 ರನ್ ಗಳಿಸಬೇಕಿತ್ತು. ದಿನೇಶ್ ಕಾರ್ತಿಕ್ ಬ್ರಿಲಿಯಂಟ್ ನಾಕ್.. ಒಂದು ಎಸೆತದಲ್ಲಿ 5 ರನ್ ಗಳಿಸ ಬೇಕಾದ ವೇಳೆ ಸಿಕ್ಸ್ ಸಿಡಿಸಿದ್ದಾರೆ. ನಿಮಗೇ ಅಭಿನಂದನೆಗಳು ಎಂದು ಹೇಳಿದ್ದರು. ಈ ಟ್ವೀಟ್ ನಲ್ಲಿ 34 ರನ್ ಬದಲಾಗಿ 24 ರನ್ ಎಂದು ಬರೆದಿದ್ದರು. ತಪ್ಪು ಗೊತ್ತಾದ ಬಳಿಕ `ದಿನೇಶ್ ಕಾರ್ತಿಕ್ ಸಾರಿ’ ಎಂದು ಬರೆದು ಎರಡನೇ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಸಿಕ್ಸರ್ ಸಿಡಿಸಲು ಅಭ್ಯಾಸ ನಡೆಸುತ್ತಿದ್ದೆ: ಪಂದ್ಯಶ್ರೇಷ್ಠ ದಿನೇಶ್ ಕಾರ್ತಿಕ್

ತಮ್ಮ ಸಣ್ಣ ತಪ್ಪಿಗೆ ದಿನೇಶ್ ಕಾರ್ತಿಕ್ ಬಳಿ ಕ್ಷಮೆ ಕೋರಿದ ಅಮಿತಾಬ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳು ವ್ಯಕ್ತವಾಗಿದೆ. ಇನ್ನುಳಿದಂತೆ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಬುಮ್ರಾ, ಅಶ್ವಿನ್, ಹರ್ಭಜನ್ ಸೇರಿದಂತೆ ಹಲವು ಆಟಗಾರರು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನು ಓದಿ: ದಿನೇಶ್ ಕಾರ್ತಿಕ್ ಕೊನೆಯ ಸಿಕ್ಸರ್ ನೋಡಿಲ್ಲ ಯಾಕೆ ಅನ್ನೋದನ್ನು ಹೇಳಿದ್ರು ರೋಹಿತ್

ಸ್ಪೆಲ್ಲಿಂಗ್ ತಪ್ಪಾಗಿದಕ್ಕೆ ಶಿಕ್ಷಕರ ಥಳಿತ- 1ನೇ ಕ್ಲಾಸ್ ಬಾಲಕ ಆಸ್ಪತ್ರೆಗೆ ದಾಖಲು

$
0
0

ಪುಣೆ: ಸ್ಪೆಲ್ಲಿಂಗ್ ತಪ್ಪು ಬರೆದ ಕಾರಣಕ್ಕೆ ಶಿಕ್ಷಕರೊಬ್ಬರು ಥಳಿಸಿದ ಪರಿಣಾಮ ಗಾಯಗೊಂಡ ಒಂದನೇ ತರಗತಿಯ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುಣೆಯಲ್ಲಿರುವ ಸ್ವಾಮಿ ಸಮರ್ಥ್ ಇಂಗ್ಲಿಷ್ ಮೀಡಿಯಂ ಸ್ಕೂಲ್‍ನ ಒಂದನೇ ತರಗತಿಯ ವಿದ್ಯಾರ್ಥಿ ತನ್ನ ಪುಸ್ತಕದಲ್ಲಿ ತಪ್ಪಾಗಿ ಸ್ಪೆಲ್ಲಿಂಗ್ ಬರೆದಿದ್ದ. ಸ್ಪಲ್ಲಿಂಗ್ ತಪ್ಪಾಗಿದ್ದನ್ನು ನೋಡಿದ ಶಿಕ್ಷಕರು ಆತನ ತಲೆಗೆ ಡಸ್ಟರ್ ನಿಂದ ಹೊಡೆದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಗುರುವಾರ ಈ ಘಟನೆ ನಡೆದಿದ್ದು, ಬಾಲಕ ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ. ಈಗ ತಂದೆ ದೂರು ಕೊಟ್ಟ ಹಿನ್ನೆಲೆಯಲ್ಲಿ ವೈದ್ಯರು ನೀಡಿದ ವೈದ್ಯಕೀಯ ವರದಿಯ ಆಧಾರದಲ್ಲಿ ಪೊಲೀಸರು ಶಿಕ್ಷಕರ ವಿರುದ್ಧ ಐಪಿಸಿ ಸೆಕ್ಷನ್ 324(ಅಪಾಯಕಾರಿ ಸಾಧನಗಳಿಂದ ಗಾಯವನ್ನುಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಶಾಲೆಯ ಅಧಿಕಾರಿಗಳು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು ದೂರು ದಾಖಲಾದ ಬಳಿಕ ನಮ್ಮ ಗಮನಕ್ಕೆ ಪ್ರಕರಣ ಬಂದಿದೆ. ಶಿಕ್ಷಕರ ಜೊತೆ ಈ ವಿಚಾರದ ಬಗ್ಗೆ ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.

ಬಾಲಕನ ತಂದೆ ಪ್ರತಿಕ್ರಿಯಿಸಿ, 6 ವರ್ಷದ ಮಗ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ. ಡಿಸ್ಚಾರ್ಜ್ ಆದ ಬಳಿಕ ಈಗ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದು ನಾನು ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ.

ವಿಡಿಯೋ: ಚಾಕು ಹಿಡಿದು ಚೆಫ್ ಗೆ ಚಮಕ್ ಕೊಟ್ಟ ಏಡಿ!

$
0
0

ಕೌಲಾಲಂಪುರ್: ಬಾಣಸಿಗನ ಜೊತೆ ಅಡುಗೆಮನೆಯಲ್ಲಿ ಏಡಿಯೊಂದು ಚಾಕು ಹಿಡಿದು ಕಾಳಗ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಏಡಿ ತನ್ನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಬಾಣಸಿಗನ ಜೊತೆ ಹೋರಾಡಲು ಚಾಕು ಹಿಡಿದಿರೋದನ್ನ ಕಾಣಬಹುದು. ಏಡಿ ಕೆಚ್ಚೆದೆಯಿಂದ ತನ್ನ ಬಲ ಮತ್ತು ಎಡ ಉಗುರುಗಳ ನಡುವೆ ಆ ಕಡೆಯಿಂದ ಈಕಡೆಗೆ ಚಾಕುವನ್ನ ಬದಲಾಯಿಸುತ್ತದೆ.

ಏಡಿ ಅಡುಗೆಮನೆ ತೊಟ್ಟಿಯ ಮೂಲೆಯಲ್ಲಿದ್ದು, ಶಸ್ತ್ರಾಸ್ತ್ರವನ್ನು ಹಿಡಿದು ತನ್ನ ರಕ್ಷಣೆಯನ್ನು ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಾಣಸಿಗ ಇನ್ನೊಂದು ಚಾಕು ಹಿಡಿದು ಅದಕ್ಕೆ ತಿವಿದರೂ ಏಡಿ ಹೋರಾಡುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಏಡಿ ಶರಣಾಗತಿಯಾಗುವಂತೆ ಕೈಚೆಲ್ಲುತ್ತದೆ.

ಈ ವಿಡಿಯೋ ಕಳೆದ ವಾರ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು, ಈಗಾಗಲೇ ಸುಮಾರು 2 ಲಕ್ಷ ಕ್ಕೂ ಹೆಚ್ಚಿನ ವೀವ್ಸ್ ಕಂಡಿದೆ. ಕೊನೆಗೆ ಏಡಿಯ ಗತಿ ಏನಾಯಿತು ಎಂಬ ಬಗ್ಗೆ ವರದಿಯಗಿಲ್ಲ.

ಹಾರ್ದಿಕ್ ಪಾಂಡ್ಯ ಟ್ವೀಟ್ ಪ್ರಕರಣಕ್ಕೆ ಟ್ವಿಸ್ಟ್!

$
0
0

ನವದೆಹಲಿ: ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದರು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸುವಂತೆ ಜೋಧ್‍ಪುರ ಕೋರ್ಟ್ ಬುಧವಾರ ಸೂಚನೆ ನೀಡಿದ್ದ ಬೆನ್ನಲ್ಲೇ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.

ಅಂಬೇಡ್ಕರ್ ವಿರುದ್ಧ ಟ್ವೀಟ್ ಮಾಡಿದ್ದಾರೆ ಎನ್ನಲಾಗಿರುವ ಟ್ವಿಟ್ಟರ್ ಖಾತೆ ನಕಲಿ ಎಂದು ತಿಳಿದುಬಂದಿದ್ದು, ಹಾರ್ದಿಕ್ ಪಾಂಡ್ಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅವಹೇಳನಕಾರಿ ಟ್ವೀಟ್ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

@sirhardik3777 ಎಂಬ ಖಾತೆಯಿಂದ ಅಂಬೇಡ್ಕರ್ ಅವರ ವಿರುದ್ಧದ ಟ್ವೀಟ್ ಮಾಡಲಾಗಿದೆ. ಆದರೆ ಹಾರ್ದಿಕ್ ಪಾಂಡ್ಯ ಅವರ ಅಧಿಕೃತ ಖಾತೆ @hardikpandya7 ಆಗಿದೆ. ಸದ್ಯ ನಕಲಿ ಖಾತೆಯನ್ನು ಸಾಮಾಜಿಕ ಜಾಲತಾಣದಿಂದ ಡಿಲಿಟ್ ಮಾಡಲಾಗಿದೆ.

ಏನಿದು ಪ್ರಕರಣ: ಕಳೆದ ಡಿಸೆಂಬರ್ ನಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಜೋಧ್‍ಪುರ್ ಕೋರ್ಟ್ ರಾಜಸ್ಥಾನ ಪೊಲೀಸರಿಗೆ ಬುಧವಾರ ಸೂಚನೆ ನೀಡಿತ್ತು.

ಕ್ರಿಕೆಟಿಗ ಪಾಂಡ್ಯ ವಿರುದ್ಧ ವಕೀಲರು ಹಾಗೂ ರಾಷ್ಟ್ರೀಯ ಭೀಮ ಸೇನಾ ಸದಸ್ಯರಾಗಿರುವ ಡಿ.ಆರ್.ಮೇಘ್ವಾಲ್ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ದೂರು ಆಲಿಸಿದ ಬಳಿಕ ನ್ಯಾಯಾಲಯ ಪೊಲೀಸರಿಗೆ ಈ ಆದೇಶ ನೀಡಿತ್ತು.

ಎಸ್‍ಸಿ-ಎಸ್‍ಟಿ ಕಾಯ್ದೆಯಡಿ ಪಾಂಡ್ಯಾ ವಿರುದ್ಧ ಮೇಘ್ವಾಲ್ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಮೇಘ್ವಾಲ್ ಅವರು ಕ್ರಿಕೆಟಿಗನ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ರಾಜಸ್ಥಾನದ ಲುನಿ ಪೊಲೀಸ್ ಠಾಣೆಗೆ ಹೋದಾಗ, ಪೊಲೀಸ್ ಅಧಿಕಾರಿಗಳು ಕೇಸ್ ದಾಖಲಿಸಲು ನಿರಾಕರಿಸಿದ್ದರು. ಇದರ ನಂತರ ಅವರು ಜೋಧ್‍ಪುರ್ ನ್ಯಾಯಾಲಯದ ಮೊರೆ ಹೋಗಿದ್ದರು ಎಂದು ವರದಿಯಾಗಿತ್ತು.

ಪಾಂಡ್ಯ ಡಿಸೆಂಬರ್ ನಲ್ಲಿ ಪೋಸ್ಟ್ ಮಾಡಿದ್ದರು ಎಂದು ಆರೋಪಿಸಲಾಗಿದ್ದ ಟ್ವೀಟನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. `ಯಾವ ಅಂಬೇಡ್ಕರ್? ಅಡ್ಡ ಕಾನೂನು ಮತ್ತು ಸಂವಿಧಾನವನ್ನು ರಚಿಸಿದವರಾ? ಅಥವಾ ಈ ದೇಶದಲ್ಲಿ ಮೀಸಲಾತಿ ಎಂಬ ರೋಗವನ್ನು ಹರಡಿದವರಾ?’ ಎಂದು ಪಾಂಡ್ಯಾ ಟ್ವೀಟ್ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ರಾತ್ರಿ ಕೇಳಿದಾಗ ಕಾಂಡೋಮ್ ಕೊಡಲಿಲ್ಲ ಎಂದು ಗಲಾಟೆ ಮಾಡಿದ ಸರ್ಕಾರಿ ನೌಕರ

$
0
0

ಚಿಕ್ಕಬಳ್ಳಾಪುರ: ಸರ್ಕಾರಿ ಆಸ್ಪತ್ರೆಗೆ ಬಂದ ಸರ್ಕಾರಿ ನೌಕರನೊಬ್ಬ ಆಸ್ಪತ್ರೆಯಲ್ಲಿದ್ದ ಶುಶ್ರೂಷಕಿ ಕಾಂಡೋಮ್ ಕೊಡಲಿಲ್ಲ ಅಂತ ಗಲಾಟೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಬುಧವಾರ ತಡರಾತ್ರಿ ಕುಡಿದ ಅಮಲಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದ ಕೆಎಸ್‍ಆರ್ ಟಿಸಿ ಸಂಸ್ಥೆಯ ನೌಕರನೊಬ್ಬ ದಾದಿಯ ಬಳಿ ಕಾಂಡೋಮ್ ಕೇಳಿದನಂತೆ. ಆದರೆ ಕಾಂಡೋಮ್ ಬಾಕ್ಸ್ ನಲ್ಲಿದೆ ತೆಗೆದುಕೊಳ್ಳಿ ಅಂತ ಹೇಳಿದ ದಾದಿಯ ಮೇಲೆ ಕ್ಯಾತೆ ತೆಗೆದ ಸರ್ಕಾರಿ ನೌಕರ ಕುಡಿದ ಅಮಲಿನಲ್ಲಿ ಜಗಳ ಮಾಡಿದ್ದಾನೆ.

ಈ ವೇಳೆ ದಾದಿ ತನ್ನ ಪತಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬಂದ ಗಂಡ ಸರ್ಕಾರಿ ನೌಕರನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಆರೋಪಿತ ಸರ್ಕಾರಿ ನೌಕರ ಎಂಬ ಕಾರಣಕ್ಕೆ ರಾಜೀ ಪಂಚಾಯತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ರವಿಶಂಕರ್, ಘಟನೆ ನಡೆದಿರುವುದು ಧೃಡವಾಗಿದ್ದು, ಕಳ್ಳತನ ಮಾಡಲು ಆರೋಪಿ ಆಸ್ಪತ್ರೆಗೆ ಬಂದಿದ್ದ ಅಂತ ದೂರು ನೀಡಲಾಗಿದೆ. ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ಸಂಬಂಧಪಟ್ಟ ವರದಿ ನೀಡಲು ಸ್ಥಳೀಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


ನಾಲಾ ಕಾಮಗಾರಿಯಲ್ಲಿ 27 ಕೋಟಿ ರೂ. ಕಿಕ್‍ಬ್ಯಾಕ್, ಎಂ.ಬಿ ಪಾಟೀಲರನ್ನ ನೇಣು ಹಾಕಿ: ಬಿಎಸ್‍ವೈ ಆಕ್ರೋಶ

$
0
0

ಬೆಂಗಳೂರು: ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ನಾಲಾ ಕಾಮಗಾರಿಯಲ್ಲಿ 27 ಕೋಟಿ ರೂ. ಲಂಚ ಪಡೆದಿದ್ದಾರೆಂದು ಬಿಎಸ್ ಯಡಿಯೂರಪ್ಪ ಆರೋಪ ಮಾಡಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದ ಎಂ.ಬಿ.ಪಾಟೀಲ್ ಮಣಿಸಲು ಬಿಜೆಪಿ ರಣತಂತ್ರ ಹೂಡಿದ್ದು, ಎಂ.ಬಿ ಪಾಟೀಲ್ ವಿರುದ್ಧ ದಾಖಲೆ ಸಮೇತ ಬಿಎಸ್‍ವೈ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಆರು ತಿಂಗಳಿನಿಂದ ಎಂ.ಬಿ.ಪಾಟೀಲ್ ವಿರುದ್ಧ ಗಂಭೀರ ಆರೋಪದ ದಾಖಲೆಯನ್ನ ಹುಡುಕಲು ಎನ್.ಆರ್.ರಮೇಶ್ ರನ್ನು ಬಿಟ್ಟಿದ್ದ ಬಿಎಸ್‍ವೈ, ಐದು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಕೊನೆ ಕ್ಷಣದಲ್ಲಿ ಖಚಿತ ದಾಖಲೆ ಹಿಡಿದು ಬಾಂಬ್ ಹಾಕಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಎಸ್‍ವೈ, ದೇಶದಲ್ಲೇ ಅತ್ಯಂತ ಭ್ರಷ್ಟಾಚಾರಿ ಸರ್ಕಾರ ಎಂದೇ ಕುಖ್ಯಾತಿಯನ್ನ ಗಳಿಸಿರುವ ಸಿದ್ದರಾಮಯ್ಯ ಅವರ ಕಮಿಷನ್ ಸರ್ಕಾರಕ್ಕೆ ಕೊನೆ ಇಲ್ಲದಂತಾಗಿದೆ. ಸಿದ್ದರಾಮಯ್ಯನವರು ಯಾವಾಗಲು ತನಗೆಷ್ಟು ಪಾಲು ಕಮಿಷನ್ ಬರುತ್ತೆ ಅಂತಾ ಯೋಚನೆ ಮಾಡ್ತಿರುತ್ತಾರೆ. 2016 ರಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ಸ್ಥಾಪನೆಯಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆಯ ಹೆಸರಿನಲ್ಲಿ ಸಾವಿರಾರು ಕೋಟಿ ಕಾಮಗಾರಿಗಳನ್ನ ಟೆಂಡರ್ ಕರೆಯದೇ ಭ್ರಷ್ಟಾಚಾರ ನಡೆದಿದೆ. ಈ ಅಕ್ರಮಕ್ಕೆ ಎಂ.ಬಿ.ಪಾಟೀಲ್ ಅವರೇ ಹೊಣೆಗಾರರು, ಅವರ ಆದೇಶ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಅಲ್ಲಾಡಲ್ಲ ಎಂದು ಕಿಡಿಕಾರಿದರು.

ಇದಲ್ಲದೇ ಚಿತ್ರದುರ್ಗ ಜಿಲ್ಲೆಯ ನಾಲಾ ಕಾಮಗಾರಿಗೆ 157 ಕೋಟಿ ವರ್ಕ್ ಆರ್ಡರ್ ನೀಡಿದ್ದಾರೆ. ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಕೇವಲ ಎರಡು ಕಂಪನಿಗಳು ಮಾತ್ರ ಭಾಗವಹಿಸಿದ್ದು, ಎಂ.ಬಿ.ಪಾಟೀಲ್ ಮತ್ತವರ ಆಪ್ತರು 27 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರೇ ನಿಮ್ಮ ಕಮಿಷನ್ ಎಷ್ಟು? ಎಂದು ಬಿಎಸ್‍ವೈ ಪ್ರಶ್ನಿಸಿದರು.

ರಸ್ತೆ ವಿಸ್ತೀರ್ಣದ ಹೆಸರಲ್ಲಿ ದಿನಾಂಕ 1-1-18 ರಂದು 157 ಕೋಟಿ 96 ಲಕ್ಷ ರೂ. ಅಕ್ರಮ ನಡೆದಿದೆ. ಎಸ್.ಎಸ್.ನ್ಯಾಷನಲ್ ಕನ್‍ಸ್ಟ್ರಕ್ಷನ್ ಲಿಮಿಟೆಡ್ ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದು, ಟೆಂಡರ್ ನಲ್ಲಿ ಎರಡು ಕಂಪೆನಿ ಮಾತ್ರ ಭಾಗಿಯಾಗಿದೆ. ನಿಯಮದ ಪ್ರಕಾರದಲ್ಲಿ ಆಯಾ ಸಂಸ್ಥೆಗಳ ಕಾಮಗಾರಿಗೆ ದೃಢೀಕರಣದ ಪತ್ರವನ್ನ ಸಲ್ಲಿಸಿರಬೇಕು ಮತ್ತು 50 ಲಕ್ಷ ರೂ. ಕಾಮಗಾರಿ ಮಾಡಿರಬೇಕು. ಆದರೆ ಈ ಕಂಪೆನಿ ಸುಳ್ಳು ಪ್ರಮಾಣ ಪತ್ರ ನೀಡಿದೆ. ಇದರ ಜೊತೆಗೆ ಅಮ್ಮಾ ಕನ್‍ಸ್ಟ್ರಕ್ಷನ್ ಕಂಪೆನಿ ಕೂಡ ನಕಲಿ ಪ್ರಮಾಣ ಪತ್ರ ನೀಡಿದೆ ಎಂದು ಬಿಎಸ್‍ವೈ ಗಂಭೀರ ಆರೋಪ ಮಾಡಿದರು.

ಈ ವರ್ಕ್ ಡನ್ ಸರ್ಟಿಫಿಕೇಟ್ ಸುಳ್ಳು. ಈ ಕಂಪನಿಗಳು 626ಕಿ.ಮೀ. ವಿಸ್ತೀರ್ಣದ ರಸ್ತೆ ಕಾಮಗಾರಿಯನ್ನ ಮಾಡಿರೋದಾಗಿ ನಕಲಿ ಸರ್ಟಿಫಿಕೇಟ್ ನೀಡಿವೆ. ಮಣಿಪುರ, ತ್ರಿಪುರ ಎರಡರಲ್ಲೂ ನೀಡಿದ ಸರ್ಟಿಫಿಕೇಟ್‍ನಲ್ಲಿ ಒಬ್ಬರೇ ಎಂಜಿನಿಯರ್ ಸಹಿ ಇದೆ. ಇದರಿಂದ ಇದು ನಕಲಿ ಎಂಬುದು ಸ್ಪಷ್ಟ ಆಗಿದೆ. ಈ ಅಕ್ರಮದಲ್ಲಿ ಎಂ.ಬಿ ಪಾಟೀಲ್ ಮತ್ತು ಅವರ ಆಪ್ತರು 25 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆ. ಈ ಎರಡು ಕಂಪನಿಗಳು ತಮಿಳುನಾಡಿಗೆ ಸೇರಿದ್ದು, ವರ್ಕ್ ಡನ್ ಸರ್ಟಿಫಿಕೇಟನ್ನು ಮಣಿಪುರ, ತ್ರಿಪುರದಿಂದ ತಂದಿದ್ದಾರೆ ಎಂದು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ ಸರ್ಕಾರ ಜನರ ದುಡ್ಡು ಹೀಗೆ ಲೂಟಿ ಹೊಡೆದು ಭ್ರಷ್ಟ ಸರ್ಕಾರ ಎಂದು ಸಾಬೀತುಪಡಿಸಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರ ಎಷ್ಟು? ನೀವು ಎಷ್ಟು ಕಮಿಷನ್ ಪಡೆದಿದ್ದೀರಿ ಎಂದು ಪ್ರಶ್ನಿಸಿ, ದಾಖಲೆಗಳನ್ನ ರಿಲೀಸ್ ಮಾಡಿದ ಬಿಎಸ್‍ವೈ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಜಲಸಂಪನ್ಮೂಲ ಇಲಾಖೆಯಲ್ಲಿ ಇದೇ ರೀತಿ ಹತ್ತಾರು ಪ್ರಕರಣಗಳು ನಡೆದಿವೆ. ಈ ಜಲಸಂಪನ್ಮೂಲ ಸಚಿವ ಇದಾನಲ್ಲ ಕಳೆದ 6 ತಿಂಗಳಿನಿಂದ ನನ್ನ ಮೇಲೆ ಐಟಿ ದಾಳಿ ಆಗುತ್ತೆ ಅಂತಾ ಹೇಳ್ತಿದ್ದ. ಈ ದೊಡ್ಡ ಮನುಷ್ಯನ ಮೇಲೆ ಇಲ್ಲಿಯವರೆಗೂ ಐಟಿ ದಾಳಿ ನಡೆದಿಲ್ಲ, ಅವನನ್ನ ಹ್ಯಾಂಗ್ ಮಾಡಬೇಕು ಎಂದು ಎಂ.ಬಿ ಪಾಟೀಲ್ ವಿರುದ್ಧ ಬಿಎಸ್‍ವೈ ಏಕವಚನದಲ್ಲಿಯೇ ವಾಗ್ದಾಳಿ ಮಾಡಿದ್ರು.

ಸಿದ್ದರಾಮಯ್ಯ ಹಗರಣ ಬಗ್ಗೆ ದಾಖಲೆ ಕೇಳಿದ್ರು, ಇವಾಗ ನಾವು ಬಿಡುಗಡೆ ಮಾಡಿರುವ ದಾಖಲೆ ನೋಡಿ ಹೇಳಲಿ. 24 ಗಂಟೆಯಲ್ಲಿ ನಮ್ಮ ಆರೋಪಕ್ಕೆ ಸರ್ಕಾರ ಉತ್ತರ ನೀಡಬೇಕು. ನಾಳೆ ಅಥವಾ ನಾಡಿದ್ದು ಇದಕ್ಕಿಂತ ದೊಡ್ಡ ಹಗರಣ ಬಯಲು ಮಾಡುತ್ತೇವೆ ಎಂದು ಬಿಎಸ್‍ವೈ ಸರ್ಕಾರಕ್ಕೆ ಸವಾಲು ಹಾಕಿದ್ರು.

ಶಾಸಕರ ಮನೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

$
0
0

ಬಾಗಲಕೋಟೆ: ಶಾಸಕರ ಮನೆ ಎದುರೇ ಮಹಿಳೆಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನಡೆದಿದೆ.

ಬಾದಾಮಿ ತಾಲೂಕು ಯರಗೊಪ್ಪ ಗ್ರಾಮದ ನಿವಾಸಿಶಾಂತವ್ವ ವಾಲಿಕಾರ (46) ಎಂಬುವರೇ ವಿಷ ಸೇವಿಸಿ ಮೃತಪಟ್ಟ ಮಹಿಳೆ. ಶಾಂತವ್ವರ ಸಾವಿಗೆ ಶಾಸಕ ಚಿಮ್ಮನಕಟ್ಟಿಯವರೇ ಕಾರಣ ಎಂದು ಆರೋಪಿಸುವ ಕುಟುಂಬಸ್ಥರು ಶಾಸಕರ ಮನೆಯ ಎದುರು ಧರಣಿ ನಡೆಸಿದ್ದಾರೆ.

ಈ ವೇಳೆ ಪ್ರತಿಭಟನಾ ನಿರತರು ಶಾಸಕ ಚಿಮ್ಮನಕಟ್ಟಿ ಭಾವಚಿತ್ರವಿರುವ ಫ್ಲೆಕ್ಸ್ ಕಿತ್ತು ಹಾಕಲು ಮುಂದಾಗಿದ್ದು, ಇದರಿಂದ ಶಾಸಕರ ಬೆಂಬಲಿಗರು ಹಾಗೂ ಪ್ರತಿಭಟನಾಕಾರ ನಡುವೆ ವಾಗ್ದಾದಕ್ಕೆ ಕಾರಣವಾಯಿತು. ಪ್ರತಿಭಟನಾಕಾರರು ಶಾಸಕರ ಬೆಂಬಲಿಗನ ಮೇಲೆ ಹಲ್ಲೆ ನಡೆಸಿದ ಘಟನೆಯೂ ನಡೆಯಿತು.

ಏನಿದು ಘಟನೆ: ಮೂರು ವರ್ಷದ ಹಿಂದೆ ಮೃತ ಶಾಂತವ್ವ ಅವರ ಪತಿ ಗೋವಿಂದಪ್ಪ ವಾಲಿಕಾರ ನಿಧನರಾಗಿದ್ದರು. ಗೋವಿಂದಪ್ಪ ಅವರು ಮುತ್ತಲಗೇರಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮಸೇವಕ ಕೆಲಸ ನಿರ್ವಹಿಸುತ್ತಿದ್ದರು. ಪತಿಯ ಮರಣದ ನಂತರ ಅನುಕಂಪಕದ ಆಧಾರದ ಮೇಲೆ ಆ ಕೆಲಸವನ್ನು ತಮ್ಮ ಮಗನಿಗೆ ನೀಡಿ ಎಂದು ಶಾಸಕ ಬಿ.ಬಿ.ಚಿಮ್ಮನಕಟ್ಟಿ ಸೇರಿದಂತೆ ಅಧಿಕಾರಿಗಳ ಬಳಿ ಶಾಂತವ್ವ ಮನವಿ ಮಾಡಿಕೊಂಡಿದ್ದರು.

ಶಾಸಕರ ಹೇಳಿಕೆ ಮೇರೆಗೆ ಸ್ವಜಾತಿಯವರಿಗೆ ಗ್ರಾಮಸೇವಕ ಕೆಲಸ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಮನನೊಂದ ಶಾಂತವ್ವ ಶಾಸಕರ ಮನೆಯ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಬಾಗಲಕೋಟೆ ಉಪವಿಭಾಗಾಧಿಕಾರಿ ಜಯಾ ಭೇಟಿ ನೀಡಿ ಧರಣಿ ನಿರತರ ಅಹವಾಲು ಸ್ವೀಕರಿಸಿದರು. ಘಟನೆಯಿಂದ ನಗರದಾದ್ಯಂತ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು.

ತನ್ನತ್ತ ಪೋಷಕರನ್ನು ಸೆಳೆಯಲು ಪ್ಲಾನ್ ಮಾಡಿತು ಹಾಲುಗಲ್ಲದ ಕಂದಮ್ಮ-ವಿಡಿಯೋ ನೋಡಿ

$
0
0

ನವದೆಹಲಿ: ಸ್ಮಾರ್ಟ್ ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಹೆಚ್ಚು ಬುದ್ಧಿವಂತರಾಗುತ್ತಿದ್ದಾರೆ. ಪೋಷಕರ ಗಮನ ಸೆಳೆಯಲು ಕಣ್ಣೀರು ಹಾಕುವುದೇ ಸುಲಭ ಎಂದು ಆರ್ಥೈಸಿಕೊಂಡಿರುವ ಮುದ್ದು ಕಂದಮ್ಮನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೋಷಕರು ತನ್ನನ್ನು ಗಮನಿಸುತ್ತಿಲ್ಲ ಎಂದು ತಿಳಿದ ಮಗು ಅವರ ಗಮನ ತನ್ನತ್ತ ಸೆಳೆಯಲು ಅಳುವಂತೆ ನಟಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮಗು ಅಳುವುದಕ್ಕು ಮುನ್ನ ತನ್ನನ್ನು ಯಾರಾದ್ರು ಗಮನಿಸುತ್ತಿದ್ದಾರ? ಇಲ್ಲವಾ? ಎಂದು ಖಚಿತ ಪಡಿಸಿಕೊಂಡು ಬಳಿಕ ಜೋರಾಗಿ ಅಳಲು ಆರಂಭಿಸಿದೆ. ಸ್ವಲ್ಪ ಸಮಯ ಅತ್ತ ನಂತರ ಅಳು ನಿಲ್ಲಿಸಿ ಎಲ್ಲರನ್ನು ಗಮನಿಸಿ ಮತ್ತೆ ಅಳಲು ಪ್ರಾರಂಭಿಸಿದೆ. ಈ ವೇಳೆ ಮಗು ತುಂಬಾ ಆಳುತ್ತಿರುವುದನ್ನು ಕಂಡ ಪೋಷಕರು ಸಾಂತ್ವನ ಮಾಡಲು ಪ್ರಯತ್ನಿಸಿದ್ದು, ನಂತರ ಮಗು ಅಳುವುದನ್ನು ನಿಲ್ಲಿಸಿದೆ.

ಸದ್ಯ ಪೋಷಕರು ತಮ್ಮ ಮಗುವಿನ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು, ವಿಡಿಯೋ ನೋಡಿದ ಹಲವರು ಮಗುವಿನ ಸ್ಮಾರ್ಟ್ ಯೋಚನೆಗೆ ಅಶ್ಚರ್ಯಗೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಎಲ್ಲಿ ಸೆರೆಹಿಡಿಯಲಾಗಿದೆ ಎಂಬುವುದು ಸರಿಯಾಗಿ ತಿಳಿದುಬಂದಿಲ್ಲ.

‘ಏಕ್ ದೋ ತೀನ್ ಚಾರ್’ರೀಮೇಕ್ ಹಾಡಿಗೆ ಹೆಜ್ಜೆ ಹಾಕಿ ಮಾಧುರಿಗೆ ಕಾಲ್ ಮಾಡಿದ ಜಾಕ್ವೇಲಿನ್!

$
0
0

ಮುಂಬೈ: ಬಾಲಿವುಡ್ ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ಅವರ 80 ರ ದಶಕದ ಫೇಮಸ್ `ಎಕ್ ದೋ ತೀನ್ ಚಾರ್’ ಹಾಡಿನ ರಿಮೇಕ್‍ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಇತ್ತ ಮಾಧುರಿ ದೀಕ್ಷಿತ್ ಸಹ ಮುನಿಸಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ.

ಕೆಲವು ದಿನಗಳ ಹಿಂದೆ ಟೈಗರ್ ಶ್ರಾಫ್ ಅಭಿನಯದ `ಭಾಗಿ-2′ ಸಿನಿಮಾದ ಹಾಡೊಂದು ರಿಲೀಸ್ ಆಗಿದೆ. ಈ ಹಿಂದೆ ಮಾಧುರಿ ದೀಕ್ಷಿತ್ ನರ್ತಿಸಿದ ಹಾಡಿನ ನ್ಯೂ ವರ್ಷನ್ ಗೆ ಮರ್ಡರ್-2 ಖ್ಯಾತಿಯ ಸುಂದರಿ ಜಾಕ್ವೇಲಿನ್ ಹಜ್ಜೆ ಹಾಕಿದ್ದಾರೆ. ಆದ್ರೆ ಜಾಕ್ವೇಲಿನ್ ತುಂಬಾ ಸೆಕ್ಸಿಯಾಗಿ ಕಾಣಿಸಿಕೊಂಡಿದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಮಾಧುರಿಗೆ ಕಾಲ್ ಮಾಡಿದ ಜಾಕ್ವೇಲಿನ್: ಜಾಕ್ವೇಲಿನ್ ಯೂ ಟ್ಯೂಬ್ ನಲ್ಲಿ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದ್ದಂತೆ ಮಾಧುರಿ ದೀಕ್ಷಿತ್ ಅವ್ರಿಗೆ ಕಾಲ್ ಮಾಡಿದ್ದಾರೆ. ಆದ್ರೆ ಮಾಧುರಿ ಮಾತ್ರ ಕಾಲ್ ರಿಸೀವ್ ಮಾಡದೇ ಅಸಮಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೂ ಸುಮ್ಮನಾಗದ ಜಾಕ್ವೇಲಿನ ‘ಏಕ್ ದೋ ತೀನ್ ಚಾರ್’ ಹಾಡಿನ ಮೂಲಕ ನಾನು ನಿಮಗೆ ಗೌರವ ಸಲ್ಲಿಸುತ್ತಿದ್ದೇನೆ ಎಂಬ ಸಂದೇಶವನ್ನು ಸಹ ರವಾನೆ ಮಾಡಿದ್ದು, ಮಾಧುರಿ ಮಾತ್ರ ಯಾವುದಕ್ಕೂ ಉತ್ತರ ನೀಡಿಲ್ಲ ಅಂತಾ ಹೇಳಲಾಗುತ್ತಿದೆ.

1988ರಲ್ಲಿ ತೆರೆಕಂಡ ‘ತೇಜಾಬ್’ ಚಿತ್ರದಲ್ಲಿನ ಏಕ್ ದೋ ತೀನ್ ಹಾಡಿಗೆ ಬಾಲಿವುಡ್‍ನ ಖ್ಯಾತ ನೃತ್ಯ ಸಂಯೋಜಕಿಯಾದ ಸರೋಜ್ ಖಾನ್ ಕೊರಿಯೊಗ್ರಾಫಿ ಮಾಡಿದ್ರು. ಸರೋಜ್ ಖಾನ್ ಸಹ ಜಾಕ್ವೇಲಿನ್ ನ ಸೆಕ್ಸಿ ಮೂವ್ ಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜನ ಇಂದಿಗೂ ಮಾಧುರಿ ದೀಕ್ಷಿತ್ ರನ್ನು ಏಕ್ ದೋ ತೀನ್ ಹಾಡಿನ ಮೂಲಕವೇ ಗುರುತಿಸ್ತಾರೆ.

ಈ ಹಿಂದೆ ಮಾಧುರಿ ಅಭಿನಯದ ‘ಥಾಣೇದಾರ್’ ಸಿನಿಮಾದ ‘ತಮ್ಮಾ.. ತಮ್ಮಾ..’ ಹಾಡಿಗೆ `ಬದ್ರಿನಾಥ್ ಕೀ ದುಲ್ಹನಿಯಾ’ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ವರುಣ್ ಧವನ್ ಹೆಜ್ಜೆ ಹಾಕಿದ್ರು. ಈ ವೇಳೆ ಮಾಧುರಿ ದೀಕ್ಷಿತ್ ಇಬ್ಬರ ಡ್ಯಾನ್ಸ್ ಗೂ ಮೆಚ್ಚುಗೆಯನ್ನು ಸೂಚಿಸಿದ್ರು. ಆದ್ರೆ ಈ ಬಾರಿ ಜಾಕ್ವೇಲಿನ್ ಸೆಕ್ಸಿ ಮೂವ್ಸ್ ಗಳಿಗೆ ಮಾಧುರಿ ದೀಕ್ಷಿತ್ ಬೇಸರವಾದಂತೆ ಕಾಣಿಸುತ್ತಿದೆ.

ತನ್ನ ಒಂದು ಪೇಟಿಂಗ್‍ನಿಂದಾಗಿ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ 87ರ ಅಜ್ಜಿ

$
0
0

ಲಂಡನ್: ಅಜ್ಜ-ಅಜ್ಜಿಯರು ಹೆಚ್ಚಾಗಿ ಉದ್ಯಾನವನದಲ್ಲಿ, ತಮ್ಮ ಮೊಮ್ಮಕ್ಕಳ ಜೊತೆ ಆಟವಾಡುತ್ತ ಅಥವಾ ಟಿವಿ ನೋಡುತ್ತ ಕಾಲ ಕಳೆಯುತ್ತಾರೆ. ಆದರೆ ಲಂಡನ್ ಅಜ್ಜಿಯೊಬ್ಬರು ಮೈಕ್ರೋಸಾಫ್ಟ್ ಪೇಂಟ್ ಬಳಸಿ ಅದ್ಭುತವಾದ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಕ್ವಾಚಾ ಗಾರ್ಸಿಯಾ ಝೈರಾ (87) ಅದ್ಭುತ ಚಿತ್ರ ಬಿಡಿಸಿದ ಮಹಿಳೆ. ಸಾಮಾನ್ಯವಾಗಿ ಕಂಪ್ಯೂಟರ್ ನ ಮೈಕ್ರೋಸಾಫ್ಟ್ ಪೇಂಟ್ ಬಳಸಿ ಚಿತ್ರಗಳನ್ನು ಬಿಡಿಸಿದ್ದು, ಈ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ.

ಕ್ವಾಚಾ ಅವರು ತಾವು ಬಿಡಿಸಿರುವ ಈ ಚಿತ್ರಗಳನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ತಮ್ಮ ಮೊಮ್ಮಕ್ಕಳ ಸಲಹೆ ಮೇರೆಗೆ ಇನ್ ಸ್ಟಾಗ್ರಾಮ್ ನಲ್ಲಿಯೂ ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ಹಂಚಿಕೊಳ್ಳುವ ಮುನ್ನ ಅಂದರೆ ಮಾರ್ಚ್ 9 ಇವರ ಖಾತೆಗೆ ಕೇವಲ 300 ಮಂದಿ ಫಾಲೋವರ್ಸ್ ಗಳನ್ನು ಹೊಂದಿದ್ದರು. ಆದರೆ ಈ ಚಿತ್ರಗಳನ್ನು ಹಂಚಿಕೊಂಡ ಅಲ್ಪ ಸಮಯದಲ್ಲಿ 1.36 ಲಕ್ಷ ಜನರು ಅಜ್ಜಿಯನ್ನು ಇನ್ ಸ್ಟಾಗ್ರಾಂನಲ್ಲಿ ಫಾಲೋ ಮಾಡ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕ್ವಾಚಾ, `ನನ್ನ ಪತಿ ಅನಾರೋಗ್ಯಕ್ಕೆ ಒಳಗಾದ ಮೇಲೆ ನಾನು ಅವರನ್ನು ನೋಡಿಕೊಳ್ಳಬೇಕಿತ್ತು. ನನಗೆ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಈ ವೇಳೆ ತಮ್ಮ ಪತಿ ನನಗೆ ಪೋಸ್ಟ್ ಮಾಡಿದ್ದ ಕಾರ್ಡ್ ಗಳಿಂದ ಸ್ಫೂರ್ತಿ ಪಡೆದು ಈ ಚಿತ್ರಗಳನ್ನು ಬಿಡಿಸಲು ಪ್ರಯತ್ನಿಸಿದ್ದೆನೆಂದು ಹೇಳಿದ್ದಾರೆ.

ಈ ಮುನ್ನ ಕ್ವಾಚಾ ಅವರ ಮಕ್ಕಳು ಇವರಿಗೆ ಸಮಯ ಕಳೆಯಲು ಕಂಪ್ಯೂಟರ್ ಒಂದನ್ನು ತಂದುಕೊಟ್ಟಿದ್ದರು. ಆಗ ಅವರು ಎಂಎಸ್ ಪೇಂಟ್ ನಲ್ಲಿ ಸಣ್ಣ ಮನೆ, ಮರಗಳನ್ನು ಬಿಡಿಸಲು ಪ್ರಾರಂಭಿಸಿದರು. ಬಳಿಕ ಇದು ಹವ್ಯಾಸವಾಗಿ ಸುಂದರ ಚಿತ್ರಗಳನ್ನು ಬಿಡಿಸಿದ್ದಾರೆ.

ಕ್ವಾಚಾ ಅವರ ಈ ಚಿತ್ರಗಳನ್ನು ಗಮನಿಸಿದ್ರೆ ಎಂಎಸ್ ಪೈಂಟ್ ಮೂಲಕ ಇಂತಹ ಚಿತ್ರ ಬಿಡಿಸಲು ಕಷ್ಟ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತವಾಗುತ್ತದೆ.

Viewing all 71391 articles
Browse latest View live




Latest Images